74 ನೇ ವಸಂತಕ್ಕೆ ಕಾಲಿಟ್ಟ ಅನಂತ್​ ನಾಗ್.. ಅವ್ರನ್ನ ಆ್ಯಕ್ಸಿಡೆಂಟಲ್ ನಟ ಅನ್ನೋದೇಕೆ ಗೊತ್ತಾ..?

74 ನೇ ವಸಂತಕ್ಕೆ ಕಾಲಿಟ್ಟ ಅನಂತ್​ ನಾಗ್.. ಅವ್ರನ್ನ ಆ್ಯಕ್ಸಿಡೆಂಟಲ್ ನಟ ಅನ್ನೋದೇಕೆ ಗೊತ್ತಾ..?

​ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟರಾಗಿರುವ ಅನಂತ್​ ನಾಗ್​ ಇಂದು ತಮ್ಮ 74 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸ್ಯಾಂಡಲ್​ವುಡ್​ನ ಎವರ್​ಗ್ರೀನ್​ ಹ್ಯಾಂಡ್​ಸ್ಯಾಮ್​ ಹೀರೋ ಅನಂತ್​ನಾಗ್​ 1948 ಸೆಪ್ಟೆಂಬರ್​ 4 ರಂದು ಸದಾನಂದ ನಾಗರಕಟ್ಟೆ ಮತ್ತು ಅನಂದಿ ದಂಪತಿಗೆ ಎರಡನೇ ಮಗುವಾಗಿ ಜನಿಸುತ್ತಾರೆ. ಇನ್ನು ಹೊನ್ನವರ ಬಳಿ ಇರುವ ನಾಗರಕಟ್ಟೆ ಇವರ ಹುಟ್ಟೂರು.1973 ರಲ್ಲಿ ತೆರೆ ಕಂಡ ‘ ಸಂಕಲ್ಪ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾರ್ದಾಪಣೆ ಮಾಡುತ್ತಾರೆ.

ಇದನ್ನೂ ಓದಿ: ಅನಂತ್ ನಾಗ್ ಇಲ್ಲದಿದ್ರೆ, ನಾವು ಕೆಜಿಎಫ್ ಸಿನಿಮಾ ನೋಡಲ್ಲ

ಅನಂತ್​ನಾಗ್​ ಚಿತ್ರರಂಗಕ್ಕೆ ಬಂದಿದ್ದೇ ಆಕಸ್ಮಿಕವಾಗಿಯಂತೆ ಅದಕ್ಕೆ ಅವರನ್ನು ಆ್ಯಕ್ಸಿಡೆಂಟಲ್​ ನಟ ಎನ್ನುತ್ತಾರಂತೆ. ಕನ್ನಡ, ಹಿಂದಿ, ಮಲಯಾಳಂ, ತೆಲುಗು, ತಮಿಳು ಮತ್ತು ಮರಾಠಿ ಸೇರಿದಂತೆ ಒಟ್ಟು ಆರು ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಬರೋಬ್ಬರಿ 48 ವರ್ಷಗಳಿಂದ ಸಿನಿಮಾ ರಂಗದಲ್ಲಿ ಅನಂತ್​ನಾಗ್​ ಸೇವೆ ಮಾಡುತ್ತಾ ಬಂದಿದ್ದಾರೆ.

ಇದನ್ನೂ ಓದಿ: ಅನಂತ್ ನಾಗ್​ಗೆ ಪದ್ಮ ಪ್ರಶಸ್ತಿ; ಅಭಿಯಾನ ಆರಂಭಿಸಿದ ರಿಶಬ್, ರಕ್ಷಿತ್ ಶೆಟ್ಟಿ

ಅನಂತ್ ನಾಗ್ ಅವರು 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದರಲ್ಲಿ 200ಕ್ಕೂ ಅಧಿಕ ಕನ್ನಡ ಸಿನಿಮಾಗಳೇ ಇವೆ. 1975ರಲ್ಲಿ ತೆರೆಕಂಡ ದೊರೈ ಭಗವಾನ್ ನಿರ್ದೇಶನದ ‘ಬಯಲುದಾರಿ’ ಸಿನಿಮಾದಲ್ಲಿ ಕಲ್ಪನಾ ಜತೆ ಅಭಿನಯಿಸಿ ಕನ್ನಡ ಸಿನಿಪ್ರಿಯರಿಗೆ ಇನ್ನಷ್ಟು ಹತ್ತಿರವಾಗಿದ್ದರು. ವಯಸ್ಸು 74 ಅದ್ರು ಕೂಡ ಅನಂತ್​ ನಾಗ್​ ಅವರಿಗೆ ಈಗಲೂ ಸಾಕಷ್ಟು ಚಿತ್ರದ ಆಫರ್​ಗಳು ಅವರನ್ನು ಹರಸಿ ಬರುತ್ತಿದೆ.
ಅನಂತ್​ ನಾಗ್​ ಸದ್ಯ ನಟ ರಕ್ಷಿತ್​ ಶೆಟ್ಟಿ ನಿರ್ಮಾಣದ ‘ಆಬ್ರಕಡಾಬ್ರ’, ಮತ್ತು ‘ಮೇಡ್​ ಇನ್​ ಬೆಂಗಳೂರು’ ಗಾಳಿಪಟ -2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Source: newsfirstlive.com Source link