#BREAKING ಬೆಳ್ಳಂಬೆಳಗ್ಗೆ ಗೂಡ್​ನ್ಯೂಸ್​: ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ಚಿನ್ನ, ಬೆಳ್ಳಿ ಪದಕ

#BREAKING ಬೆಳ್ಳಂಬೆಳಗ್ಗೆ ಗೂಡ್​ನ್ಯೂಸ್​: ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ಚಿನ್ನ, ಬೆಳ್ಳಿ ಪದಕ

ಟೋಕಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಬೆಳ್ಳಂಬೆಳಗ್ಗೆ ಭಾರತಕ್ಕೆ ಗೂಡ್​ನ್ಯೂಸ್​ ಸಿಕ್ಕಿದೆ. ಶೂಟಿಂಗ್​ನಲ್ಲಿ ಭಾರತಕ್ಕೆ ಚಿನ್ನ ಹಾಗೂ ಬೆಳ್ಳಿ ಲಭಿಸಿದೆ.

ಇಂದು ನಡೆದ ಮಿಶ್ರ 50 ಮೀಟರ್ ಏರ್​​ಪಿಸ್ತೂಲ್​ನ ಎಸ್​​ಎಚ್​​1 ವಿಭಾಗದಲ್ಲಿ ಭಾರತದ ಶೂಟರ್​​ಗಳಾದ ಮನೀಶ್​​ ನರ್ವಾಲ್ 218.2 ಅಂಕಗಳಿಸುವುದರೊಂದಿಗೆ ಮೊದಲ ಸ್ಥಾನ ಕಾಯ್ದುಕೊಂಡರೆ, 216.7 ಅಂಕಗಳಿಸಿದ್ದ ಸಿಂಗರಾಜ್ 2ನೇ ಸ್ಥಾನ ಕಾಯ್ದುಕೊಂಡರು. ಇದರೊಂದಿಗೆ

19 ವರ್ಷದ ಮನೀಶ್ ನರ್ವಾಲ್ ಚಿನ್ನಕ್ಕೆ ಗೆದ್ದ ಸಾಧನೆ ಮಾಡಿದರೆ, 39 ವರ್ಷದ ಸಿಂಗರಾಜ್ ಬೆಳ್ಳಿ ಗೆಲ್ಲುವಲ್ಲಿ ಮುಡಿಗೇರಿಸಿಕೊಂಡರು.. ಭಾರತೀಯರಿಗೆ ಪ್ರಬಲ ಪೈಪೋಟಿ ನೀಡಿದ್ದ ರಷ್ಯಾದ ಶೂಟರ್​ ಸೆರ್ಗೆ, 196.8 ಅಂಕ ಗಳಿಸುವುದರೊಂದಿಗೆ 3ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯ್ತು…

Source: newsfirstlive.com Source link