ಪೇಜಾವರಶ್ರೀ ಚಾತುರ್ಮಾಸ್ಯ ವೃತಾಚರಣೆ- ಮೂರು ದಲಿತ ಬಡಾವಣೆಗಳಿಗೆ ಭೇಟಿ, ಪ್ರಸಾದ ವಿತರಣೆ

ಉಡುಪಿ: ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಬೆಂಗಳೂರಿನ ಪೇಜಾವರ ಮಠದಲ್ಲಿ 34 ನೇ ಚಾತುರ್ಮಾಸ್ಯ ಕುಳಿತಿದ್ದಾರೆ. ವೃತಾಚರಣೆ ನಡುವೆ ದಲಿತ ಬಡಾವಣೆಗಳಿಗೆ ಭೇಟಿ ಕೊಟ್ಟು ಕೃಷ್ಣಪ್ರಸಾದ ಹಂಚಿದ್ದಾರೆ.

ಬೆಂಗಳೂರಿನ ರಾಮಕೃಷ್ಣ ಮಠ ಬಡಾವಣೆಯ ಗವಿಪುರ, ಗುಟ್ಟಳ್ಳಿ, ಕೆ. ಜಿ ನಗರ ಇಲ್ಲಿನ ದಲಿತರು ವಾಸಿಸುವ ಬಡಾವಣೆಗೆ ಪೇಜಾವರಶ್ರೀ ಭೇಟಿ ಕೊಟ್ಟಿದ್ದಾರೆ. ಪೇಜಾವರ ಸ್ವಾಮೀಜಿಗಳಿಗೆ ಮಾದಾರ ಚೆನ್ನಯ್ಯ ಸ್ವಾಮೀಜಿ ಜೊತೆಯಾಗಿದ್ದಾರೆ. ಶ್ರೀಗಳ ಕಾಲೋನಿ ಯಾತ್ರೆಯಿಂದ ಏರಿಯ ತುಂಬೆಲ್ಲ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಇದನ್ನೂ ಓದಿ: ಪೂಜೆ ಮಾಡಿಕೊಂಡು ಹೋಗು ಅಂದ್ರೆ ದೇವಾಲಯವೇ ತನ್ನದೆಂದ ಪೂಜಾರಿ – ಗ್ರಾಮಸ್ಥರಿಂದ ಪ್ರತಿಭಟನೆ

ಮೂರು ಕಾಲೋನಿಗಳನ್ನು ತಳಿರು ತೋರಣಗಳಿಂದ ಜನ ಅಲಂಕರಿಸಿದ್ದರು. ಕೃಷ್ಣ ವೇಷ ತೊಟ್ಟ ಹತ್ತಾರು ಪುಟಾಣಿಗಳು ಸ್ವಾಮೀಜಿಗಳನ್ನು ಸ್ವಾಗತ ಮಾಡಿದರು. ಬೆಂಗಳೂರು ರಾಮಕೃಷ್ಣಾಶ್ರಮದ ಪ್ರಮುಖರಾದ ಧರ್ಮರತಾನಂದ ಜೀ ಮತ್ತು ವೀರೇಶಾನಂದ ಜೀ ಸ್ವಾಮೀಜಿಯವರುಗಳನ್ನು ಆಮಂತ್ರಿಸಲು ಬಡಾವಣೆಯ ನಿವಾಸಿಗಳು ಪ್ರೀತಿಯಿಂದ ಸ್ವಾಗತ ಮಾಡಿದರು. ಆರಂಭದಲ್ಲಿ ಚಂಡಿಕಾದುರ್ಗೆಯ ಮಂದಿರಕ್ಕೆ ಬರಮಾಡಿಕೊಂಡರು. ಇದನ್ನೂ ಓದಿ:  ಹೊಸ ಕಾರು ಖರೀದಿಸಿದ ಬಿಗ್‍ಬಾಸ್ ಸ್ಪರ್ಧಿ ಧನುಶ್ರೀ

blank

ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ಕಾಲೋನಿಯಲ್ಲೇ ಧರ್ಮಸಭೆ ನಡೆಯಿತು. ಸಾಮೂಹಿಕ ರಾಮನಾಮ ಕೃಷ್ಣಾಷ್ಟಕ ಭಜನೆ ನಡೆಯಿತು. ವಿಹಿಂಪ ಪ್ರಮುಖರು, ಮುಖಂಡರು ಉಪಸ್ಥಿತರಿದ್ದರು. ತಮಿಳು ಭಾಷಿಗರು ಹೆಚ್ಚಾಗಿರುವ ಬಡಾವಣೆಲ್ಲಿ ಪೇಜಾವರ ಶ್ರೀಗಳು ತಮಿಳು ಭಾಷೆಯಲ್ಲೂ ಆಶೀರ್ವಚನ ನೀಡಿದರು. ಪೇಜಾವರ ಮಠದ ವತಿಯಿಂದ ದಲಿತ ಬಡಾವಣೆಯ ಎಲ್ಲರಿಗೂ ಕೃಷ್ಣಜನ್ಮಾಷ್ಟಮಿ ಪ್ರಸಾದ ವಿತರಿಸಲಾಯಿತು.

Source: publictv.in Source link