ಕೆರೆಯಂತಾದ ರಸ್ತೆ; ತೆಪ್ಪದಲ್ಲಿ ಕೂತು ಭತ್ತ ನಾಟಿ ಮಾಡಿ ಪ್ರತಿಭಟನೆಗೆ ನಿಂತ ಸ್ಥಳೀಯರು

ಕೆರೆಯಂತಾದ ರಸ್ತೆ; ತೆಪ್ಪದಲ್ಲಿ ಕೂತು ಭತ್ತ ನಾಟಿ ಮಾಡಿ ಪ್ರತಿಭಟನೆಗೆ ನಿಂತ ಸ್ಥಳೀಯರು

ಬೆಂಗಳೂರು: ಗುಂಡಿ ಬಿದ್ದು ಕೆರೆಯಂತಾಗಿರುವ ರಸ್ತೆ ದುರಸ್ತಿ ಕಾಣದೇ ನಿತ್ಯವೂ ಕಿರಿಕಿರಿ ಅನುಭವಿಸಿ ಬೇಸತ್ತ ಅಂಜನಾಪುರ ಬಡಾವಣೆ ನಿವಾಸಿಗಳು ವಿನೂತನ ಪ್ರತಿಭಟನೆಗೆ ಕೈಹಾಕಿದ್ದಾರೆ.

ಸುಮಾರು 12 ವರ್ಷದಿಂದ ರಸ್ತೆಯ ಕಾಮಗಾರಿ ಮರೀಚಿಕೆಯಾಗಿದ್ದು ಆಕ್ರೋಶಗೊಂಡ ನಿವಾಸಿಗಳು ನೀರು ತುಂಬಿರುವ ರಸ್ತೆಯಲ್ಲಿ ತೆಪ್ಪದಲ್ಲಿ ಕೂತು, ಭತ್ತ ನಾಟಿ ಮಾಡುವ ಮೂಲಕ ವಿನೂತನ ಪ್ರತಿಭಟನೆ ಕೈಗೊಂಡಿದ್ದಾರೆ.

blank

ಹೌದು ಈ ರಸ್ತೆಯಲ್ಲಿ ಓಡಾಡೋಕೆ ಗುಂಡಿಗೆ ಬೇಕು, ಈ ರಸ್ತೆಯಲ್ಲಿ ಓಡಾಡೋರು ‘ಮಹಾಶೂರರು’. ಸುಮಾರು 12 ವರ್ಷಗಳಿಂದ ದುರಸ್ತಿಯ ಮುಖ ಕಾಣದೇ ಅಪಾಯದ ಅಂಚಿನಲ್ಲಿರುವ ಈ ರಸ್ತೆ, ಯಮ ಸ್ವರೂಪಿಯಂತೆ ಬಾಯ್ತೆರೆದು ಅಪಘಾತಕ್ಕೆ ಆಹ್ವಾನ ನೀಡ್ತಿದೆ.

ಇದನ್ನೂ ಓದಿ: ಬೆಂಗಳೂರು ನರ್ಸಿಂಗ್​ ಕಾಲೇಜಿನಲ್ಲಿ ಕೊರೊನಾ ಸ್ಫೋಟ: 16 ವಿದ್ಯಾರ್ಥಿಗಳಿಗೆ ಸೋಂಕು.. ಹೆಚ್ಚಿದ ಆತಂಕ

blank

ಕನಕಪುರ ಬನ್ನೇರುಘಟ್ಟಕ್ಕೆ ಸಂಪರ್ಕ ಕಲ್ಪಿಸುವ ಸಂಪರ್ಕ ಕೊಂಡಿಯಾದ ಅಂಜನಾಪುರ ರಸ್ತೆ ಗುಂಡಿ ಬಿದ್ದು ಕೆರೆಯಂತಾಗಿದೆ. ಗುಂಡಿಬಿದ್ದ ರಸ್ತೆಯಿಂದ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿದ್ದರೂ ಕೂಡ ಯಾವೊಬ್ಬ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

blank

ರಸ್ತೆ ಕಾಮಗಾರಿಗೆ ಆಗ್ರಹಿಸಿ ನಿವಾಸಿಗಳು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಕಣ್ತೆರಸಲು ವಿನೂತನ ಪ್ರತಿಭಟನೆಗೆ ಸಜ್ಜಾಗಿದ್ದು, ಚೇಂಜ್​ ಮೇಕರ್ಸ್ ಆಫ್ ಕನಕಪುರ ರೋಡ್ ತಂಡದ ನೇತೃತ್ವದಲ್ಲಿ, ಕೆಸರು ಗದ್ದೆಯಂತಾಗಿರುವ ರಸ್ತೆಯಲ್ಲಿ ತೆಪ್ಪದಲ್ಲಿ ಕೂತು, ಭತ್ತ ನಾಟಿ ಮಾಡುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.

Source: newsfirstlive.com Source link