ತಾಲಿಬಾನಿಗಳು ಸಂಸ್ಕಾರದಿಂದ ನಡೆದುಕೊಂಡ್ರೆ ಉತ್ತಮ -ರಷ್ಯಾ ಅಧ್ಯಕ್ಷ ಪುಟಿನ್ ವಾರ್ನಿಂಗ್

ತಾಲಿಬಾನಿಗಳು ಸಂಸ್ಕಾರದಿಂದ ನಡೆದುಕೊಂಡ್ರೆ ಉತ್ತಮ -ರಷ್ಯಾ ಅಧ್ಯಕ್ಷ ಪುಟಿನ್ ವಾರ್ನಿಂಗ್

ಕಾಬೂಲ್​ ಜೊತೆಗಿನ ರಾಜತಾಂತ್ರಿಕ ವಿಚಾರದಲ್ಲಿ ತಾಲಿಬಾನಿಗಳು ನಾಗರೀಕತೆಯಂತೆ ವರ್ತಿಸುತ್ತಾರೆ ಎಂಬ ಭರವಸೆ ಇದೆ ಎಂದು ರಷ್ಯಾ ಅಧ್ಯಕ್ಷ ಪುಟಿನ್ ಹೇಳಿದ್ದಾರೆ.

ಅಫ್ಘಾನ್​ ಬೇರೆ ರಾಷ್ಟ್ರಗಳಿಂದ ಪ್ರತ್ಯೇಕವಾಗಿ ಉಳಿಯಲಿ ಅಂತ ಯಾರೂ ಬಯಸಲ್ಲ. ಒಂದು ವೇಳೆ ಅಫ್ಘಾನ್​ ಬೇರೆ ರಾಷ್ಟ್ರಗಳಿಂದ ಪ್ರತ್ಯೇಕವಾದ್ರೆ ಯಾರೂ ಅವರೊಂದಿಗೆ ಮಾತನಾಡಲು ಇಷ್ಟಪಡಲ್ಲ ಅಂತ ಪುಟಿನ್​ ಹೇಳಿದರು.

ಇನ್ನು, ಅಧಿಕಾರ ನಡೆಸಲಿರುವ ತಾಲಿಬಾನಿಗಳು ಸಂಸ್ಕಾರದಿಂದ ನಡೆದುಕೊಂಡರೆ ಎಲ್ಲರಿಗೂ ಉತ್ತಮ ಅಂತ ತಾಲಿಬಾನಿಗಳಿಗೆ ವ್ಲಾಡಿಮಿರ್​ ಪುಟಿನ್​ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ‘ಕಾಶ್ಮೀರದ ಮುಸ್ಲಿಮರ ಪರ ದನಿ ಎತ್ತಲಿದ್ದೇವೆ’ ಎಂದು ಭಾರತವನ್ನೇ ಕೆಣಕಿದ ತಾಲಿಬಾನ್​​…

Source: newsfirstlive.com Source link