ರಾಮನಗರದಲ್ಲಿ ‘ಜೋಡಿ ಆನೆ’ಗಳ ಹಾವಳಿ; ಬೆಚ್ಚಿ ಬಿದ್ದ ಸಾರ್ವಜನಿಕರು

ರಾಮನಗರದಲ್ಲಿ ‘ಜೋಡಿ ಆನೆ’ಗಳ ಹಾವಳಿ; ಬೆಚ್ಚಿ ಬಿದ್ದ ಸಾರ್ವಜನಿಕರು

ರಾಮನಗರ: ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ದೊಡ್ಡನಹಳ್ಳಿಯಲ್ಲಿ ಎರಡು ಕಾಡಾನೆಗಳು ಪ್ರತ್ಯಕ್ಷವಾಗಿವೆ.

ಗ್ರಾಮದಲ್ಲಿರುವ ಮಾವಿನ ತೋಟದಲ್ಲಿ ಜೋಡಿ ಆನೆಗಳು ನಡೆದುಕೊಂಡು ಹೋಗಿವೆ. ಈ ವೇಳೆ ಆನೆ ಕಂಡ ಜನರು ಜೋರಾಗಿ ಕೂಗುತ್ತಾ ಓಡಿಸಲು ಮುಂದಾಗಿದ್ದಾರೆ. ಇನ್ನು, ಇತ್ತೀಚೆಗೆ ಚನ್ನಪಟ್ಟಣದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ.

blank

ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ರು, ಯಾವುದೇ ಕ್ರಮ ಕೈಗೊಂಡಿಲ್ಲ ಅಂತಾ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಜೋಡಿಯಾಗಿ ತಿರುಗುವ ಈ ಆನೆಗಳನ್ನ ಕಂಡು ಸಾರ್ವಜನಿಕರೂ ಕೂಡ ಬೆಚ್ಚಿ ಬಿದ್ದಿದ್ದಾರೆ.

Source: newsfirstlive.com Source link