ಮತ್ತೆ ಮುಂದೂಡಿಕೆಯಗುತ್ತಾ NEET ಪರೀಕ್ಷೆ..?; ಸದ್ಯಕ್ಕೆ ಎಕ್ಸಾಂ ಬೇಡವೆಂದು ಕೇಂದ್ರ ಸಚಿವರಿಗೆ ವಿದ್ಯಾರ್ಥಿಗಳ ಪತ್ರ

ಮತ್ತೆ ಮುಂದೂಡಿಕೆಯಗುತ್ತಾ NEET ಪರೀಕ್ಷೆ..?; ಸದ್ಯಕ್ಕೆ ಎಕ್ಸಾಂ ಬೇಡವೆಂದು ಕೇಂದ್ರ ಸಚಿವರಿಗೆ ವಿದ್ಯಾರ್ಥಿಗಳ ಪತ್ರ

ಬೆಂಗಳೂರು: ಇದೇ ತಿಂಗಳು 12ನೇ ತಾರೀಖಿನಂದು ನೀಟ್ ಪರೀಕ್ಷೆ ನಿಗದಿಯಾಗಿದ್ದು ಪರೀಕ್ಷೆಯನ್ನ ಮುಂದೂಡುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಗೆ ವಿವಿಧ ವಿದ್ಯಾರ್ಥಿ ಸಂಘಟನೆಗಳು ಪರೀಕ್ಷೆ ಮುಂದೂಡಲು ಮನವಿ ಮಾಡಿದ್ದಾರೆ. ಈಗಾಗಲೇ ಎರಡು ಬಾರಿ ನೀಟ್ ಪರೀಕ್ಷೆ ಮುಂದೂಡಿಕೆಯಾಗಿದೆ.

ಆ.1ರಂದು ಮೊದಲು ನಿಗದಿಯಾಗಿತ್ತು, ಬಳಿಕ ಸೆಪ್ಟೆಂಬರ್ 12ಕ್ಕೆ ಪರೀಕ್ಷೆಯ ಮರು ದಿನಾಂಕ ಪ್ರಕಟ ಆಗಿತ್ತು. ಕೊರೊನಾ ಎರಡನೇ ಅಲೆಯ ಭೀತಿ ಹಿನ್ನೆಲೆ ಆಗಸ್ಟ್ ತಿಂಗಳಿನಲ್ಲಿ ನಡೆಯಬೇಕಿದ್ದ ಪರೀಕ್ಷೆ ಸೆ.12ಕ್ಕೆ ಮುಂದೂಡಿಕೆ ಮಾಡಲಾಗಿತ್ತು. ಆದರೆ, ಮತ್ತೆ ಅಕ್ಟೋಬರ್ ತಿಂಗಳಲ್ಲಿ ಪರೀಕ್ಷೆ ನಡೆಸುವಂತೆ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

ಇದನ್ನೂ ಓದಿ: NEET ಪರೀಕ್ಷೆಗೆ ಫಿಕ್ಸ್ ಆಯ್ತು ಡೇಟ್.. 198 ನಗರಗಳಲ್ಲಿ ನಡೆಯಲಿದೆ ಎಕ್ಸಾಂ

ಈ ವರ್ಷ 16 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಬರೆಯೋಕೆ ನೋಂದಣಿ ಮಾಡಿಕೊಂಡಿದ್ದಾರೆ. ವಿವಿಧ ರಾಜ್ಯಗಳ, ಕೇಂದ್ರಗಳ ಪದವಿ ಪ್ರವೇಶ ಪರೀಕ್ಷೆ ಹಾಗೂ ಸಿಬಿಎಸ್ ಸಿ ಖಾಸಗಿ ಪರೀಕ್ಷೆಗಳು ನೀಟ್ ಸಮೀಪದ ಆಸು ಪಾಸಿನಲ್ಲೇ ಇದೆ. ICAR AIEEA ನ 2020-21ನೇ ಪದವಿ ಪರೀಕ್ಷೆ ಸೆ.7 ಮತ್ತು 8 ನಡೆಯಲಿದೆ. ಕಾಮೇಡ್ ಕೆ ಕರ್ನಾಟಕ ಸೆ.14 ರಂದು ಹಾಗೂ ಒರಿಸ್ಸಾದಲ್ಲಿ JEE ಪರೀಕ್ಷೆ ಸೆ.6 ರಿಂದ‌ 18 ರವರೆಗೆ ನಡೆಯಲಿದೆ. ಸಿಬಿಎಸ್ ಸಿ ಮ್ಯಾಥಮೆಟಿಕ್ಸ್ ಸೆ.13 ರಂದು ನಡೆಯಲಿದೆ.

ಒಂದೆರಡು ದಿನದ ಅಂತರದಲ್ಲಿ ಪರೀಕ್ಷಾ ಕೇಂದ್ರಗಳಿಗೆ ತೆರಳಲು‌ ಸಾಧ್ಯವಿಲ್ಲ. ವಿವಿಧ ವಿದ್ಯಾರ್ಥಿಗಳು ಹಲವು ಸ್ಪರ್ಧಾತ್ಮಕ ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದು, ಎಲ್ಲವನ್ನೂ ನಿಭಾಯಿಸುವುದು ಕಷ್ಟಸಾಧ್ಯ ಹೀಗಾಗಿ ನೀಟ್ ಪರೀಕ್ಷೆಯನ್ನ ಮುಂದೂಡಿಕೆ ಮಾಡುವಂತೆ ಒತ್ತಾಯ‌ ಮಾಡಿದ್ದಾರೆ.

Source: newsfirstlive.com Source link