ಮಮತಾ ಬ್ಯಾನರ್ಜಿ ಸಿಎಂ ಸ್ಥಾನದ ಭವಿಷ್ಯ ಸೆ. 30 ಕ್ಕೆ ನಿರ್ಧಾರ; ಉಪಚುನಾವಣೆ ದಿನಾಂಕ ಘೋಷಣೆ

ಮಮತಾ ಬ್ಯಾನರ್ಜಿ ಸಿಎಂ ಸ್ಥಾನದ ಭವಿಷ್ಯ ಸೆ. 30 ಕ್ಕೆ ನಿರ್ಧಾರ; ಉಪಚುನಾವಣೆ ದಿನಾಂಕ ಘೋಷಣೆ

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಬೈ ಎಲೆಕ್ಷನ್​ ಅಖಾಡಕ್ಕೆ ದಿನಾಂಕ ಫಿಕ್ಸ್​ ಆಗಿದೆ. ಸೆಪ್ಟೆಂಬರ್ 30 ರಂದು ಪಶ್ಚಿಮ ಬಂಗಾಳದಲ್ಲಿ ಉಪಚುನಾವಣೆ ನಡೆಯಲಿದೆ. ಈ ಉಪ ಚುನಾವಣೆ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೋ ಇಲ್ಲವೋ ಅನ್ನೋದನ್ನ ನಿರ್ಧರಿಸಲಿದೆ.

ಇದನ್ನೂ ಓದಿ: ‘ಭಾರತದ ಆಸ್ತಿ ಮೋದಿಗೆ ಸೇರಿದ್ದಲ್ಲ, ಸಾರ್ವಜನಿಕರದ್ದು’; ಸಿಎಂ ಮಮತಾ ಬ್ಯಾನರ್ಜಿ ಕಿಡಿ

ಭವಾನಿಪುರ ವಿಧಾನಸಭಾ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದ್ದು ಈ ಕ್ಷೇತ್ರದಿಂದ ಮಮತಾ ಬ್ಯಾನರ್ಜಿ ಕಣಕ್ಕಿಳಿಯಲಿದ್ದಾರೆ. ಸಿಎಂ ಆಗಿ ಉಳಿಯಲು ಮಮತಾ ಗೆಲ್ಲಲೇಬೇಕಿದೆ. ಇನ್ನು ಅಕ್ಟೋಬರ್ 3 ರಂದು ಉಪ ಚುನಾವಣೆ ಮತ ಎಣಿಕೆ ನಡೆಯಲಿದೆ. ಕೋವಿಡ್ -19 ಹಿನ್ನೆಲೆ ಇತರೆ 31 ಕ್ಷೇತ್ರಗಳ ಎಲೆಕ್ಷನ್ ಮುಂದೂಡಲಾಗಿದೆ.

ಇದನ್ನೂ ಓದಿ: ನಂದಿಗ್ರಾಮದಲ್ಲಿ ಸೋಲುಂಡ ಮಮತಾ ಬ್ಯಾನರ್ಜಿ ‘ಘರ್ ವಾಪ್ಸಿ’

ಕೆಲವು ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನಂದಿಗ್ರಾಮದಿಂದ ಸುವೇಂದು ಅಧಿಕಾರಿಯ ವಿರುದ್ಧ ಸ್ಪರ್ಧಿಸಿ ಸೋಲನ್ನಪ್ಪಿದ್ದರು. ಇನ್ನು ಪಕ್ಷ ಭಾರೀ ಜಯಭೇರಿ ಬಾರಿಸಿದ ಹಿನ್ನೆಲೆ ಟಿಎಂಸಿ ಪಕ್ಷ ಅಧಿಕಾರಕ್ಕೆ ಬಂದು ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದರು. ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಬೇಕಾದರೆ ಮಮತಾ ಬ್ಯಾನರ್ಜಿ ಉಪಚುನಾವಣೆಯಲ್ಲಿ ಗೆಲಲ್ಲೇಬೇಕಾದ ಅನಿವಾರ್ಯತೆ ಇದೆ.

Source: newsfirstlive.com Source link