ಕೊರೊನಾ ಮಧ್ಯೆಯೂ ಶ್ರೀಮಂತನಾದ ನಂಜುಂಡೇಶ್ವರ.. ಒಂದೇ ತಿಂಗಳಿನಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ

ಕೊರೊನಾ ಮಧ್ಯೆಯೂ ಶ್ರೀಮಂತನಾದ ನಂಜುಂಡೇಶ್ವರ.. ಒಂದೇ ತಿಂಗಳಿನಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ

ಮೈಸೂರು: ಕೊರೊನಾ ಕಾಲಘಟ್ಟದಲ್ಲಿ ದೇವಸ್ಥಾನಗಳಿಗೆ ಭಕ್ತರ ಪ್ರವೇಶ ನಿಷಿದ್ಧದ ನಡುವೆಯೂ ಇತಿಹಾಸ ಪ್ರಸಿದ್ಧ ನಂಜನಗೂಡಿನ ನಂಜುಂಡೇಶ್ವರ ಕೋಟ್ಯಧಿಪತಿಯಾಗಿದ್ದಾನೆ. ಹೌದು ಲಾಕ್​ಡೌನ್​ ಸಂದರ್ಭದಲ್ಲೂ ನಂಜುಂಡೇಶ್ವರ ದೇವಸ್ಥಾನದಲ್ಲಿ ದಾಖಲೆಯ ಮೊತ್ತದ ಕಾಣಿಕೆ ಸಂಗ್ರಹವಾಗಿ ಜನಮಾನಸದಲ್ಲಿ ಹುಬ್ಬೇರುವಂತೆ ಮಾಡಿದೆ.

ಒಂದೇ ತಿಂಗಳಿನಲ್ಲಿ ಅವಧಿಯಲ್ಲಿ ನಂಜನಗೂಡಿನ ನಂಜುಂಡೇಶ್ವರ ಕೋಟ್ಯಾಧೀಶನಾಗಿದ್ದು, ಬರೋಬ್ಬರಿ 1 ಕೋಟಿ 29 ಲಕ್ಷ ರೂಪಾಯಿ ಕಾಣಿಕೆ ಹಣ ಸಂಗ್ರಹವಾಗಿದೆ. ಜೊತೆಗೆ 50ಗ್ರಾಂ ಚಿನ್ನ, 8 ಕೆಜಿ 200ಗ್ರಾಂ ಬೆಳ್ಳಿ, 12 ವಿದೇಶಿ ಕರೆನ್ಸಿಗಳು ಹುಂಡಿಯಲ್ಲಿ ಕಾಣಿಕೆ ರೂಪದಲ್ಲಿ ಬಂದಿವೆ.

ಇದನ್ನೂ ಓದಿ: ಒಟಿಟಿಯಲ್ಲಿ ಧೂಳೆಬ್ಬಿಸಿದ ‘ಮನಿ ಹೈಸ್ಟ್’ ವೆಬ್ ಸಿರೀಸ್.. ಮೊದಲ ದಿನವೇ ಕೋಟಿ ಕೋಟಿ ಜನರಿಂದ ವೀಕ್ಷಣೆ

ಲಾಕ್ ಡೌನ್ ತೆರವು ನಂತರ ನಂಜುಂಡೇಶ್ವರ ದರ್ಶನ ಪಡೆಯಲು ಭಕ್ತಾದಿಗಳ ಸಂಖ್ಯೆ ದಿನೇ ದಿನೇ ಏರುತ್ತಿರುವುದರಿಂದ, ಹುಂಡಿಗಳಿಗೆ ಕಾಣಿಕೆ ಹೆಚ್ಚಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ. ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಕಾವೇರಿ ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಸಿಬ್ಬಂದಿ ದೇವಸ್ಥಾನದ ಹುಂಡಿಯಲ್ಲಿರುವ ಹಣ ಹಾಗೂ ಚಿನ್ನಾಭರಣ ಎಣಿಕೆ ಮಾಡುತ್ತಿದ್ದು ದಾಖಲೆಯ ಮೊತ್ತ ಸಂಗ್ರವಾಗಿರುವುದಾಗಿ ತಿಳಿಸಿದೆ.

Source: newsfirstlive.com Source link