ಟೀಮ್​ ಇಂಡಿಯಾದಲ್ಲಿ ನಡೀತಿದ್ಯಾ ಫೇವರಿಸಮ್​.? ಕೊಹ್ಲಿ ನಿರ್ಧಾರ ಜಡೇಜಾ ಪರ ಇರೋದ್ಯಾಕೆ?

ಟೀಮ್​ ಇಂಡಿಯಾದಲ್ಲಿ ನಡೀತಿದ್ಯಾ ಫೇವರಿಸಮ್​.? ಕೊಹ್ಲಿ ನಿರ್ಧಾರ ಜಡೇಜಾ ಪರ ಇರೋದ್ಯಾಕೆ?

ಇಂಗ್ಲೆಂಡ್​​ ವಿರುದ್ಧದ 4ನೇ ಟೆಸ್ಟ್​ ಪಂದ್ಯದಲ್ಲಿ ಕೇರಂ ಸ್ಪಿನ್ನರ್​​ ಆರ್​ ಅಶ್ವಿನ್,​ ಆಡೇ ಆಡ್ತಾರೆ ಅನ್ನೋದು ಹಲವರ ಮಾತಾಗಿತ್ತು. ಆದ್ರೆ ಆ ನಿರೀಕ್ಷೆ ಹುಸಿಯಾಗಿದೆ. ಅಶ್ವಿನ್​ ಮತ್ತೆ ಬೆಂಚ್​ಗೆ ಸೀಮಿತವಾದ್ರೆ, ಜಡೇಜಾ ಪ್ಲೇಯಿಂಗ್​ ಇಲೆವೆನ್​ ಟಿಕೆಟ್​​ ಗಿಟ್ಟಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಜೊತೆಗೆ ಕೊಹ್ಲಿ, ಜಡೇಜಾ ಫೇವರ್​​ ಇದ್ದಾರಾ ಎಂಬ ಚರ್ಚೆಯೂ ಹುಟ್ಟಿಕೊಂಡಿದೆ.

blank

ಇಂಗ್ಲೆಂಡ್​ ವಿರುದ್ಧದ 4ನೇ ಟೆಸ್ಟ್​​ನಲ್ಲಿ ಅಶ್ವಿನ್​ ಆಡ್ತಾರಾ ಇಲ್ವಾ..? ಕೆನ್ನಿಂಗ್ಟನ್​ ಓವಲ್​ ಟೆಸ್ಟ್​ ಪಂದ್ಯ ಆರಂಭಕ್ಕೂ ಮುನ್ನ ತೀವ್ರ ಚರ್ಚೆಗೆ ಕಾರಣವಾದ ಪ್ರಶ್ನೆ ಇದು. ಇದಕ್ಕೆ ಹಲವು ಕ್ರಿಕೆಟ್​​ ದಿಗ್ಗಜರು, ವಿಶ್ಲೇಷಕರು ಅಶ್ವಿನ್​ ಆಡ್ತಾರೆ ಅನ್ನೋ ಉತ್ತರವನ್ನೇ ನೀಡಿದ್ರು. ಆದ್ರೆ, ಟೀಮ್​ ಇಂಡಿಯಾ ನಾಯಕ ಮಾತ್ರ 4+1 ಟೆಂಪ್ಲೇಟ್​​ಗೆ ಫಿಕ್ಸ್​ ಆಗಿ, ಜಡೇಜಾಗೆ ಮಣೆ ಹಾಕಿದ್ದಾರೆ. ಕ್ಯಾಪ್ಟನ್​ ಕೊಹ್ಲಿಯ ಈ ನಿರ್ಧಾರ, ಇದೀಗ ಫೇವರಿಸಮ್​ ಬಗ್ಗೆ ಪ್ರಶ್ನೆ ಹುಟ್ಟುಹಾಕಿದೆ.

blank

ನಾಟಿಂಗ್​ಹ್ಯಾಮ್​ನಲ್ಲಿ ನಡೆದ ಸರಣಿಯ ಮೊದಲ ಟೆಸ್ಟ್​ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಜಡೇಜಾ, ತಂಡಕ್ಕೆ ಆಸರೆಯಾಗಿದ್ರು. ಆ ಬಳಿಕ ಲಾರ್ಡ್ಸ್​​ ಟೆಸ್ಟ್​​ನಲ್ಲೂ ಬ್ಯಾಟಿಂಗ್​ನಲ್ಲಿ ಜಡ್ಡು ತಕ್ಕ ಮಟ್ಟಿಗೆ ನೆರವಾದ್ರು. ಆದ್ರೆ ವಿಕೆಟ್​ ಕಬಳಿಸುವ ವಿಚಾರದಲ್ಲಿ ಮಾತ್ರ, ಜಡ್ಡು ವೈಫಲ್ಯ ಮುಂದುವರೆಯಿತು. ಲೀಡ್ಸ್​ನಲ್ಲಿ ಮುಕ್ತಾಯವಾದ 3ನೇ ಟೆಸ್ಟ್​ನಲ್ಲೂ ಇದೇ ಆಗಿದ್ದು. ಹೀಗಾಗಿಯೇ ಕೆನ್ನಿಂಗ್ಟನ್ ಓವಲ್​​​ನಲ್ಲಿ ಅಶ್ವಿನ್​ ಆಡ್ತಾರೆ ಅನ್ನೋ ಹಲವರ ಅಭಿಪ್ರಾಯ, ರೂಪು ಗೊಂಡಿತ್ತು.

ಸರಣಿಯ ಮೊದಲ 3 ಪಂದ್ಯಗಳಲ್ಲಿ ಆಡಿದ 5 ಇನ್ನಿಂಗ್ಸ್​​ಗಳಿಂದ ಜಡೇಜಾ, 133 ರನ್​ ಗಳಿಸಿದ್ದಾರೆ. 76 ಓವರ್​​ ಬೌಲಿಂಗ್​ ಮಾಡಿದ ಜಡ್ಡು, ಕೇವಲ 2 ವಿಕೆಟ್​ ಕಬಳಿಸಿದ್ದಾರಷ್ಟೇ.!

blank

ಇದನ್ನೂ ಓದಿ: ಅಂದು ‘ಟೀಂ​​​ ಇಂಡಿಯಾ ಪರ ಆಡ್ತೀನಿ’ ಎಂದು ಮೈದಾನಕ್ಕೆ ನುಗಿದ್ದ ಜಾರ್ವೋ; ಇಂದು ಮತ್ತೊಂದು ಕುಚೇಷ್ಟೆ..!

ಎದುರಾಳಿ ಇಂಗ್ಲೆಂಡ್​​ ಪಡೆಯಲ್ಲಿ ನಾಲ್ವರು ಲೆಫ್ಟ್​ ಹ್ಯಾಂಡ್​​ ಬ್ಯಾಟರ್ಸ್​ ಇದ್ದಾರೆ. ಹೀಗಾಗಿ ಜಡೇಜಾ ಆಡ್ತಾರೆ. ಇದು ಟಾಸ್​ ವೇಳೆ ಕೊಹ್ಲಿ ಹೇಳಿದ ಮಾತು. ಕಳಪೆ ಪ್ರದರ್ಶನದಿಂದ ಮಾತ್ರವಲ್ಲ.. ಟಾಸ್​ ವೇಳೆ ವಿರಾಟ್​​ ಕೊಹ್ಲಿ ಹೇಳಿದ ಮಾತು ಕೂಡ, ಫೇವರಿಸಮ್​ ಪ್ರಶ್ನೆಯನ್ನ ಹುಟ್ಟು ಹಾಕಿದೆ. ಯಾಕಂದ್ರೆ ಜಡೇಜಾ ಲೆಫ್ಟ್​​ ಹ್ಯಾಂಡ್​​ ಬ್ಯಾಟ್ಸ್​ಮನ್​ಗಳ ಎದುರು 25.89ರ ಸರಾಸರಿ ಹೊಂದಿದ್ರೆ, ಅಶ್ವಿನ್ ಸರಾಸರಿ 21.82 ಆಗಿದೆ.

ಅಭಿಮಾನಿಗಳು ಮಾತ್ರವಲ್ಲ.. ಸ್ವತಃ ಇಂಗ್ಲೆಂಡ್​ ಮಾಜಿ ನಾಯಕ ಮೈಕಲ್​ ವಾನ್​ ಕೂಡ ಅಶ್ವಿನ್​ ಕೈ ಬಿಟ್ಟಿದ್ದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. 413 ಟೆಸ್ಟ್​ ವಿಕೆಟ್ಸ್​​, 5 ಶತಕದ ದಾಖಲೆ ಹೊಂದಿರುವ ಅಶ್ವಿನ್​ರನ್ನ ಕೈ ಬಿಟ್ಟಿದ್ದು ಸಹಜವಾಗಿಯೇ ಎಲ್ಲರಲ್ಲೂ ಅಸಮಾಧಾನಕ್ಕೆ ಕಾರಣವಾಗಿದೆ. ಇದೆಲ್ಲದರ ನಡುವೆಯೂ ಸಿಕ್ಕ ಅವಕಾಶವನ್ನ ಜಡೇಜಾ ಸದುಪಯೋಗ ಪಡಿಸಿಕೊಳ್ತಾರಾ ಅನ್ನೋದು ಕೂಡ ಕುತೂಹಲ ಮೂಡಿಸಿದೆ.

Source: newsfirstlive.com Source link