ಕಲಾವಿದರು ಅಂತಾ ಜನರು ಒಂದು ಬಾರಿ ಅವಕಾಶ ಕೊಡ್ತಾರೆ -ಸುಮಲತಾಗೆ ಟಾಂಗ್​ ಕೊಟ್ಟ ಶ್ರೀಕಂಠೇಗೌಡ

ಕಲಾವಿದರು ಅಂತಾ ಜನರು ಒಂದು ಬಾರಿ ಅವಕಾಶ ಕೊಡ್ತಾರೆ -ಸುಮಲತಾಗೆ ಟಾಂಗ್​ ಕೊಟ್ಟ ಶ್ರೀಕಂಠೇಗೌಡ

ಚಾಮರಾಜನಗರ: ಸಂಸದೆ ಸುಮಲತಾ ಅಂಬರೀಶ್​ ಮಂಡ್ಯದಲ್ಲಿ ಮನೆ ಕಟ್ಟುವ ವಿಚಾರಕ್ಕೆ ಪ್ರತಿಕ್ರಿಯಿಸಿದ, ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ.. ಮನೆ ಮಾಡೋದು ದೊಡ್ಡ ಸುದ್ದಿ ಏನಲ್ಲ. ಸಂಸದರು ಹಿಂದೆ ಬಾಡಿಗೆ ಮನೆಯಲ್ಲಿದ್ದರೂ ಕೂಡ ಒಂದೇ ಒಂದು ದಿನ ಬಂದಿಲ್ಲ, ಕಚೇರಿ ಓಪನ್ ಮಾಡಿದ್ರೂ ಒಂದು‌ ದಿನವೂ ಬಂದಿಲ್ಲ.. ಹೀಗಿದ್ದಾಗ ಅವರನ್ನ ಜನ ಎಲ್ಲಿ ಭೇಟಿ ಮಾಡಬೇಕು ಎಂದಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು.. ಮನೆ ಕಟ್ತಿರೋದಕ್ಕೆ ನಾವೂ ಶುಭಾಶಯ ಕೋರುತ್ತೇವೆ, ಕಲಾವಿದರು ಅಂತಾ ಜನರು ಒಂದು ಬಾರಿ ಅವಕಾಶ ಕೊಡ್ತಾರೆ, ಜನ ಪ್ರೀತಿಯಿಂದ ಆಯ್ಕೆ ಮಾಡಿದ್ದಾರೆ, ಎರಡನೇ ಬಾರಿ ಆಯ್ಕೆಯಾಗಬೇಕಾದ್ರೆ ಜನರ ಸೇವೆ ಮಾಡಬೇಕು, ಕಷ್ಟ ಕೇಳಬೇಕು, ಪರಿಹಾರ ಮಾಡಬೇಕು. ಎಲ್ಲ ಕಾಲಕ್ಕೂ ಕೂಡ ಇದು ನಡೆಯಲ್ಲ ಅಂಬರೀಶ್ ಕೂಡ ಸೋತಿಲ್ಲವೇ ಎಂದಿದ್ದಾರೆ.

ಇದನ್ನೂ ಓದಿ: ರೈಲಿನಲ್ಲಿ ಅರೆನಗ್ನನಾಗಿ ಓಡಾಟ.. ಹೊಟ್ಟೆಕೆಟ್ಟಿತ್ತು ಎಂದು ಕಾರಣ ಹೇಳಿದ ಜೆಡಿಯು ಶಾಸಕ

ಆ ಜಾಗ ಕೂಡ ವ್ಯಾಜ್ಯದಲ್ಲಿದೆ, ಕೋರ್ಟ್ ನಲ್ಲಿದೆ.. ಸದ್ಯಕ್ಕೆ ಅದು ಬಗೆಹರಿಯಲ್ಲ. ಆ ಕಾರಣಕ್ಕೆ ಜನರಿಗೆ ಸಿಗದ ಸಂದರ್ಭ ಉಂಟಾಗುವುದು ಬೇಡ. ಈ ಬಾರಿ ಅವರ ಕೆಲಸದ ಮೇಲೆ ಅವರ ಭವಿಷ್ಯ ನಿರ್ಣಯ ಆಗುತ್ತೆ, ಮತ್ತು ಅವರು ಕಟ್ಟುತ್ತಿರುವ ಮನೆ ಕೂಡ ಈಗ ವ್ಯಾಜ್ಯದಲ್ಲಿದೆ ಸದ್ಯಕ್ಕೆ ಅದು ಬಗೆಹರಿಯಲ್ಲ. ಆದಷ್ಟೂ ಜನರ ಕೈಗೆ ಸಿಕ್ಕು ಕಷ್ಟ ಆಲಿಸುವಂತೆ ಮನವಿ ಮಾಡ್ತೀವಿ ಎಂದರು.

Source: newsfirstlive.com Source link