ಹೊಸ ಕಾರು ಖರೀದಿಸಿದ ಬಿಗ್‍ಬಾಸ್ ಸ್ಪರ್ಧಿ ಧನುಶ್ರೀ

ಬೆಂಗಳೂರು: ಸೋಶಿಯಲ್ ಮೀಡಿಯಾ ಸ್ಟಾರ್ ಹಾಗೂ ಬಿಗ್‍ಬಾಸ್ ಸ್ಪರ್ಧಿ  ಧನುಶ್ರೀ ಅವರು ದುಬಾರಿ ಬೆಲೆಯ ಕಾರ್ ಖರೀದಿ ಮಾಡಿದ್ದಾರೆ.

ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ. ಇದು ಮೊದಲ ಹೆಜ್ಜೆ. ಸುಲಭದ ಕೆಲಸ ಅಂತೆಲ್ಲಾ ಜನ ಮಾತನಾಡಿಕೊಳ್ಳಬಹುದು. ಆದರೆ ಯಾವುದೇ ಕೆಲಸವಾಗಲಿ, ಅದಕ್ಕೆ ಅದರದ್ದೇ ಆದ ಸವಾಲುಗಳು ಇರುತ್ತವೆ. ನಾನು ಪಟ್ಟಿರುವ ಕಷ್ಟ, ಹಾಕಿರುವ ಪರಿಶ್ರಮಕ್ಕೆ ನನಗೆ ನಾನೇ ಧನ್ಯವಾದಗಳನ್ನು ಹೇಳಿಕೊಳ್ಳುತ್ತೇನೆ. ನನಗೆ ಸಪೋರ್ಟ್ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು ಬರೆದುಕೊಂಡು ಹೊಸ ಕಾರ್ ಮುಂದೆ ನಿಂತಿರುವ ಮತ್ತು ಶೋರೂಮ್‍ನಲ್ಲಿ ಕಾರ್ ಖರೀದಿ ಮಾಡುತ್ತೀರವ ಫೋಟೋವನ್ನು ಇನ್ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

 

View this post on Instagram

 

A post shared by DHANUSHREE🦋 (@dhanushree7_)

ಕನ್ನಡದ ಕೆಲ ಚಿತ್ರಗಳಲ್ಲೂ ಅಭಿನಯಿಸುತ್ತಿರುವ ಧನುಶ್ರೀ ಇದೀಗ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ ಕಾರು ಖರೀದಿಸಿರುವ ವಿಚಾರವಾಗಿದೆ. ಧನುಶ್ರೀ ಹೊಸ ಕಾರು ಖರೀದಿ ಮಾಡಿದ್ದಾರೆ. ನೀಲಿ ಬಣ್ಣದ ಹೊಸ ಕಾರನ್ನು ಧನುಶ್ರೀ ಕೊಂಡುಕೊಂಡಿದ್ದಾರೆ. ಹೊಸ ಕಾರಿನ ಜೊತೆಗೆ ತಾವು ಕ್ಲಿಕ್ ಮಾಡಿಸಿಕೊಂಡ ಫೋಟೋಗಳನ್ನೂ ಸೋಷಿಯಲ್ ಮೀಡಿಯಾದಲ್ಲಿ ಧನುಶ್ರೀ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಚಿನ್ನಿ ಬಾಂಬ್ ಜೊತೆ ಶ್ರೀ ಕ್ಷೇತ್ರಕ್ಕೆ ಭೇಟಿ ಕೊಟ್ಟ ಶುಭಾ ಪೂಂಜಾ

 

View this post on Instagram

 

A post shared by DHANUSHREE🦋 (@dhanushree7_)

ಸೋಶಿಯಲ್ ಮೀಡಯಾದಲ್ಲಿ ಲಕ್ಷಾಂತರ ಮಂದಿ ಫಾಲೋವರ್ಸ್ ಹೊಂದಿದ್ದ ಧನುಶ್ರೀ ಹೆಚ್ಚು ಖ್ಯಾತಿ ಪಡೆದಿದ್ದು, ಬಿಗ್ ಬಾಸ್ ಕನ್ನಡ 8 ಕಾರ್ಯಕ್ರಮದ ಮೂಲಕ. ಬಿಗ್‍ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ ಧನುಶ್ರೀ ಮೊದಲನೇ ವಾರ ಎಲಿಮಿನೇಟ್ ಆಗ್ಬಿಟ್ಟರು. ಬಿಗ್‍ಬಾಸ್ ಅಭಿಮಾನಿಗಳ ಮನದಲ್ಲಿ ಧನುಶ್ರೀ ನೆಲೆಯೂರಿದ್ದಾರೆ. ಇದನ್ನೂ ಓದಿ: ದಾರಿಯಲ್ಲಿ ಸಿಕ್ಕಿದ್ದ ಚಿನ್ನವನ್ನು ಪೊಲೀಸರಿಗೆ ಒಪ್ಪಿಸಿದ ಗ್ರಾ.ಪಂ ಸದಸ್ಯ

blank

ಬಿಗ್‍ಬಾಸ್ ಮನೆಯಿಂದ ಬರುತ್ತಿದ್ದಂತೆ ಸಾಕಷ್ಟು ಸಿನಿಮಾ ಮತ್ತು ಫೋಟೋ ಶೂಟ್‍ನಲ್ಲಿ ಬ್ಯುಸಿಯಾಗಿದ್ದ ಧನುಶ್ರೀ ಇದೀಗ ಹೊಸ ಕಾರ್ ಝರೀದಿ ಮಾಡಿರುವ ಸಂತೋಷದಲ್ಲಿ ಇದ್ದಾರೆ. ಈ ವಿಚಾರವನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದು ಮೆಚ್ಚುಗೆ ಸೂಚಿಸುವುದ ಜೊತೆಗೆ ಶುಭ ಹಾರೈಸುತ್ತಿದ್ದಾರೆ.

Source: publictv.in Source link