ರೈಲಿನಲ್ಲಿ ಅರೆನಗ್ನನಾಗಿ ಓಡಾಟ.. ಹೊಟ್ಟೆಕೆಟ್ಟಿತ್ತು ಎಂದು ಕಾರಣ ಹೇಳಿದ ಜೆಡಿಯು ಶಾಸಕ

ರೈಲಿನಲ್ಲಿ ಅರೆನಗ್ನನಾಗಿ ಓಡಾಟ.. ಹೊಟ್ಟೆಕೆಟ್ಟಿತ್ತು ಎಂದು ಕಾರಣ ಹೇಳಿದ ಜೆಡಿಯು ಶಾಸಕ

ದೆಹಲಿ: ಜೆಡಿಯು ಎಮ್​ಎಲ್​ಎ ಗೋಪಾಲ್ ಮಂಡಲ್ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದಾರೆ. ರೈಲೊಂದರಲ್ಲಿ ಒಳಉಡುಪಿನಲ್ಲಿಯೇ ಗೋಪಾಲ್ ಮಂಡಲ್ ಓಡಾಡಿದ್ದು ಇದನ್ನ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ.

ಇದನ್ನೂ ಓದಿ: ದೆಹಲಿ ವಿಧಾನಸಭೆ ಒಡಲಿನಲ್ಲಿ ‘ರಹಸ್ಯ ಸುರಂಗ’; 75 ವರ್ಷಗಳ ನಿಗೂಢ ಗುಹೆಯ ಹಿಂದಿದೆ ರೋಚಕ ಕಥೆ

ಈ ವೇಳೆ ಮತ್ತೋರ್ವ ಪ್ರಯಾಣಿಕ ಒಳಉಡುಪಿನಲ್ಲೇ ಯಾಕೆ ಓಡಾಡ್ತಿದ್ದೀರ ಎಂದು ಕೇಳಿದ್ದಕ್ಕೆ ಗೋಪಾಲ್ ಮಂಡಲ್ ಅವರ ಮೇಲೆ ಹಲ್ಲೆ ಮಾಡಿ ಚಿನ್ನದ ರಿಂಗ್ ಮತ್ತು ಚೈನ್ ಕಸಿದಿದ್ದಾರೆ.. ಕಂಠಪೂರ್ತಿ ಕುಡಿದು ಹೀಗೆ ಅರೆನಗ್ನವಾಗಿ ಓಡಾಡಿದ್ದಾರೆಂದು ಬಿಹಾರದ ಬುಕ್ಸಾರ್ ಪೊಲೀಸ್ ಸ್ಟೇಷನ್​ನಲ್ಲಿ ಆರೋಪಿಸಿದ್ದಾರೆ.

ಇನ್ನು ಅರೆನಗ್ನವಾಗಿ ರೈಲಿನಲ್ಲಿ ಕಾಣಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಗೋಪಾಲ್ ಮಂಡಲ್.. ನನಗೆ ಅಂದು ಹೊಟ್ಟೆ ಕೆಟ್ಟಿತ್ತು.. ಮತ್ತೆ ಮತ್ತೆ ಬಾತ್​ರೂಮ್​ಗೆ ಹೋಗಬೇಕಿತ್ತು. ಹೀಗಾಗಿ ಅಂಡರ್​ವೇರ್​ ಮಾತ್ರ ಧರಿಸಿದ್ದೆ ಎಂದು ಹೇಳಿಕೆ ನೀಡಿದ್ದಾರೆ.

Source: newsfirstlive.com Source link