ಮದ್ಯ ಕುಡಿಸಿ ಯುವತಿ ಮೇಲೆ ಅತ್ಯಾಚಾರ ಆರೋಪ; ಇಬ್ಬರು ನೈಜೀರಿಯನ್ ಪ್ರಜೆಗಳು ಅರೆಸ್ಟ್

ಮದ್ಯ ಕುಡಿಸಿ ಯುವತಿ ಮೇಲೆ ಅತ್ಯಾಚಾರ ಆರೋಪ; ಇಬ್ಬರು ನೈಜೀರಿಯನ್ ಪ್ರಜೆಗಳು ಅರೆಸ್ಟ್

ಬೆಂಗಳೂರು: ಮಹಿಳಾ ಟೆಕ್ಕಿಗೆ ಮದ್ಯ ಕುಡಿಸಿ ಅತ್ಯಾಚಾರ ಎಸಗಿದ ಆರೋಪ ಹಿನ್ನೆಲೆ ಬಾಣಸವಾಡಿ ಠಾಣಾ ಪೊಲೀಸರು ಇಬ್ಬರು ನೈಜೀರಿಯಾ ಪ್ರಜೆಗಳನ್ನು ಬಂಧಿಸಿದ್ದಾರೆ. ಟೋನಿ (35) ಹಾಗೂ ಉಬಾಕಾ (36) ಬಂಧಿತರು.

ನಗರದ ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟವೇರ್ ಉದ್ಯೋಗಿಯಾಗಿದ್ದ ಸಂತ್ರಸ್ತ ಯುವತಿಗೆ ಆರೋಪಿ ಟೋನಿ ಹಲವು ವರ್ಷಗಳಿಂದ ಪರಿಚಿತನಾಗಿದ್ದನಂತೆ. ಮತ್ತೋರ್ವ ಆರೋಪಿ ಉಬಾಕ ಯುವತಿಯನ್ನ ಪರಿಚಯಿಸಿಕೊಳ್ಳಲು ಯತ್ನಿಸಿದ್ದನಂತೆ. ಆ.29ರಂದು ಸ್ನೇಹಿತರ ಮನೆಗೆಂದು ಯುವತಿಯನ್ನ ಟೋನಿ ಕರೆದೊಯ್ದಿದ್ದ. ಬಳಿಕ ಮೂವರೂ ಜೊತೆಗೆ ಕುಳಿತು ಮದ್ಯ ಸೇವಿಸಿದ್ದರು.. ಕುಡಿದ ಮತ್ತಿನಲ್ಲಿದ್ದಾಗ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಯುವತಿ ಬಾಣಸವಾಡಿ ಠಾಣಾ ಮೆಟ್ಟಿಲೇರಿದ್ದರು.

ಇದನ್ನೂ ಓದಿ: ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ ಕೇಸ್​​; ಒಬ್ಬ ಆರೋಪಿ ಅರೆಸ್ಟ್​​

ಯುವತಿಯ ದೂರು ಆಧರಿಸಿ ಇದೀಗ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಯುವತಿಯ ಮೊಬೈಲ್‌ನಲ್ಲಿ ಹಲವು ಆಫ್ರಿಕನ್ ಪ್ರಜೆಗಳ ನಂಬರ್‌ಗಳು ಪತ್ತೆಯಾಗಿದೆ ಎನ್ನಲಾಗಿದ್ದು, ಆಫ್ರಿಕಾ ಪ್ರಜೆಗಳ ಜತೆ ಯಾವ ಕಾರಣಕ್ಕೆ ಒಡನಾಟ ಹೊಂದಿದ್ದರು ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

Source: newsfirstlive.com Source link