ರೈತರು ಆತ್ಮಹತ್ಯೆ ಆಲೋಚನೆ ಬಿಡಬೇಕು: ಶೋಭಾ ಕರಂದ್ಲಾಜೆ

ಕಲಬುರಗಿ: ರಾಜ್ಯದಲ್ಲಿ ರೈತರ ಆತ್ಮಹತ್ಯೆ ತಡೆಯುವ ವಿಚಾರದ ಕುರಿತು ಚಿಂತಿಸಬೇಕು. ರೈತರಿಗೆ ಆದಾಯ ಬರಬೇಕೆಂದರೆ ಮಾರ್ಕೆಟ್ ಸಿಗಬೇಕು. ಪ್ರಮುಖ ಬೆಳೆ ಜೊತೆಗೆ ಪರ್ಯಾಯ ಕೃಷಿ ಇರಬೇಕು ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ನಗರದಲ್ಲಿ ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಈಗಾಗಲೇ ಹಲವು ಯೋಜನೆ ತಂದಿದೆ. ರೈತರು ಯೋಜನೆ ಲಾಭ ಪಡೆದು ಆತ್ಮಹತ್ಯೆ ಆಲೋಚನೆ ಬಿಡಬೇಕು. ಪ್ರಮುಖ ಬೆಳೆ ಜೊತೆಗೆ ಪರ್ಯಾಯ ಕೃಷಿ ಇರಬೇಕು ಎಂದು ಕಿವಿಮಾತು ಹೇಳಿದರು. ಇದನ್ನೂ ಓದಿ:ಪ್ಯಾರಾಲಿಂಪಿಕ್ಸ್ – ಶೂಟಿಂಗ್‍ನಲ್ಲಿ ಮನೀಷ್‍ಗೆ ಚಿನ್ನ, ಸಿಂಗ್‍ರಾಜ್‍ಗೆ ಬೆಳ್ಳಿ

ದೆಹಲಿಯಲ್ಲಿ ರೈತರ ಹೋರಾಟದ ಪ್ರತಿಕ್ರಿಯಿಸಿದ ಅವರು, ಹೋರಾಟ ನಿರತ ರೈತರ ಜೊತೆ 11 ಸುತ್ತು ಮಾತುಕತೆ ಆಗಿದೆ. ರೈತರ ಜೊತೆ ಮಾತನಾಡಲು ನಾವು ಸಿದ್ಧರಿದ್ದೇವೆ. ಆದರೆ ಕೃಷಿ ಕಾಯ್ದೆ ಬಿಲ್ ಯಾಕೆ ಮಾಡಿದ್ದೇವೆ ಎನ್ನುವುದನ್ನು ಹೋರಾಟನಿರತ ರೈತರು ಅರ್ಥ ಮಾಡಿಕೊಳ್ಳಬೇಕು ಎಂದರು.

Source: publictv.in Source link