ಒಟಿಟಿಯಲ್ಲಿ ಧೂಳೆಬ್ಬಿಸಿದ ‘ಮನಿ ಹೈಸ್ಟ್’ ವೆಬ್ ಸಿರೀಸ್.. ಮೊದಲ ದಿನವೇ ಕೋಟಿ ಕೋಟಿ ಜನರಿಂದ ವೀಕ್ಷಣೆ

ಒಟಿಟಿಯಲ್ಲಿ ಧೂಳೆಬ್ಬಿಸಿದ ‘ಮನಿ ಹೈಸ್ಟ್’ ವೆಬ್ ಸಿರೀಸ್.. ಮೊದಲ ದಿನವೇ ಕೋಟಿ ಕೋಟಿ ಜನರಿಂದ ವೀಕ್ಷಣೆ

ಒಟಿಟಿನಲ್ಲಿ ಮನಿ ಹೈಸ್ಟ್​ ಅನ್ನೋ ವೆಬ್​ ಸೀರಿಸ್ ಭಾರೀ ಸೌಂಡ್ ಮಾಡ್ತಿದೆ. ಈಗಾಗಲೇ 4 ಸೀಸನ್​ನಲ್ಲಿ ಅಭಿಮಾನಿಗಳನ್ನ ರಂಜಿಸಿದ್ದ ಮನಿ ಹೈಸ್ಟ್, ಮುಂದುವರೆದ ಭಾಗ ಬಿಡುಗಡೆಯಾಗಿದೆ. ಮನಿ ಹೈಸ್ಟ್​ ಸೀಸನ್​ 5ರ ಮೊದಲ ಕಂತು ರಿಲೀಸ್ ಆಗಿದ್ದು, ಒಟಿಟಿಯಲ್ಲಿ ಧೂಳೆಬ್ಬಿಸ್ತಿದೆ.

ಮನಿ ಹೈಸ್ಟ್.. ಸದ್ಯ ಒಟಿಟಿನಲ್ಲಿ ಧೂಳೆಬ್ಬಿಸ್ತಿರೋ ಸ್ಪ್ಯಾನಿಷ್​ ತ್ರಿಲ್ಲರ್​ ವೆಬ್​​​ ಸೀರಿಸ್​.. ಒಂದೊಂದು ಪಾತ್ರವೂ ಫ್ಯಾನ್ಸ್​​ಗಳ ಮನಸ್ಸಿನಲ್ಲಿ ಛಾಪು ಮೂಡಿಸಿದೆ. ಪ್ರೊಫೆಸರ್, ಟೋಕಿಯೋ, ಬರ್ಲಿನ್​​​, ನೈರೋಬಿ, ಹಲ್ಸಿಂಕಿ ಸೇರಿ ಮನಿ ಹೈಸ್ಟ್​ನಲ್ಲಿ ಬರುವ ಎಲ್ಲಾ ಪಾತ್ರಗಳು ಅಭಿಮಾನಿಗಳನ್ನ ತನ್ನತ್ತ ಸೆಳೆಯುತ್ತಿದೆ. ಅದ್ರಲ್ಲಿನ ಡೈಲಾಗ್​​ಗಳು, ಆ್ಯಕ್ಷನ್​ ಸೀನ್, ಎಮೋಷನಲ್​, ಟ್ವಿಸ್ಟ್ ಆ್ಯಂಡ್ ಟರ್ನ್​​ ನೋಡುಗರ ಎದೆ ಝಲ್​ ಎನ್ನಿಸುವಂತಿದೆ.

ಒಟಿಟಿನಲ್ಲಿ ‘ಮನಿ ಹೈಸ್ಟ್​’ ಸೀಸನ್​ – 5 ಹವಾ
ಮೊದಲ ದಿನವೇ ಕೋಟಿ ಕೋಟಿ ಜನರ ವೀಕ್ಷಣೆ

2017ರಲ್ಲಿ ಮೊದಲ ಬಾರಿಗೆ ರಿಲೀಸ್​ ಆಗಿದ್ದ ಮನಿ ಹೈಸ್ಟ್ ಇಲ್ಲಿವರೆಗೂ 5 ಸೀಸನ್​ಗಳಲ್ಲಿ ತೆರೆಗೆ ಅಪ್ಪಳಿಸಿದೆ. ಅದರಲ್ಲೂ 4 ಸೀಸನ್​ನಲ್ಲಿ ಅಭಿಮಾನಿಗಳನ್ನ ರೋಮಾಂಚನಗೊಳಿಸಿದ್ದ ಮನಿ ಹೈಸ್ಟ್​ ವೆಬ್​ ಸೀರಿಸ್​, ಇದೀಗ ಸೀಸನ್​ 5ರ ರೂಪದಲ್ಲಿ ಬಿಡುಗಡೆಯಾಗಿದೆ.. ರಿಲೀಸ್​ ಆಗಿ ಕೆಲವೇ ಕೆಲವು ಗಂಟೆಗಳಲ್ಲಿ ಮನಿ ಹೈಸ್ಟ್​ ಸೀಸನ್​ 5ನ ಮೊದಲ 5 ಎಪಿಸೋಡನ್ನ ಕೋಟಿ ಕೋಟಿ ಜನ ವೀಕ್ಷಿಸಿದ್ದಾರೆ..
ನಿನ್ನೆ ಮಧ್ಯಾಹ್ನ 12.30ಕ್ಕೆ ರಿಲೀಸ್ ಆಗಿದ್ದ ಮನಿ ಹೈಸ್ಟ್​ ಸೀಸನ್​ 5ರ ಮೊದಲ ಕಂತನ್ನ ಈಗಾಗಲೇ ಅಭಿಮಾನಿಗಳ ಕಣ್ತುಂಬಿಕೊಳ್ತಿದ್ದಾರೆ.

ಮೊದಲ ಸೀಸನ್​​ನಿಂದಲೇ ಥ್ರಿಲ್ಲಿಂಗ್ ಕಥೆ ಮುಂದುವರೆಸಿಕೊಂಡು ಬಂದಿರೋ ಮನಿ ಹೈಸ್ಟ್​ ಒಟಿಟಿಯಲ್ಲಿ ಇತಿಹಾಸ ನಿರ್ಮಿಸಿದೆ.
ಅಂದಗಾಗೆ 2017 ರಲ್ಲಿ ‘ಮನಿ ಹೈಸ್ಟ್’ ವೆಬ್​ ಸೀರಿಸ್​ನ ಮೊದಲ 2 ಸೀಸನ್ ಭರ್ಜರಿ ಗೆಲುವು ಕಂಡಿತ್ತು. 01 ಮತ್ತು 02 ಸೀಸನ್​ನಲ್ಲಿ ರಾಯಲ್ ಮೆಂಟ್ ಆಫ್ ಸ್ಪೇನ್​ನಲ್ಲಿ ಕಳ್ಳತನ ಮಾಡಲಾಗಿತ್ತು. ರಾಯಲ್ ಮೆಂಟ್ ಆಫ್ ಸ್ಪೇನ್​ನಲ್ಲಿಟ್ಟಿದ್ದ ಹಣವನ್ನ ಪ್ರೊಪೆಸರ್​ ತಂಡ ಕದ್ದು ಯಶಸ್ವಿಯಾಗಿ ಹೊರಬಂದಿತ್ತು.. ಆದ್ರೆ ಮೂರನೇ ಸೀಸನ್​ನ ಆರಂಭದಲ್ಲಿ ತಂಡದ ಸದಸ್ಯ ರಿಯೋ ಪೊಲೀಸರ ಕೈಲಿ ಸಿಕ್ಕಿ ಹಾಕಿಕೊಳ್ತಾನೆ. ಆತನ ರಕ್ಷಣೆಗಾಗಿ ಪ್ರೊಫೆಸರ್ ಮತ್ತು ಆತನ ತಂಡ ಮತ್ತೆ ಕಳ್ಳತನಕ್ಕೆ ಇಳಿಯುತ್ತೆ. ಆದ್ರೆ ಈ ಬಾರಿ ಆಯ್ಕೆ ಮಾಡಿಕೊಂಡಿದ್ದು, ಬ್ಯಾಂಕ್​ ಆಫ್​ ಸ್ಪೇನ್​ನಲ್ಲಿ.. 3 ಮತ್ತು 4 ಸೀಸನ್​ನಲ್ಲಿ ಬ್ಯಾಂಕ್​ ಆಫ್​ ಸ್ಪೇನ್​ವೊಂದರಲ್ಲಿ ಚಿನ್ನ ಕರಗಿಸೋ ಕಥೆ ಹೊಂದಿದೆ. ಸದ್ಯ ಇದರ ಮುಂದುವರೆದ ಭಾಗವಾಗಿ ಮನಿ ಹೈಸ್ಟ್ ಸೀಸನ್​ 5ನ ಮೊದಲ ಕಂತು ರಿಲೀಸ್ ಆಗಿದೆ.

ಅಭಿಮಾನಿಗಳ ಹೃದಯ ಛಿದ್ರಗೊಳಿಸಿದ ‘ಟೋಕಿಯೋ’ ಸಾವು!

ಈಗಾಗಲೇ ಮನಿ ಹೈಸ್ಟ್​​ನ ಹಿಂದಿನ ಸೀಸನ್​ನಲ್ಲಿ ಅದ್ಭುತ್​ ಕ್ಯಾರೆಕ್ಟರ್​ ಬರ್ಲಿನ್ ಸಾವನ್ನಪ್ಪಿದ್ದ.. ರಾಯಲ್ ಮೆಂಟ್ ಆಫ್ ಸ್ಪೇನ್​ನಲ್ಲಿ ಕಳ್ಳತನ ಮಾಡಿ ಎಸ್ಕೇಪ್ ಆಗೋವಾಗ ಬರ್ಲಿನ್​ ಪೊಲೀಸರ ಗುಂಡಿಗೆ ಜೀವ ಚೆಲ್ಲಿದ್ದ, ನಂತ್ರ ಸೀಸನ್​​ 4 ರಲ್ಲಿ ಬ್ಯಾಂಕ್ ಆಫ್ ಸ್ಪೇನ್​ ಕಳ್ಳತನದಲ್ಲಿ ನೈರೋಬಿ ಸಾವನ್ನಪ್ಪಿದ್ದಳು.. ಆದ್ರೀಗ ಸೀಸನ್​​ 5ರ ಕೊನೆಯಲ್ಲಿ ಮನಿ ಹೈಸ್ಟ್​ನ ಮೇನ್ ಕ್ಯಾರೆಕ್ಟರ್​ ಟೋಕಿಯೋ ಬಲಿಯಾಗಿದ್ದಾಳೆ. ಟೋಕಿಯೋ ಸಾವನ್ನಪ್ಪಿರೋದು ಅಭಿಮಾನಿಗಳ ಹೃದಯ ಛಿದ್ರಗೊಳಿಸುವಂತೆ ಮಾಡಿದೆ.

‘ಮನಿ ಹೈಸ್ಟ್’​ ವೆಬ್​​ ಸೀರಿಸ್​ ಮೇಲೂ ಬಿತ್ತು ಪೈರಸಿ ಕಣ್ಣು..
ತಮಿಳುರಾಕರ್ಸ್​, ಟೊರೆಂಟೋ ಸೇರಿ ಹಲವೆಡೆ ರಿಲೀಸ್​!

ಇನ್ನು ಹಾಲಿವುಡ್, ಬಾಲಿವುಡ್​ನ ಹೊಸ ಸಿನಿಮಾಗಳು ರಿಲೀಸ್ ಆಗ್ತಿದ್ದಂತೆ ಪೈರಸಿಗೆ ಬಲಿಯಾಗಿವೆ. ತಮಿಳುರಾಕರ್ಸ್​, ಟೊರೆಂಟ್ ಸೇರಿ ಹಲವು ಕಾನೂನು ಬಾಹಿರ ವೆಬ್​ಸೈಟ್​ನಲ್ಲಿ ಸಿನಿಮಾಗಳು ಬಿಡುಗಡೆಯಾಗಿವೆ. ಇದೀಗ ಮನಿ ಹೈಸ್​ ವೆಬ್​ ಸೀರಿಸ್​ ಮೇಲೂ ಪೈರಸಿ ಕಣ್ಣು ಬಿದ್ದಿದ್ದು, ರಿಲೀಸ್ ಆಗಿ ಕೆಲವೇ ಕೆಲವು ಗಂಟೆಗಳಲ್ಲಿ ತಮಿಳು ರಾಕರ್ಸ್​, ಟೊರೆಂಟೋ ಸೇರಿ ಹಲವು ವೆಬ್​ಸೈಟ್​ನಲ್ಲಿ ಬಿಡುಗಡೆ ಕಂಡಿದೆ.

ಸದ್ಯ ಮನಿ ಹೈಸ್ಟ್​ ವೆಬ್​ ಸೀರಿಸ್ ಇನ್ನೂ ಮುಕ್ತಾಯವಾಗಿಲ್ಲ. ಈಗಾಗಲೇ ಸೀಸನ್​ 5ರ ಮೊದಲ ಕಂತು ನಿನ್ನೆ ರಿಲೀಸ್ ಆಗಿದೆ. ಇದ್ರಲ್ಲಿ 5 ಎಪಿಸೋಡ್​ಗಳಿದ್ದು, ಇನ್ನುಳಿದ 5 ಎಪಿಸೋಡ್​ಗಳು ಡಿಸೆಂಬರ್​ 3 ರಂದು ರಿಲೀಸ್ ಆಗಿಲಿದೆ. ಒಟ್ಟಾರೆ, ಇಡೀ ವಿಶ್ವಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಹೊಂದಿರೋ ಮನಿ ಹೈಸ್ಟ್​ ವೆಬ್​ ಸೀರಿಸ್​​, ಒಟಿಟಿನಲ್ಲಿ ಧೂಳೆಬ್ಬಿಸ್ತಿದೆ. ಪ್ರೊಪೆಸರ್, ಟೋಕಿಯೋ, ಬರ್ಲಿನ್, ನೈರೋಬಿ, ಅರ್ಟೂರೋ, ಡೆನ್​​ವೀರ್, ರಕೇಲ್​, ಮಾಸ್ಕೋ ಹೀಗೆ ಒಂದೊಂದು ಪಾತ್ರವೂ ಸದಾ ಅಭಿಮಾನಿಗಳ ಮನಸ್ಸಿನಲ್ಲಿ ಗುನಗುಡುತ್ತಿರುತ್ತವೆ.. ಇದು ಮನಿ ಹೈಸ್ಟ್​ನ ಮ್ಯಾಜಿಕ್​​ ಅನ್ನೋದರಲ್ಲಿ ತಪ್ಪೇ ಇಲ್ಲ..

Source: newsfirstlive.com Source link