ಶವ ಸಾಗಿಸಲ್ಲ ಎಂದಿದ್ದಕ್ಕೆ ವಾಹನ ಸೀಜ್.. ಗುಬ್ಬಿ ಪಿಎಸ್​ಐ ಮೇಲೆ ಲಂಚಕ್ಕೆ ಬೇಡಿಕೆ ಇಟ್ಟ ಆರೋಪ

ಶವ ಸಾಗಿಸಲ್ಲ ಎಂದಿದ್ದಕ್ಕೆ ವಾಹನ ಸೀಜ್.. ಗುಬ್ಬಿ ಪಿಎಸ್​ಐ ಮೇಲೆ ಲಂಚಕ್ಕೆ ಬೇಡಿಕೆ ಇಟ್ಟ ಆರೋಪ

ತುಮಕೂರು: ಶವ ಸಾಗಿಸಲ್ಲ ಎಂದ ಮಾತ್ರಕ್ಕೆ ವಾಹನ ಸೀಜ್​ ಮಾಡಿ, ಲಂಚಕ್ಕೆ ಬೇಡಿಕೆ ಇಟ್ಟು ದೌರ್ಜನ್ಯ ಎಸಗಿದ್ದಾರೆಂದು ಜಿಲ್ಲೆಯ ಗುಬ್ಬಿ ಪೊಲೀಸ್​ ಠಾಣೆಯ ಪಿಎಸ್​ಐ ಜ್ಞಾನಮೂರ್ತಿ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.

ಗುಬ್ಬಿ ಪೊಲೀಸ್​ ಠಾಣೆಯ ಪಿಎಸ್​ಐ ಜ್ಞಾನಮೂರ್ತಿ ವಿನಾಕಾರಣ ಮ್ಯಾಕ್ಸಿಕ್ಯಾಬ್ ತಡೆದು ಕಿರುಕುಳ ನೀಡಿದ್ದಾರೆಂದು ಆರೋಪಿಸಲಾಗಿದೆ. ಅಪಘಾತದಲ್ಲಿ ಬೈಕ್ ಸವಾರನೊರ್ವ ಮೃತಪಟ್ಟಿದ್ದ ಈ ವೇಳೆ ಶವವನ್ನು ನನ್ನ ವಾಹನದಲ್ಲಿ ಸಾಗಿಸಲ್ಲ ಎಂದ ಮಾತ್ರಕ್ಕೆ, ವಾಹನ್ ಸೀಜ್ ಮಾಡಿ 14 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆಂದು ಚಾಲಕ ಆರೋಪಿಸಿದ್ದಾನೆ.

 

ಮುಂಗಡವಾಗಿ ತಮ್ಮ ಜೀಪ್ ಚಾಲಕ ಕರಿಯಪ್ಪ ಎಂಬ ಸಿಬ್ಬಂದಿಯ ಖಾತೆಗೆ, ಫೋನ್ ಪೇ ಮೂಲಕ 7 ಸಾವಿರ ರೂಪಾಯಿಯನ್ನು ಕೂಡ ಹಾಕಿಸಿಕೊಂಡಿದ್ದರು ಎಂದು ಚಾಲಕ ಆರೋಪಿಸಿದ್ದಾನೆ.

ಇದನ್ನೂ ಓದಿ: ರೈಲಿನಲ್ಲಿ ಅರೆನಗ್ನನಾಗಿ ಓಡಾಟ.. ಹೊಟ್ಟೆಕೆಟ್ಟಿತ್ತು ಎಂದು ಕಾರಣ ಹೇಳಿದ ಜೆಡಿಯು ಶಾಸಕ

 

blank

ಪಿಎಸ್ಐ ಜ್ಞಾನಮೂರ್ತಿ ವಿರುದ್ದ ಕ್ರಮ ಕೈಗೊಳ್ಳುವಂತೆ ಮ್ಯಾಕ್ಸಿ ಕ್ಯಾಬ್ ಚಾಲಕರು ಆಗ್ರಹಪಡಿಸಿದ್ದು, ಪಿಎಸ್ಐ ದೌರ್ಜನ್ಯ ಖಂಡಿಸಿ ಕ್ಯಾಬ್​ಗಳನ್ನು ಠಾಣೆ ಮುಂದೆ ನಿಲ್ಲಿಸಿ ಚಾಲಕರ ಸಂಘದಿಂದ ಪ್ರತಿಭಟನೆ ಕೈಗೊಳ್ಳಲಾಗಿದೆ. ಪ್ರತಿಭಟನೆ ಕೈಗೊಂಡ ನಂತರ ಪಿಎಸ್ಐ ಹಣ ವಾಪಾಸ್ಸ್ ಹಾಕಿದ್ದಾರೆ ಎಂದು ಚಾಲಕ ತಿಳಿಸಿದ್ದಾನೆ.

ಇದನ್ನೂ ಓದಿ: ಕಾರು, ಬೈಕು ಬಿಟ್ಟು ‘ಆಂಬ್ಯುಲೆನ್ಸ್​’ನ್ನೇ ಕದ್ದೊಯ್ದ ಖತರ್ನಾಕ್​ ಕಳ್ಳ!

Source: newsfirstlive.com Source link