ಸೆಪ್ಟೆಂಬರ್ 5ನ್ನು ‘ಗೌರಿ ಲಂಕೇಶ್ ದಿನ’ವೆಂದು ಘೋಷಿಸಿದ ಕೆನಡಾದ ಬುರ್ನಬಿ ಸಿಟಿ

ಸೆಪ್ಟೆಂಬರ್ 5ನ್ನು ‘ಗೌರಿ ಲಂಕೇಶ್ ದಿನ’ವೆಂದು ಘೋಷಿಸಿದ ಕೆನಡಾದ ಬುರ್ನಬಿ ಸಿಟಿ

ಬೆಂಗಳೂರು: ಕೆನಡಾದ ನಗರ ಬುರ್ನಬಿ ಸೆಪ್ಟೆಂಬರ್​ 5 ನ್ನು ಪತ್ರಕರ್ತೆ ಗೌರಿ ಲಂಕೇಶ್ ದಿನವೆಂದು ಘೋಷಿಸಿದೆ. ಬುರ್ನಬಿಉ ಮೇಯರ್ ಮೈಕ್ ಹುರ್ಲೆ ಈ ಆದೇಶವನ್ನ ಹೊರಡಿಸಿದ್ದಾರೆ. ಅಲ್ಲದೇ ಗೌರಿ ಲಂಕೇಶ್ ಭಾರತದ ಧೈರ್ಯವಂತ ಪತ್ರಕರ್ತೆಯಾಗಿದ್ದರು.. ಅವರು ಸತ್ಯ ಮತ್ತು ನ್ಯಾಯಕ್ಕಾಗಿ.. ಸಮಾಜದ ಕೆಡುಕುಗಳ ವಿರುದ್ಧ ಹೋರಾಡಿ ತಮ್ಮ ಬದುಕನ್ನು ಬಡವರು ಮತ್ತು ಶೋಷಿತರಿಗಾಗಿ ಮುಡಿಪಾಗಿಟ್ಟಿದ್ದರು ಎಂದು ಹಾಡಿ ಹೊಗಳಿದ್ದಾರೆ.

ಇದನ್ನೂ ಓದಿ: ಮೈಸೂರಿನಲ್ಲಿ ವ್ಯವಸ್ಥೆ ಹದಗೆಟ್ಟಿದೆ ಎಂದು ತಿಂಗಳ ಹಿಂದೆಯೇ ಹೇಳಿದ್ದೆ- ಇಂದ್ರಜಿತ್ ಲಂಕೇಶ್

ಇನ್ನು ಈ ಕುರಿತು ಗೌರಿ ಲಂಕೇಶ್ ಸಹೋದರಿ ಕವಿತಾ ಲಂಕೇಶ್ ಪ್ರತಿಕ್ರಿಯೆ ನೀಡಿದ್ದು.. ಈ ವಿಚಾರ ತಿಳಿದು ಬಹಳ ಹೆಮ್ಮೆ ಎನ್ನಿಸಿದೆ. ಇದರಿಂದ ಜಗತ್ತು ಅಷ್ಟೇನೂ ಕೆಟ್ಟದಾಗಿಲ್ಲ ಅನ್ನೋದು ಗೊತ್ತಾಗುತ್ತೆ. ಸತ್ಯ ಮತ್ತು ಮಾಧ್ಯಮ ಸ್ವಾತಂತ್ರ್ಯಕ್ಕೆ ಇದರಿಂದ ಭರವಸೆ ಹುಟ್ಟಿದೆ. ಅಲ್ಲದೇ ಪತ್ರಕರ್ತರು ಮತ್ತೊಬ್ಬರಿಂದ ದಾಳಿಗೊಳಗಾಗುವುದಷ್ಟೇ ಅಲ್ಲ.. ಆಗಾಗ ಗುರುತಿಸಿಕೊಳ್ತಾರೆ ಅನ್ನೋದು ಸಾಬೀತಾಗಿದೆ ಎಂದಿದ್ದಾರೆ. ಇನ್ನು ಈ ವಿಚಾರಕ್ಕೆ ಇಂದ್ರಜಿತ್ ಲಂಕೇಶ್ ಸಹ ಸಂತಸ ವ್ಯಕ್ತಪಡಿಸಿದ್ದಾರೆ. ಇದು ನಮ್ಮ ಕುಟುಂಬಕ್ಕೆ ಹೆಮ್ಮೆಯ ವಿಚಾರ ಎಂದಿದ್ದಾರೆ.

ಸೆಪ್ಟೆಂಬರ್ 5, 2017 ರಂದು ಗೌರಿ ಲಂಕೇಶ್ ಮ್ಯಾಗಜಿನ್​ ಮುನ್ನಡೆಸುತ್ತಿದ್ದ ಗೌರಿ ಲಂಕೇಶ್ ಅವರನ್ನು ಇಬ್ಬರು ದುಷ್ಕರ್ಮಿಗಳು ಹತ್ಯೆಗೈದಿದ್ದರು.

Source: newsfirstlive.com Source link