ಉತ್ತರ ಪ್ರದೇಶದಲ್ಲಿ ಡೆಂಘೀ ಢವ ಢವ.. ಟಾಪ್ 10 ಸುದ್ದಿಗಳ ಕ್ವಿಕ್ ರೌಂಡ್​ಅಪ್

ಉತ್ತರ ಪ್ರದೇಶದಲ್ಲಿ ಡೆಂಘೀ ಢವ ಢವ.. ಟಾಪ್ 10 ಸುದ್ದಿಗಳ ಕ್ವಿಕ್ ರೌಂಡ್​ಅಪ್

01. ಮತದಾನ ಮಾಡಿ ಇತರರಿಗೆ ಮಾದರಿಯಾದ ಸೋಂಕಿತ
ಆರೋಗ್ಯವಾಗಿರುವವರೇ ಮತದಾನ ಮಾಡಲು ಹಿಂದೇ ಮುಂದೇ ನೋಡ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಕೊರೊನಾ ಸೋಂಕು ತಗುಲಿದ್ರೂ ಮತದಾನ ಮಾಡೋ ಮೂಲಕ ಇತತರಿಗೆ ಮಾದರಿಯಾಗಿದ್ದಾರೆ. ಹುಬ್ಬಳ್ಳಿಯ ವಾರ್ಡ್​​ ನಂಬರ್ 49 ರಲ್ಲಿ 52 ವರ್ಷದ ವ್ಯಕ್ತಿಯೊಬ್ಬ ತಮ್ಮ ಹಕ್ಕನ್ನ ಚಲಾಯಿಸಿದ್ದಾರೆ.. ಮಹಾನಗರ ಪಾಲಿಕೆ ವೈದ್ಯರು ಇಂತಹ ಮಹತ್ವದ ಕಾರ್ಯಕ್ಕೆ ಕೈ ಜೋಡಿಸಿದ್ದು, ಮತದಾನದ ಹಕ್ಕು ಚಲಾವಣೆ ಮಾಡಲು ಸಹಾಯ ಮಾಡಿದ್ದಾರೆ.

02. ಎಣ್ಣೆ ಕುಡಿಸಿ ಅತ್ಯಾಚಾರವೆಸಗಿದ ನೈಜೀರಿಯಾ ಪ್ರಜೆಗಳು
ಮಹಿಳಾ ಟೆಕ್ಕಿಗೆ ಮದ್ಯ ಕುಡಿಸಿ ಅತ್ಯಾಚಾರ ಎಸಗಿದ ಆರೋಪದಡಿಯಲ್ಲಿ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಟೋನಿ ಹಾಗೂ ಉಬಾಕಾ ಬಂಧಿತ ಆರೋಪಿಗಳು. ನಗರದ ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟವೇರ್ ಉದ್ಯೋಗಿಯಾಗಿದ್ದ ಸಂತ್ರಸ್ತೆ ಸ್ನೇಹಿತರೇ ರೇಪ್ ಮಾಡಿದ್ದಾರೆ. ಯುವತಿಗೆ ಹಲವು ವರ್ಷಗಳಿಂದ ಟೋನಿ ಪರಿಚಿತನಾಗಿದ್ದ. ಪರಿಚಯದ ಮೇರೆಗೆ ಯುವತಿಯನ್ನು ಟೋನಿ ಸ್ನೇಹಿತನ ಮನೆಗೆ ಕರೆದುಕೊಂಡು ಹೋಗಿ ಕುಡಿಸಿದ್ದಾರೆ. ಆಗ ಮತ್ತಿನಲ್ಲಿರುವುದನ್ನು ಎನ್​​ಕ್ಯಾಶ್ ಮಾಡಿಕೊಂಡಿರುವ ಆರೋಪಿಗಳು ಸಂತ್ರಸ್ತೆ ಯುವತಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ..

03. ಬಿಬಿಎಂಪಿ ವಾರ್ಡ್​ಗಳ ಜವಾಬ್ದಾರಿ ನೋಡಲ್ ಅಧಿಕಾರಿಗಳ ಕೈಗೆ
ಬಿಬಿಎಂಪಿಯ 198 ವಾರ್ಡ್​ನ ಎಲ್ಲಾ ನೋಡಲ್ ಅಧಿಕಾರಿಗಳೊಂದಿಗೆ, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ವರ್ಚುವಲ್ ಸಭೆ ನಡೆಸಿದ್ರು. ನಗರದ 198 ವಾರ್ಡ್ ಗಳಲ್ಲಿ ನಾಗರಿಕರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರತಿ ವಾರ್ಡ್​ಗೆ ನೋಡಲ್ ಅಧಿಕಾರಿಯನ್ನಾಗಿ ನಿಯೋಜನೆ ಮಾಡಲಾಗಿದೆ. ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸಲು ನೋಡಲ್ ಅಧಿಕಾರಿಗಳಿಗೆ ಸಭೆಯಲ್ಲಿ ಆಯುಕ್ತರು ಸೂಚನೆ ನೀಡಿದ್ದಾರೆ.

04. ಸೆ.25ರ ಭಾರತ್​​ ಬಂದ್​​ಗೆ ಎಡಪಕ್ಷಗಳು ಬೆಂಬಲ
ಮೂರು ಕೃಷಿ ಕಾನೂನು ರದ್ದುಗೊಳಿಸುವಂತೆ ಒತ್ತಾಯಿಸಿ ಸೆಪ್ಟೆಂಬರ್ 25ರಂದು ಭಾರತ್​ ಬಂದ್​ಗೆ ಕರೆ ನೀಡಲಾಗಿದೆ. ರೈತ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್ ಬಂದ್​ಗೆ ಎಡಪಕ್ಷಗಳು ತಮ್ಮ ಬೆಂಬಲ ಸೂಚಿಸಿವೆ. ಸಿಪಿಐಎಂ, ಸಿಪಿಐ, ಫಾರ್ವರ್ಡ್ ಬ್ಲಾಕ್ ಮತ್ತು ಆರ್​​ಎಸ್​ಪಿ ಮುಷ್ಕರಕ್ಕೆ ಬೆಂಬಲ ನೀಡುವಂತೆ ಜನರಿಗೂ ಮನವಿ ಮಾಡಿವೆ. ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಮತ್ತು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಕಾನೂನು ಖಾತರಿ ನೀಡಬೇಕು ಅಂತ ಒತ್ತಾಯಿಸಲಾಗಿದೆ.

05.. ಉತ್ತರ ಪ್ರದೇಶದಲ್ಲಿ ಡೇಂಘಿ ಢವ ಢವ!
ಕೊರೊನಾ ಸೋಂಕಿನ ಆತಂಕದ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ಡೇಂಘಿ ಜ್ವರ ಭೀತಿ ಹುಟ್ಟಿಸಿದೆ.. ಉತ್ತರ ಪ್ರದೇಶದ ಫಿರೋಜಾಬಾದ್​ನಲ್ಲಿ ಮೂವರು ಡೇಂಘಿ ಜ್ವರಕ್ಕೆ ಸಾವನ್ನಪ್ಪಿದ್ದಾರೆ, ಈ ಮೂಲಕ ಫಿರೋಜಾಬಾದ್​​ನಲ್ಲೇ ಡೇಂಘಿಯಿಂದ ಸಾವನ್ನಪ್ಪಿರೋರ ಸಂಖ್ಯೆ 67ಕ್ಕೆ ಏರಿಕೆಯಾಗಿದೆ. ಉಳಿದಂತೆ ಉತ್ತರ ಪ್ರದೇಶದ ಹಲವು ಜಿಲ್ಲೆಯಲ್ಲೂ ಡೇಂಘಿ ಆತಂಕ ಹುಟ್ಟಿಸಿದ್ದು. ಜನ ಮನೆಯಿಂದ ಆಚೆ ಬರಲು ಭಯ ಪಡುವಂತಾಗಿದೆ. ಇನ್ನೊಂದ್ಕಡೆ ಡೇಂಘಿ ಬಗ್ಗೆ ಯೋಗಿ ಸರ್ಕಾರ ಫುಲ್ ಅಲರ್ಟ್​ ಆಗಿದ್ದು, ಜ್ವರ ಬಂದೋರಿಗೆ ಆರೋಗ್ಯ ಇಲಾಖೆ ಚಿಕಿತ್ಸೆ ನೀಡ್ತಿದೆ. ಅದಕ್ಕಾಗಿ ರಾಜ್ಯಾದ್ಯಂತ 36ಕ್ಕೂ ಹೆಚ್ಚು ಕಡೆ ಚಿಕಿತ್ಸಾ ಶಿಬಿರ ತೆರೆದಿದೆ. ಈಗಾಗಲೇ 3,719ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಹೇಳಲಾಗ್ತಿದೆ..

06.. ಸೋಂಕು ತಡೆಯಲು ರೈಲಿಗೆ ರೋ ಬೋಟ್ ತಂತ್ರಜ್ಞಾನ!
ರೈಲುಗಳಲ್ಲಿ ಕೊರೊನಾ ಹರಡುವುದನ್ನ ತಡೆಯಲು ಮತ್ತು ಪ್ರಯಾಣಿಕರ ಸುರಕ್ಷತೆಯನ್ನ ಗಮನದಲ್ಲಿಟ್ಟುಕೊಂಡು ಭಾರತೀಯ ರೈಲ್ವೇ ಮಹತ್ವದ ಹೆಜ್ಜೆ ಇಟ್ಟಿದೆ. ಉತ್ತರ ರೈಲ್ವೆಯ ದೆಹಲಿ ವಿಭಾಗವು UVC ರೋಬೋಟ್ ತಂತ್ರಜ್ಞಾನವನ್ನ ಬಳಸಿ ರೈಲುಗಳನ್ನ ಸೋಂಕು ರಹಿತಗೊಳಿಸಲು ಆರಂಭಿಸಿದೆ. ಈ ರೋಬೋಟ್ ತಂತ್ರಜ್ಞಾನ ಕೊರೊನಾ ವೈರಸ್‌ನ ನ್ಯೂಕ್ಲಿಯಸ್ ಅನ್ನು ನಾಶಪಡಿಸುತ್ತದೆ, ಇದರಿಂದ ಸೋಂಕು ರೈಲುಗಳಲ್ಲಿ ಹರಡುವುದಿಲ್ಲ. ಈ ತಂತ್ರಜ್ಞಾನವನ್ನು ಮೊದಲ ಬಾರಿಗೆ ಲಕ್ನೋ ಶತಾಬ್ದಿ ರೈಲಲ್ಲಿ ಆರಂಭ ಮಾಡಲಾಯ್ತು.

07. ಅಫ್ಘಾನ್​ನಲ್ಲಿ ಇವತ್ತೇ ತಾಲಿಬಾನ್​ ಸರ್ಕಾರ ರಚನೆ!?
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆಗೆ ಕ್ಷಣಗಣನೆ ಆರಂಭವಾಗಿದೆ, ಅಫ್ಘಾನ್​ನಲ್ಲಿ ಇಂದು ತಾಲಿಬಾನ್ ಸರ್ಕಾರ ರಚನೆಯಾಗೋದು ಬಹುತೇಕ ಖಚಿತ ಎನ್ನಲಾಗ್ತಿದೆ. ತಾಲಿಬಾನ್ ಸಹ-ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರಾದಾರ್ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆ ಆಗಲಿದೆ ಎಂದು ಹೇಳಲಾಗ್ತಿದೆ. ಹೊಸ ಸರ್ಕಾರ ರಚನೆ ಬಗ್ಗೆ ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಮಾಹಿತಿ ನೀಡಿದ್ದಾರೆ. ಅಮೆರಿಕಾ ಸೇನೆ ವಾಪಸ್​ ಆಗ್ತಿದ್ದಂತೆ ತಾಲಿಬಾನಿಗಳು ಸರ್ಕಾರ ರಚನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಇನ್ನೊಂದ್ಕೆಡೆ ತಾಲಿಬಾನಿಗಳ ವಿರುದ್ಧ ಪಂಜ್​ ಶೀರ್​ ಜನ ತೊಡೆ ತಟ್ಟಿದ್ದು, ತಾಲಿಬಾನಿಗಳಿಗೆ ತಲೆನೋವಾಗಿದೆ..

08. ಇಂದು ಅನಂತ್​ ನಾಗ್​ ಅವರಿಗೆ ಜನ್ಮ ದಿನದ ಸಂಭ್ರಮ
ಹಿರಿಯ ನಟ ಅನಂತ್ ನಾಗ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಇಡೀ ಭಾರತೀಯ ಚಿತ್ರರಂಗದಲ್ಲಿ ತಮ್ಮ ಸಹಜ ನಟನೆಯಿಂದ ಅನಂತ್ ನಾಗ್ ಗುರುತಿಸಿಕೊಂಡಿದ್ದಾರೆ. ಇವರ ಪೂರ್ಣ ಹೆಸರು ಅನಂತ್ ನಾಗರಕಟ್ಟೆ. ಮುಂಬೈನಲ್ಲಿ ನೆಲೆಸಿದ್ದ ಇವರು ಕನ್ನಡ, ಕೊಂಕಣಿ ಮತ್ತು ಮರಾಠಿ ಭಾಷೆಯ ರಂಗಕರ್ಮಿಯಾಗಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಅಲ್ಲದೆ ಕನ್ನಡ, ಹಿಂದಿ, ಮರಾಠಿ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

09. ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹಿಟ್​ ಮ್ಯಾನ್ ಸಾಧನೆ
ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ರೋಹಿತ್ ಶರ್ಮಾ ಮತ್ತೊಂದು ಸಾಧನೆ ಮಾಡಿದ್ದಾರೆ.. ಏಕದಿನ, ಟೆಸ್ಟ್ ಹಾಗೂ ಟಿ-20 ಕ್ರಿಕೆಟ್​ನಲ್ಲಿ 15 ಸಾವಿರ ರನ್ ಪೂರೈಸಿದ್ದಾರೆ.. ರೋಹಿತ್ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ 15 ಸಾವಿರ ರನ್ ಗಡಿ ಮುಟ್ಟಿದ ಭಾರತದ ಎಂಟನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಟೆಸ್ಟ್​ನಲ್ಲಿ 2,940 ರನ್​, ಏಕದಿನದಲ್ಲಿ 9,205 ರನ್​ ಮತ್ತು 2,864 ರನ್ ಬಾರಿಸಿದ್ದಾರೆ.. ಲಂಡನ್‌ನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ದಿನ ರೋಹಿತ್ ಈ ಸಾಧನೆ ಮಾಡಿದ್ದಾರೆ.

10.. ಟೆಸ್ಟ್ ಪಂದ್ಯದಲ್ಲಿ ಮತ್ತೆ ‘ಜಾರ್ಲೋ’ದ್ದೆ ಹವಾ
ಇಂಗ್ಲೆಂಡ್​ – ಭಾರತ ನಡುವಿನ ಟೆಸ್ಟ್ ಪಂದ್ಯದಲ್ಲಿ ಜಾರ್ಲೋ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಲಂಡನ್​​ನ ಒವೆಲ್​ನಲ್ಲಿ ನಡೆದ 4ನೇ ಟೆಸ್ಟ್​ ಪಂದ್ಯದಲ್ಲಿ ಜಾರ್ಲೋ ಮತ್ತೆ ಗ್ರೌಂಡ್​ಗೆ ಇಳಿದಿದ್ದಾನೆ. ಆದ್ರೆ ಈ ಬಾರಿ ಬೌಲಿಂಗ್​ ಮಾಡಲು ಕಣಕ್ಕಿಳಿದಿದ್ದಾರೆ. ಉಮೇಶ್ ಯಾದವ್​ ಬೌಲಿಂಗ್ ಮಾಡುವ ಸಮಯದಲ್ಲಿ ಜಾರ್ಲೋ ಫೀಲ್ಡಿಗಿಳಿದಿದ್ದ.. ಕೂಡಲೇ ಎಚ್ಚೆತ್ತ ಸಿಬ್ಬಂದಿ ಜಾರ್ಲೋನನ್ನ ಹೊರಗೆ ಅಟ್ಟಿದ್ರು. ಹಿಂದೆಯೂ ಸಹ ಭಾರತದ ಪರ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ಮಾಡಲು ಜಾರ್ಲೋ ಗ್ರೌಂಡ್​ಗೆ ಆಗಮಿಸಿ ಸುದ್ದಿಯಾಗಿದ್ದ..

Source: newsfirstlive.com Source link