4ನೇ ಟೆಸ್ಟ್​ ಮೊದಲ ದಿನದಾಟ ಏನಾಯ್ತು.? ರೋಹಿತ್ ಅಸಮಾಧಾನಕ್ಕೆ ಕಾರಣವಾಯ್ತಾ ಕೊಹ್ಲಿ ನಿಲುವು.?

4ನೇ ಟೆಸ್ಟ್​ ಮೊದಲ ದಿನದಾಟ ಏನಾಯ್ತು.? ರೋಹಿತ್ ಅಸಮಾಧಾನಕ್ಕೆ ಕಾರಣವಾಯ್ತಾ ಕೊಹ್ಲಿ ನಿಲುವು.?

ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಕೆಂಡ ಹೊಗೆಯಾಡುತ್ತಿದೆ. ಅದ್ರಲ್ಲೂ ಕೊಹ್ಲಿ ಹಾಗೂ ರೋಹಿತ್ ನಡುವಿನ ಭಿನ್ನಾಭಿಪ್ರಾಯದ ವಿಚಾರ, ಹಲವು ಬಾರಿ ಚರ್ಚೆಯೂ ಆಗಿದೆ. ಆದ್ರೆ ಇನ್ನೇನು ಎಲ್ಲವೂ ಸರಿಹೋಯ್ತು ಎನ್ನುವಾಗಲೇ, ಇವರಿಬ್ಬರ ನಡುವಿನ ವೈಮನಸ್ಸು ಮತ್ತೆ ಬೆಳಕಿದೆ ಬಂದಿದೆ.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಈ ಇಬ್ಬರು ಟೀಮ್ ಇಂಡಿಯಾದ ಭಲೇ ಜೋಡಿ..! ಇವರಿಬ್ಬರ ಜಗಲ್​ಬಂದಿಯಲ್ಲಿ ಟೀಮ್ ಇಂಡಿಯಾ ಹಲವು ಐತಿಹಾಸಿಕ ಗೆಲುವುಗಳನ್ನ ಸಾಧಿಸಿದೆ. ಆದ್ರೆ ಇದರ ಹೊರತಾಗಿ ಈ ಜೋಡಿ ಹೆಚ್ಚು ಚರ್ಚೆಯಾಗಿದ್ದು, ಮುಸುಕಿನ ಗುದ್ದಾಟದಿಂದಲೇ.!

blank

ಹೌದು.! 2019ರ ಏಕದಿನ ವಿಶ್ವಕಪ್ ಸೋಲಿನ ಬಳಿಕ ಬೆಳಕಿಗೆ ಬಂದಿದ್ದ ಮನಸ್ತಾಪ ವಿಚಾರ, ಅಂದಿನಿಂದ ಒಂದಿಲ್ಲೊಂದು ಕಾರಣಕ್ಕೆ ಮತ್ತೆ ಮತ್ತೆ ಬೆಳಕಿಗೆ ಬರ್ತಿದೆ. ಆದ್ರೆ ಇತ್ತೀಚಿಗೆ ಇವರಿಬ್ಬರ ಬಾಂಧವ್ಯ ಚೆನ್ನಾಗಿದೆ. ನೋ ಪ್ರಾಬ್ಲಂ ಎನ್ನುತ್ತಿರುವಾಗಲೇ ಮತ್ತೆ ಎಲ್ಲವೂ ಅಷ್ಟಕ್ಕಷ್ಟೇ ಎಂಬ ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ.

4ನೇ ಟೆಸ್ಟ್​ನ ಮೊದಲ ದಿನದಾಟ ಬಯಲಾಯ್ತು ಸತ್ಯ.!

ಇಂಗ್ಲೆಂಡ್ ಪ್ರವಾಸದ​ ಆರಂಭದಿಂದ ಜೊತೆ ಜೊತೆಯಾಗಿ ಕಾಣಿಸಿಕೊಂಡಿದ್ದ ವಿರಾಟ್​-ರೋಹಿತ್, ಕೆಲವೊಂದು ನಿರ್ಣಯಗಳಲ್ಲಿ ಸಮನ್ವಯತೆಯಿಂದಲೇ ನಿಭಾಯಿಸಿದ್ದರು. ಇದು ಕ್ರಿಕೆಟ್ ಅಭಿಮಾನಿಗಳನ್ನ ಸಂತೋಷಕ್ಕೂ ಕಾರಣವಾಗಿತ್ತು. ಆದ್ರೆ, ನಾಲ್ಕನೇ ಟೆಸ್ಟ್​ನಲ್ಲಿ ನಡೆದ ಒಂದು ಘಟನೆ, ಇವರಿಬ್ಬರ ನಡುವೆ ಬೇರೇಯದ್ದೇ ನಡೀತಿದೆ ಎಂಬ ಚರ್ಚೆಗೆ ಮತ್ತೆ ನಾಂದಿಯಾಡಿದೆ.

blank

12ನೇ ಓವರ್​ನ 4ನೇ ಎಸೆತ ಕ್ರೀಸ್​ನಲ್ಲಿದ್ದ ರೂಟ್, ಸಿರಾಜ್ ಎಸೆದ ಚೆಂಡನ್ನ ಸ್ಕ್ವೀರ್​ನತ್ತ ಬಾರಿಸಿ ಸಿಂಗಲ್​ ರನ್ ತೆಗೆದಿದ್ದರು. ಆದ್ರೆ ಈ ವೇಳೆ ಫಸ್ಟ್​ ಸ್ಲಿಪ್​​ನಲ್ಲಿದ್ದ ವಿರಾಟ್​ ಮೇಲೆ ಸೆಕೆಂಡ್ ಸ್ಪಿಪ್​​ನಲ್ಲಿದ್ದ ರೋಹಿತ್ ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: ಅಂದು ‘ಟೀಂ​​​ ಇಂಡಿಯಾ ಪರ ಆಡ್ತೀನಿ’ ಎಂದು ಮೈದಾನಕ್ಕೆ ನುಗಿದ್ದ ಜಾರ್ವೋ; ಇಂದು ಮತ್ತೊಂದು ಕುಚೇಷ್ಟೆ..!

ಇಲ್ಲಿ ಫೀಲ್ಡಿಂಗ್ ಸೆಟ್ ಮಾಡೋ ವಿಚಾರವಾಗಿ ಈ ಮನಸ್ತಾಪಗೊಂಡಿದ್ದು, ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಆದ್ರೆ, ಒಂದೆಡೆ ರೋಹಿತ್  ಅಸಮಾಧಾನಗೊಂಡಿದ್ದರು,  ಕ್ಯಾಪ್ಟನ್ ಕೊಹ್ಲಿ ಮಾತ್ರ ನನಗಲ್ಲ ಎಂಬಂತೆಯೇ ನಡೆದುಕೊಂಡರು. ಈ ನಡೆಯೇ ಇವರಿಬ್ಬರ ನಡುವಿನ ಮುನಿಸು ಮುಂದುವರಿದಿದ್ಯಾ ಎಂಬ ಪ್ರಶ್ನೆ ಹುಟ್ಟಿಗೆ ಕಾರಣವಾಗಿದೆ..

ಒಟ್ನಲ್ಲಿ ಒಂದೆಡೆ ಕೋಚ್ ರವಿ ಶಾಸ್ತ್ರಿ ಕೊಹ್ಲಿ-ರೋಹಿತ್ ನಡುವೆ ಏನೂ ಇಲ್ಲ ಅಂತ ಪದೇ ಪದೇ ಸಮರ್ಥಿಸಿಕೊಳ್ಳುತ್ತಿದ್ರೆ, ಅತ್ತ ಅಂಗಳದಲ್ಲಿ ಇವರಿಬ್ಬರ ವರ್ತನೆ ಶಾಸ್ತ್ರಿ ಹೇಳಿಕೆಗೆ ಭಿನ್ನವಾಗಿರೋದಂತು ಸತ್ಯ..!

Source: newsfirstlive.com Source link