ಈ ತಿಂಗಳ ಕೊನೆಯ ವಾರದಲ್ಲಿ ಅಮೆರಿಕಾಗೆ ಮೋದಿ ಭೇಟಿ; ಕುತೂಹಲ ಕೆರಳಿಸಿದ ಪ್ರವಾಸ

ಈ ತಿಂಗಳ ಕೊನೆಯ ವಾರದಲ್ಲಿ ಅಮೆರಿಕಾಗೆ ಮೋದಿ ಭೇಟಿ; ಕುತೂಹಲ ಕೆರಳಿಸಿದ ಪ್ರವಾಸ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಈ ತಿಂಗಳ ಕೊನೆಯ ವಾರದಲ್ಲಿ ಅಮೆರಿಕ ಪ್ರವಾಸ ನಡೆಸಲಿದ್ದಾರೆ ಎನ್ನಲಾಗಿದೆ. ಈ ತಿಂಗಳ ಕೊನೆಯ ವಾರದಲ್ಲಿ ಅಂದ್ರೆ 22 ರೊಂದ 27 ರ ವರೆಗೆ ವಾಶಿಂಗ್ಟನ್ ಹಾಗೂ ನ್ಯೂಯಾರ್ಕ್​ಗೆ ಮೋದಿ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ಜೋ ಬೈಡನ್ ಅಧ್ಯಕ್ಷರಾದ ಮೇಲೆ ಪ್ರಧಾನಿಯ ಮೊದಲ ಭೇಟಿ ಇದಾಗಲಿದೆ.

ಇದನ್ನೂ ಓದಿ: ಚೀನಾ, ಪಾಕ್ ಮಟ್ಟಹಾಕಲು ಹೊಸ ತಂತ್ರ.. ಇಸ್ರೇಲ್​​ನಿಂದ ಭಾರತಕ್ಕೆ ಬಂದಿಳಿಯಲಿದೆ ಈ ಅತ್ಯಾಧುನಿಕ ಅಸ್ತ್ರ

ಇಲ್ಲಿಯವರೆಗೆ ಒಟ್ಟು ಮೂರು ಬಾರಿ ವಿಡಿಯೋ ಕಾನ್ಫರೆನ್ಸ್ ಮೂಲಕ ಇಬ್ಬರೂ ನಾಯಕರು ಮುಖಾಮುಖಿಯಾಗಿದ್ದಾರೆ. ಅಧ್ಯಕ್ಷರಾದ ಮೇಲೆ ನೇರವಾಗಿ ಈವರೆಗೆ ಭೇಟಿ ಮಾಡಲು ಸಾಧ್ಯವಾಗಿಲ್ಲ. ಮಾರ್ಚ್‌ನಲ್ಲಿ ಕ್ವಾಡ್ ಶೃಂಗಸಭೆ, ಏಪ್ರಿಲ್‌ನಲ್ಲಿ ಹವಾಮಾನ ಬದಲಾವಣೆಯ ಶೃಂಗಸಭೆ ಮತ್ತು ಈ ವರ್ಷದ ಜೂನ್‌ನಲ್ಲಿ ಜಿ -7 ಶೃಂಗಸಭೆಯಲ್ಲಿ ಇಬ್ಬರೂ ನಾಯಕರು ವಿಡಿಯೋ ಕಾನ್ಫರೆನ್ಸ್​ ಮೂಲಕ ಮುಖಾಮುಖಿಯಾಗಿದ್ದರು.

2019 ಸೆಪ್ಟೆಂಬರ್​ನಲ್ಲಿ ಪ್ರಧಾನಿ ಮೋದಿ ಕೊನೆಯ ಬಾರಿಗೆ ಯುಎಸ್​ಗೆ ಭೇಟಿ ನೀಡಿದ್ರು.. ಆ ಸಂದರ್ಭದಲ್ಲಿ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಬ್ ಕಿ ಬಾರ್ ಟ್ರಂಪ್ ಸರ್ಕಾರ್ ಎಂದಿದ್ದರು. ಇದು ವಿಶ್ವವ್ಯಾಪಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಅಫ್ಘಾನಿಸ್ತಾನದ ಬಿಕ್ಕಟ್ಟಿನ ಮಧ್ಯೆ ಮೋದಿ ಅಮೆರಿಕ ಭೇಟಿ ನೀಡುತ್ತಿರುವುದು ಗಮನ ಸೆಳೆದಿದೆ.

Source: newsfirstlive.com Source link