ಅಜಿಂಕ್ಯಾ ರಹಾನೆ ವೈಫಲ್ಯ.. ಯಾರ ಮೇಲಿದೆ ಮ್ಯಾನೇಜ್​ಮೆಂಟ್​ ಒಲವು.?

ಅಜಿಂಕ್ಯಾ ರಹಾನೆ ವೈಫಲ್ಯ.. ಯಾರ ಮೇಲಿದೆ ಮ್ಯಾನೇಜ್​ಮೆಂಟ್​ ಒಲವು.?

ಸದ್ಯ ಟೀಮ್​ ಇಂಡಿಯಾಗೆ ನುಂಗಲಾರದ ತುತ್ತಾಗಿರೋದು ಅಂದರೆ, ಅದು ಮಿಡಲ್​ ಆರ್ಡರ್​ ಬ್ಯಾಟಿಂಗ್​ ವೈಫಲ್ಯ. ಅದರಲ್ಲೂ ಅಜಿಂಕ್ಯಾ ರಹಾನೆ ಸತತ ವೈಫಲ್ಯ, ಮ್ಯಾನೇಜ್​ಮೆಂಟ್​ ಅನ್ನ ಇಕ್ಕಟ್ಟಿಗೆ ಸಿಲುಕಿಸಿದೆ. ಹಾಗಾಗಿ ಅಂತಿಮ ಟೆಸ್ಟ್​​ಗೆ ಈ ಇಬ್ಬರಲ್ಲಿ ಒಬ್ಬರಿಗೆ ಚಾನ್ಸ್​ ನೀಡೋದಕ್ಕೆ ನಿರ್ಧರಿಸಿದೆ.

blank

ಸತತ ವೈಫಲ್ಯಗಳ ನಡುವೆಯೂ ಚಾನ್ಸ್​​​ ಗಿಟ್ಟಿಸಿಕೊಂಡಿದ್ದ ಅಜಿಂಕ್ಯಾ ರಹಾನೆ, ಕೆನ್ನಿಂಗ್ಟನ್​​ ಓವಲ್​​​ನಲ್ಲೂ ಮತ್ತೆ ನಿರಾಸೆ ಮೂಡಿಸಿದ್ದಾರೆ. ರಹಾನೆಯನ್ನ ಭಾರತ ಟೆಸ್ಟ್​ ತಂಡದ ಆಧಾರ ಸ್ಥಂಭ, ಸಂಕಷ್ಟದಲ್ಲಿ ತಂಡವನ್ನ ರಕ್ಷಿಸುವ ಆಪತ್ಫಾಂದವ ಎಂದೆಲ್ಲಾ ಕರೆಯಲಾಗುತ್ತೆ. ಆದರೆ ಪ್ರಸಕ್ತ ಸರಣಿಯಲ್ಲಿ ರಹಾನೆ ಬ್ಯಾಟಿಂಗ್ ನೋಡ್ತಿದ್ರೆ, ಎಲ್ಲದಕ್ಕೂ ತದ್ವಿರುದ್ಧವಾಗಿದೆ ಅನ್ನೋದು ಸ್ಷಷ್ಟವಾಗಿ ಗೋಚರಿಸುತ್ತೆ. ಹಾಗಾಗಿ ಕೊನೆ ಟೆಸ್ಟ್​​​ಗೆ ರಹಾನೆ ಬದಲಿಗೆ ಸೂರ್ಯಕುಮಾರ್ ಯಾದವ್​ ಅಥವಾ ಹನುಮ ವಿಹಾರಿಯನ್ನ ಕಣಕ್ಕಿಳಿಸುವ ಇರಾದೆಯಲ್ಲಿದೆ ಮ್ಯಾನೇಜ್​ಮೆಂಟ್​..!

blank

ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ರಹಾನೆ ಅತ್ಯಂತ ಹೀನಾಯ ಪ್ರದರ್ಶನ ನೀಡಿದ್ದಾರೆ. ಈವರೆಗೆ 6 ಇನಿಂಗ್ಸ್‌ಗಳಿಂದ 18ರ ಸರಾಸರಿಯಲ್ಲಿ ಗಳಿಸಿರೋದು, ಕೇವಲ 109 ರನ್​. ಇನ್ನು ಈ ವರ್ಷ ಆಡಿದ 10 ಟೆಸ್ಟ್​​​ಗಳಲ್ಲಿ ರಹಾನೆ ಬ್ಯಾಟ್‌ನಿಂದ ಹೊರ ಬಂದಿರೋದು ಕೇವಲ 372 ರನ್‌ಗಳು ಮಾತ್ರ. ಈ ಅವಧಿಯಲ್ಲಿ ರಹಾನೆ 2 ಅರ್ಧಶತಕ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಹಾಗಾಗಿ ಮಧ್ಯಮ ಕ್ರಮಾಂಕದಲ್ಲಿ ರಹಾನೆ ಬ್ಯಾಟಿಂಗ್‌ ವೈಫಲ್ಯ ಟೀಮ್ ಇಂಡಿಯಾಗೆ ನುಂಗಲಾರದ ತುತ್ತಾಗಿದೆ.

ಇದನ್ನೂ ಓದಿ:  ವಿರಾಟ್​​​ ಹೊಸ ದಾಖಲೆ; ಅಬ್ಬಾ! ಈ ವಿಚಾರದಲ್ಲಿ ಮಾತ್ರ ಕೊಹ್ಲಿ ಇಡೀ ಏಷ್ಯಾದಲ್ಲೇ ನಂಬರ್​​​ 1

blank

ಸದ್ಯ ರಹಾನೆ ಸತತ ವೈಫಲ್ಯದಿಂದಾಗಿ ಮ್ಯಾನೇಜ್​ಮೆಂಟ್​ ಟೀಕೆ ಎದುರಿಸುವಂತಾಗಿದೆ. ಹಾಗಾಗಿ ಮುಂದಿನ ಪಂದ್ಯಕ್ಕೆ ಅನುಭವಿ ಬ್ಯಾಟ್ಸ್​​​ಮನ್​​ಗೆ ಕೊಕ್​ ನೀಡಿ, ಸೂರ್ಯಕುಮಾರ್​​ ಅಥವಾ ವಿಹಾರಿಗೆ ಮಣೆ ಹಾಕೋದಕ್ಕೆ ಮ್ಯಾನೇಜ್​ಮೆಂಟ್​​ ನಿರ್ಧರಿಸಿದೆ. ಅನುಭವಿ ಬ್ಯಾಟ್ಸ್‌ಮನ್‌ ಹನುಮ ವಿಹಾರಿ ಈ ಸ್ಥಾನಕ್ಕೆ ಮುಂಚೂಣಿಯಲ್ಲಿ ಇರುವ ಮೊದಲ ಆಟಗಾರ. ರಕ್ಷಣಾತ್ಮಕ ರೀತಿಯಲ್ಲಿ ಅಗತ್ಯಕ್ಕೆ ತಕ್ಕ ಆಟವಾಡುವ ಸಾಮರ್ಥ್ಯ ಹೊಂದಿರುವ ವಿಹಾರಿ, ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ರು. ಆದರೀಗ ಅವಕಾಶ ಸಿಕ್ಕರೆ ಮರಳಿ ಸಾಮರ್ಥ್ಯ ಸಾಬೀತುಪಡಿಸುವ ತುಡಿತದಲ್ಲಿದ್ದಾರೆ.

ಚಾನ್ಸ್​​​​ಗಾಗಿ ರೇಸ್​​ನಲ್ಲಿ ಇರುವ ಮತ್ತೊಬ್ಬ ಆಟಗಾರ ಅಂದ್ರೆ, ಸೂರ್ಯಕುಮಾರ್ ಯಾದವ್. ಈಗಾಗಲೇ ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ಸೈ ಎನಿಸಿಕೊಂಡಿದ್ದು, ಟೆಸ್ಟ್​​​ನಲ್ಲೂ ಚಾನ್ಸ್​​​ ಸಿಕ್ಕರೆ ತಮ್ಮ ಭರ್ಜರಿ ಬ್ಯಾಟಿಂಗ್‌ ಅನಾವರಣಪಡಿಸಲು ಎದುರು ನೋಡ್ತಿದ್ದಾರೆ. ಜೊತೆಗೆ ರಣಜಿಯಲ್ಲಿ ಅತ್ಯುತ್ತಮ ಪರ್ಫಾಮೆನ್ಸ್​ ನೀಡಿರೋದು, ರಹಾನೆ ರಿಪ್ಲೇಸ್​​ಗೆ ಅತ್ಯಂತ ಸೂಕ್ತ ಎನಿಸ್ತಿದೆ. ಆದರೆ ಟೀಮ್​ ಮ್ಯಾನೇಜ್​ಮೆಂಟ್​ ಸೂರ್ಯಕುಮಾರ್​ ಅಥವಾ ವಿಹಾರಿ ಇಬ್ಬರಲ್ಲಿ ಯಾರಿಗೆ ಚಾನ್ಸ್​​ ನೀಡುತ್ತೋ ಅನ್ನೋದನ್ನ ಕಾದು ನೋಡಬೇಕಿದೆ.

Source: newsfirstlive.com Source link