ಮಕ್ಕಳಿಂದಲೇ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ.. ಹೆತ್ತ ತಪ್ಪಿಗೆ ಕಣ್ಣೀರಿಟ್ಟ ಅಪ್ಪ

ಮಕ್ಕಳಿಂದಲೇ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ.. ಹೆತ್ತ ತಪ್ಪಿಗೆ ಕಣ್ಣೀರಿಟ್ಟ ಅಪ್ಪ

ಹಾವೇರಿ: ವೃದ್ಧ ತಂದೆಯನ್ನ ನಡು ಬೀದಿಯಲ್ಲಿ ಎಳೆದಾಡಿ ಮಕ್ಕಳಿಬ್ಬರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಚಿಕ್ಕಬಾಸೂರು ಗ್ರಾಮದಲ್ಲಿ ನಡೆದಿದೆ.

ಯಲ್ಲಪ್ಪ ವಡ್ಡರ ಎಂಬ 70 ವರ್ಷದ ವೃದ್ಧನ ಮೇಲೆ ಮಕ್ಕಳು ಹಲ್ಲೆ ನಡೆಸಿದ್ದಾರೆ. ಮಕ್ಕಳಾದ ಆನಂದ, ಜಗದೀಶ ಎಂಬುವರಿಂದ ಮನಬಂದಂತೆ ಹಲ್ಲೆ ನಡೆದಿದ್ದು.. ಒಬ್ಬರಾದ ಮೇಲೆ ಒಬ್ಬರು ಬಂದು ಕಾಲಲ್ಲಿ ಒದ್ದಿದ್ದಾರೆ.

ಹಡೆದ ತಪ್ಪಿಗಾಗಿ ತಂದೆ ರಸ್ತೆಯಲ್ಲಿ ಕಣ್ಣೀರು ಹಾಕಿದ್ದಾರೆ. ನಂತರ ಪ್ರಜ್ಞಾಹೀನನಾಗಿ ನರಳುತ್ತಾ ದಾರಿಯಲ್ಲಿ ಬಿದ್ದಿದ್ದ ವೃದ್ದ ವ್ಯಕ್ತಿಯನ್ನ ಹಾವೇರಿ ಜಿಲ್ಲಾಸ್ಪತ್ರೆಗೆ ಗ್ರಾಮಸ್ಥರು ಸೇರಿಸಿದ್ದಾರೆ. ಯಾವ ಕಾರಣಕ್ಕಾಗಿ ಮಕ್ಕಳು ತಂದೆಯ ಮೇಲೆ ಹಲ್ಲೆ ನಡೆಸಿದ್ದಾರೆಂಬ ಮಾಹಿತಿ ತಿಳಿದುಬಂದಿಲ್ಲ. ಕಾಗಿನೆಲೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Source: newsfirstlive.com Source link