ಕಾರು, ಬೈಕು ಬಿಟ್ಟು ‘ಆಂಬ್ಯುಲೆನ್ಸ್​’ನ್ನೇ ಕದ್ದೊಯ್ದ ಖತರ್ನಾಕ್​ ಕಳ್ಳ!

ಕಾರು, ಬೈಕು ಬಿಟ್ಟು ‘ಆಂಬ್ಯುಲೆನ್ಸ್​’ನ್ನೇ ಕದ್ದೊಯ್ದ ಖತರ್ನಾಕ್​ ಕಳ್ಳ!

ಬೆಂಗಳೂರು: ಕಳ್ಳರು ಬೈಕು, ಕಾರು, ಚಿನ್ನದ ಆಭರಣಗಳಿಗೆ ಕನ್ನ ಹಾಕೋದು ಕಾಮನ್​, ಆದ್ರೆ ಇಲ್ಲೊಬ್ಬ ಪ್ರಚಂಡ ಕಳ್ಳ ಆಂಬ್ಯುಲೆನ್ಸನ್ನೇ ಹೊತ್ತೊಯ್ದು ನಾನೆಲ್ಲ ಕಳ್ಳರಿಗಿಂತ ಡಿಫರೆಂಟ್​ ಎಂದಿದ್ದಾನೆ.

blank

ಹೌದು ನಗರದ ಹನುಮಂತ ನಗರದಲ್ಲಿ ಖತರ್ನಾಕ್​ ಕಳ್ಳನೋರ್ವ ಆಂಬ್ಯುಲೆನ್ಸನ್ನೇ ಕಳ್ಳತನ ಮಾಡಿರುವ ಪ್ರಕರಣ ವರದಿಯಾಗಿದೆ. ಆಗಸ್ಟ್​ 28 ರ ತಡರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಌಂಬ್ಯುಲೆನ್ಸ್​ ಇರುವ ಜಾಗಕ್ಕೆ ಆಟೋದಲ್ಲಿ ಡ್ರಾಪ್​ ತಗೊಂಡ ಖದೀಮ ಕ್ಷಣಮಾತ್ರದಲ್ಲಿ ಆಂಬ್ಯುಲೆನ್ಸ್​ ಎಗರಿಸಿ ಮಾಯವಾಗಿ ಬಿಟ್ಟಿದ್ದಾನೆ. ಚಾಲಾಕಿ ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕಳ್ಳನ ಕರಾಮತ್ತು ಹಬ್ಬೇರುವಂತೆ ಮಾಡಿದೆ.

ಇದನ್ನೂ ಓದಿ: ರೈಲಿನಲ್ಲಿ ಅರೆನಗ್ನನಾಗಿ ಓಡಾಟ.. ಹೊಟ್ಟೆಕೆಟ್ಟಿತ್ತು ಎಂದು ಕಾರಣ ಹೇಳಿದ ಜೆಡಿಯು ಶಾಸಕ

Source: newsfirstlive.com Source link