ಬಿಗ್ ಬುಲೆಟಿನ್ | September 3, 2021 | ಭಾಗ-2

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಭಾರೀ ಮಳೆಯಾಗಿದೆ. ಕೆಂಗೇರಿ, ರಾಜಾನುಕುಂಟೆ, ನಂದಿನಿಲೇಔಟ್ ಸೇರಿದಂತೆ ಹಲವೆಡೆ ಧಾರಾಕಾರ ಮಳೆ ಸುರಿದಿದ್ದು, ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ. ಹಲವು ಅಂಡರ್ ಪಾಸ್‍ಗಳು ಭರ್ತಿಯಾಗಿ, ರಸ್ತೆ ತುಂಬೆಲ್ಲ ನೀರು ಹರಿದಿದೆ. ಗಾಲ್ಫ್ ಕೋರ್ಟ್ ಬಳಿಯ ಅಂಡರ್‍ಪಾಸ್‍ನಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದ್ರು. ನಂದಿನಿಲೇಔಟ್‍ನ ತಗ್ಗು ಪ್ರದೇಶದ ಮನೆಗಳಿಗೆ ನೀರುನುಗ್ಗಿ ಜನ ಜಾಗರಣೆ ಮಾಡಿದ್ದಾರೆ. ಬೆಮೆಲ್ ಲೇಔಟ್‍ನಲ್ಲಿ ಮರವೊಂದು ಮನೆ ಬಾಗಿಲಿಗೆ ಉರುಳಿ ಜನ ಪರದಾಡುತ್ತಿದ್ದಾರೆ. ಕೆಂಗೇರಿಯಲ್ಲಿ 69.5 ಮಿಲಿಮೀಟರ್, ರಾಜಾನುಕುಂಟೆಯಲ್ಲಿ 67.5 ಮಿಲಿಮೀಟರ್, ಆನೇಕಲ್‍ನಲ್ಲಿ 64.5 ಮಿಲಿಮೀಟರ್ ಮಳೆ ಆಗಿದೆ.

 

Source: publictv.in Source link