ಭೂ ಒತ್ತುವರಿ ಕೇಸ್​: ಪುನರ್​ ಸರ್ವೇ ನಡೆಸುವಂತೆ ಆದೇಶ.. ಸಾರಾ ಹಣಿಯಲು ಸಜ್ಜಾದ್ರಾ ಐಎಎಸ್ ಅಧಿಕಾರಿಗಳು?

ಭೂ ಒತ್ತುವರಿ ಕೇಸ್​: ಪುನರ್​ ಸರ್ವೇ ನಡೆಸುವಂತೆ ಆದೇಶ.. ಸಾರಾ ಹಣಿಯಲು ಸಜ್ಜಾದ್ರಾ ಐಎಎಸ್ ಅಧಿಕಾರಿಗಳು?

ಮೈಸೂರು: ಜಿಲ್ಲೆಯ ಭೂ ಅಕ್ರಮ ಹಗರಣ ಆರೋಪಕ್ಕೆ ಮತ್ತೆ ಮರು ಜೀವ ಬಂದಂತಾಗಿದ್ದು, ಸಾ.ರಾ.ಮಹೇಶ್ ವಿರುದ್ಧ IAS ಅಧಿಕಾರಿ ರೋಹಿಣಿ ಸಿಂಧೂರಿ ಮಾಡಿದ್ದ ಆರೋಪದ ವಿಚಾರವಾಗಿ ಪುನರ್ ಸರ್ವೇ ಮಾಡಲು ಭೂ ದಾಖಲೆಗಳ ಇಲಾಖೆ ಆಯುಕ್ತ ಆದೇಶ ಹೊರಡಿಸಿದ್ದಾರೆ.

ರೋಹಿಣಿ ಸಿಂಧೂರಿ ಮೇಲೆ 14 ಲಕ್ಷ ಬ್ಯಾಗ್​​ ಖರೀದಿಯಲ್ಲಿ 6 ಕೋಟಿ ಭ್ರಷ್ಟಾಚಾರ ಆರೋಪ ಮಾಡಿರುವ ಸಾರಾ ಮಹೇಶ್ ಅವರು ನಿನ್ನೆ ಸಿಎಂಗೆ ದೂರು ನೀಡಿದ್ದರು, ಇದರ ಬೆನ್ನಲ್ಲೇ ಆಯುಕ್ತರ ಆದೇಶದಿಂದ ಶಾಸಕ ಸಾ.ರಾ.ಮಹೇಶ್ ಮತ್ತು ರೋಹಿಣಿ ಸಿಂಧೂರಿ ನಡುವೆ ಮತ್ತೆ ಜಟಾಪಟಿ ಶುರುವಾಗಿದೆ.

ಇದನ್ನೂ ಓದಿ: 14 ಲಕ್ಷ ಬ್ಯಾಗ್​​ ಖರೀದಿಯಲ್ಲಿ 6 ಕೋಟಿ ಭ್ರಷ್ಟಾಚಾರ’- ರೋಹಿಣಿ ಸಿಂಧೂರಿ ವಿರುದ್ಧ ಸಾ.ರಾ ಮಹೇಶ್​ ಗಂಭೀರ ಆರೋಪ

ಸಾರಾ ಮಹೇಶ್ ಕ್ಲೀನ್ ಚಿಟ್ ಗೆ ಬ್ರೇಕ್ ಹಾಕಲು ಮುಂದಾದ ಸರ್ವೇ ಇಲಾಖೆ ಆಯುಕ್ತರು, ಮೈಸೂರು ಅಧಿಕಾರಿಗಳನ್ನು ಹೊರಗಿಟ್ಟು ಸರ್ವೇ ಕಾರ್ಯ ಪುನರ್​ ಆರಂಭಿಸುವಂತೆ ಸೂಚಿಸಿ 10 ದಿನಗಳಲ್ಲಿ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ ಎನ್ನಲಾಗಿದೆ. ಇನ್ನು ಸರ್ವೇ ತಂಡದಲ್ಲಿ ಭೂದಾಖಲೆಗಳ ಉಪ ನಿರ್ದೇಶಕರಾದ ಮಂಡ್ಯದ ಬಿ.ಜಿ.ಉಮೇಶ್, ತುಮಕೂರಿನ ಸುಜಯ್ ಕುಮಾರ್, ದಾವಣಗೆರೆಯ ಟಿ.ಕೆ.ಲೋಹಿತ್​ರನ್ನು ನೇಮಕ ಮಾಡಲಾಗಿದ್ದು, ದಟ್ಟಗಳ್ಳಿ, ಆರ್.ಟಿ.ನಗರ, ಯಡಹಳ್ಳಿ, ಲಿಂಗಾಂಬುದಿಪಾಳ್ಯ ಸೇರಿದಂತೆ ಎಲ್ಲ ಆರೋಪಗಳ ಬಗ್ಗೆಯೂ ಸರ್ವೇ ಮಾಡುವಂತೆ ಸೂಚಿಸಲಾಗಿದೆ.

ಈ ಮೊದಲು ಸರ್ವೇ ನಡೆಸಿ ಒತ್ತುವರಿ ಆಗಿಲ್ಲ ಅಂತ ವರದಿ ಕೊಟ್ಟಿರುವ ಪ್ರಾದೇಶಿಕ ಆಯುಕ್ತರು. ಈಗ ಮತ್ತೆ ಸರ್ವೇ ಮಾಡಲು ಆದೇಶಿಸಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಸಾ.ರಾ.ಮಹೇಶ್ ಹಣಿಯಲು ಐಎಎಸ್ ಅಧಿಕಾರಿಗಳು ಒಂದಾದ್ರಾ ಎಂಬ ಮಾತುಗಳು ಅಲ್ಲಲ್ಲಿ ಗುಲ್ಲೆದ್ದಿವೆ.

ಇದನ್ನೂ ಓದಿ: ರೋಹಿಣಿ ಸಿಂಧೂರಿ ವಿರುದ್ಧ CMಗೆ ದೂರು ನೀಡಿದ ಸಾರಾ ಮಹೇಶ್

Source: newsfirstlive.com Source link