ಪಕ್ಕದಲ್ಲಿ ಖಾಲಿ ಇರೋ ಜಾಗಕ್ಕೆ ಸನ್ನಿ ಆಹ್ವಾನ

ಮುಂಬೈ: ಮಾದಕ ಚೆಲುವೆ, ಬಾಲಿವುಡ್ ಪಿಂಕ್ ಲಿಪ್ಸ್ ಲೈಲಾ ಸನ್ನಿ ಲಿಯೋನ್ ಅಭಿಮಾನಿಗಳಿಗೆ ಆಹ್ವಾನ ನೀಡಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ತಿಳಿ ಮತ್ತು ಕಡು ನೀಲಿ ಬಣ್ಣದ ಬಿಕಿನಿ ತೊಟ್ಟು ಕಡಲ ಕಿನಾರೆಯ ಉಯ್ಯಾಲೆ ಮೇಲೆ ನಿಂತು ಮಿಂಚಿನಂತೆ ಬಳುಕಿ ನಿಂತಿರುವ ಹಾಟ್ ಫೋಟೋವನ್ನು ಸನ್ನಿ ಲಿಯೋನ್ ಹಂಚಿಕೊಂಡಿದ್ದಾರೆ. ನೀಲ ಸಾಗರದ ಕಡಲತೀರದಲ್ಲಿ ಹಾಕಿರುವ ಉಯ್ಯಾಲೆಯಲ್ಲಿ ನಿಂತಿರುವ ಫೋಟೋ ಪಡ್ಡೆಹುಡುಗರ ನಿದ್ದೆಗೆ ಕನ್ನ ಹಾಕಿದೆ. ಫೋಟೋ ಪೋಸ್ಟ್ ಆಗುತ್ತಿದ್ದಂತೆ ಬೇಬಿ ಡಾಲ್ ಅಂದಕ್ಕೆ ಮಾರುಹೋಗಿರುವ ತುಂಟ ಫ್ಯಾನ್ಸ್ ಗಳ ಬಗೆ ಬಗೆಯ ಕಮೆಂಟ್ ಮಾಡುತ್ತಿದ್ದಾರೆ.

ಫೋಟೋ ಜೊತೆಗೆ ಸನ್ನಿ ಲಿಯೋನ್ ಬರೆದುಕೊಂಡಿರುವ ಮಾದಕ ಸಾಲುಗಳು ತುಂಡೈಕ್ಳ ಕಿಕ್ಕೇರಿಸಿದ್ದು, ಪಕ್ಕದಲ್ಲಿ ನಾನಿದ್ರೆ ಹೇಗೆ ಅನ್ನೋದರ ಬಗ್ಗೆ ಕನಸು ಕಾಣುವಂತೆ ಮಾಡಿದೆ. ನನ್ನ ಪಕ್ಕದಲ್ಲಿರುವ ಉಯ್ಯಾಲೆ ಖಾಲಿ ಇದೆ. ಇಲ್ಲಿಗೆ ಯಾರು ಬರಲು ಇಷ್ಟಪಡುತ್ತೀರಿ ಎಂದು ಲೈಲಾ ಕೇಳಿದ್ದಾರೆ.

 

View this post on Instagram

 

A post shared by Sunny Leone (@sunnyleone)

ಸದ್ಯ ಈ ಫೋಟೋಗೆ 6.8 ಲಕ್ಷಕ್ಕೂ ಅಧಿಕ ಲೈಕ್ ಬಂದಿವೆ. 3.9 ಸಾವಿರಕ್ಕೂ ಅಧಿಕ ಕಮೆಂಟ್ ಗಳು ಬಂದಿದ್ದು, ನೆಟ್ಟಿಗ ತುಂಟರು ನಟಿಯ ಸೌಂದರ್ಯವನ್ನು ಹಾಡಿ ಹೊಗಳುತ್ತಿದ್ದಾರೆ. ಇನ್ನೂ ಕೆಲವರು ಆ ಅದೃಷ್ಟವಂತೆ ನಿಮ್ಮ ಪತಿ ಡೇನಿಯಲ್ ವೆಬರ್ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ‘ಶ್ರೀಮತಿ ಸನ್ನಿ ಲಿಯೋನ್ ಯುವಕ ಮಂಡಳಿ’ – ರಾಯಚೂರಿನಲ್ಲಿದೆ ಮಾದಕ ನಟಿಯ ಅಭಿಮಾನಿಗಳ ದಂಡು

Source: publictv.in Source link