ಬೆಂಗಳೂರು ನರ್ಸಿಂಗ್​ ಕಾಲೇಜಿನಲ್ಲಿ ಕೊರೊನಾ ಸ್ಫೋಟ: 16 ವಿದ್ಯಾರ್ಥಿಗಳಿಗೆ ಸೋಂಕು.. ಹೆಚ್ಚಿದ ಆತಂಕ

ಬೆಂಗಳೂರು ನರ್ಸಿಂಗ್​ ಕಾಲೇಜಿನಲ್ಲಿ ಕೊರೊನಾ ಸ್ಫೋಟ: 16 ವಿದ್ಯಾರ್ಥಿಗಳಿಗೆ ಸೋಂಕು.. ಹೆಚ್ಚಿದ ಆತಂಕ

ಬೆಂಗಳೂರು: ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚಾದ ಬೆನ್ನಲ್ಲೇ ಇದೀಗ ರಾಜ್ಯದ ಜಿಲ್ಲೆಗಳಲ್ಲಿಯೂ ಕೂಡ ಕೊರೊನಾ ಹಾವಳಿ ಜೋರಾಗಿದೆ. ಇತ್ತೀಚೆಗೆ ರಾಜ್ಯದ ಕೋಲಾರ ಜಿಲ್ಲೆಯಲ್ಲಿ ನರ್ಸಿಂಗ್​ ಓದುತ್ತಿರುವ ಕೇರಳದ 45 ವಿದ್ಯಾರ್ಥಿಗಳಲ್ಲಿ ಕೊರೊನಾ ಪತ್ತೆಯಾಗಿತ್ತು. ಈಗ ಸಿಲಿಕಾನ್​ ಸಿಟಿಯ ನರ್ಸಿಂಗ್ ಕಾಲೇಜಿನಲ್ಲಿ ಕೊರೊನಾ ಸ್ಫೋಟಗೊಂಡಿದ್ದು ಆತಂಕ ಸೃಷ್ಟಿಸಿದೆ.

ನಗರದ ದಾಸರಹಳ್ಳಿ ವಲಯದ ಚಿಕ್ಕಬಾಣವಾರಲ್ಲಿರುವ ಧನ್ವಂತರಿ ನರ್ಸಿಂಗ್ ಕಾಲೇಜಿನ 16 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡ್ತಿರುವ ಕಾಲೇಜಿನಲ್ಲಿ ಸೋಂಕು ತಗುಲಿರುವುದು ಗಾಬರಿ ಹುಟ್ಟಿಸಿದೆ.

blank

ಇದನ್ನೂ ಓದಿ: ಕೇರಳದಿಂದ ಕೋಲಾರ ನರ್ಸಿಂಗ್​ ಕಾಲೇಜಿಗೆ ಆಗಮಿಸಿದ 66 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್

ಮೊದಲು ಒಬ್ಬ ವಿದ್ಯಾರ್ಥಿಗೆ ಕೊರೊನಾ ಸೋಂಕು ತಗುಲಿತ್ತು ಎನ್ನಲಾಗಿದ್ದು, ಬಳಿಕ ಆತನ ಪ್ರೈಮರಿ ಕಾಂಟ್ಯಾಕ್ಟ್ ಗಳನ್ನ ಟೆಸ್ಟ್ ಮಾಡಲಾಗಿತ್ತು. ಪ್ರಾಥಮಿಕ ಸಂಪರ್ಕಿತರಲ್ಲಿ ಒಟ್ಟು 11 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಕಾಲೇಜಿನ ಸುಮಾರು 42 ವಿದ್ಯಾರ್ಥಿಗಳನ್ನ ಟೆಸ್ಟ್ ಮಾಡಲಾಗಿದೆ.

42 ವಿದ್ಯಾರ್ಥಿಗಳಲ್ಲಿ ಮತ್ತೆ ನಾಲ್ಕು ಮಂದಿಗೆ ಸೋಂಕು ಖಾತ್ರಿಯಾಗಿದ್ದು, ಒಟ್ಟು 16 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಸದ್ಯ ಕಾಲೇಜಿನ ಹಾಸ್ಟೆಲ್ ನಲ್ಲಿ ಮೈಕ್ರೋ ಕಂಟೈನ್ಮೆಂಟ್ ಜೋನ್ ಮಾಡಿರುವ ಬಿಬಿಎಂಪಿ 12 ಜನ ಸೋಂಕಿತ ವಿದ್ಯಾರ್ಥಿಗಳನ್ನು ಮಂಜುನಾಥ ನಗರದ ಕೋವಿಡ್ ಕೇರ್ ಸೆಂಟರ್‌ ಗೆ ಶಿಫ್ಟ್ ‌ಮಾಡಲಾಗಿದೆ.  ಬಳಿಕ 77 ಪ್ರಾಥಮಿಕ ಸಂಪರ್ಕಿತರು, 88 ದ್ವಿತೀಯ ಸಂಪರ್ಕಿತರನ್ನ ಗುರುತಿಸಲಾಗಿದ್ದು ಮುಂಜಾಗ್ರತಾ ಕ್ರಮವಾಗಿ ನಿನ್ನೆ ಸುಮಾರು 100 ವಿದ್ಯಾರ್ಥಿಗಳನ್ನ ಕೋವಿಡ್ ಟೆಸ್ಟ್ ಗೆ ಒಳಪಡಿಸಲಾಗಿದೆ.

Source: newsfirstlive.com Source link