ಕೃಷಿಕರ ಮಗಳಾದ ನನಗೆ ಕೃಷಿ ಮಂತ್ರಿಯಾಗೋ ಅವಕಾಶ ಸಿಕ್ಕಿದೆ‌- ಶೋಭಾ ಕರಂದ್ಲಾಜೆ

ಕೃಷಿಕರ ಮಗಳಾದ ನನಗೆ ಕೃಷಿ ಮಂತ್ರಿಯಾಗೋ ಅವಕಾಶ ಸಿಕ್ಕಿದೆ‌- ಶೋಭಾ ಕರಂದ್ಲಾಜೆ

ಕಲಬುರಗಿ: ಕಲಬುರಗಿಯಲ್ಲಿ ಕೇಂದ್ರ ಕೃಷಿ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ.. ಕೃಷಿಕರ ಮಗಳಾದ ನನಗೆ ಕೃಷಿ ಮಂತ್ರಿ ಆಗೋ ಅವಕಾಶ ಸಿಕ್ಕಿದೆ‌. ನಾನು ಕೃಷಿ ತಜ್ಞಳಲ್ಲ, ಕೃಷಿ ತಜ್ಞರ ಮಾಹಿತಿ ಆಧರಿಸಿ ಕೆಲಸ ಮಾಡುತ್ತೇನೆ.. ಕೃಷಿ ಖಾತೆ ಬಹಳ ಕಷ್ಟಕರವಾದ ಖಾತೆ ಎಂದಿದ್ದಾರೆ.

ರೈತರು ಹಲವಾರು ವರ್ಷಗಳಿಂದ ಕಷ್ಟದಲ್ಲಿದ್ದಾರೆ

ರೈತರು ಹಲವಾರು ವರ್ಷಗಳಿಂದ ಕಷ್ಟದಲ್ಲಿದ್ದಾರೆ.. ಎಷ್ಟೇ ಕೃಷಿ ಮಾಡಿದ್ರೂ ನೆಮ್ಮದಿ ಅನಿಸಿಲ್ಲ. ಕೃಷಿ ಲಾಭದಾಯಕ ಅಲ್ಲ ಎನಿಸಿದೆ, ಹೀಗಾಗಿ ಕೃಷಿಕರ ಮಕ್ಕಳು ಕೆಲಸಕ್ಕಾಗಿ ವಲಸೆ ಹೋಗ್ತಿದ್ದಾರೆ ಕೃಷಿಕ, ಕೃಷಿಯಲ್ಲಿರುವ ಹಾಗೆ ಮಾಡೋದು ಸವಾಲಿನ ಕೆಲಸ. ಕೇಂದ್ರ ಸರ್ಕಾರದ ಕೃಷಿ ಸವಲತ್ತುಗಳನ್ನು ರೈತರು ಪಡೆದುಕೊಳ್ಳಬೇಕು. ಇಂದು ಸಮಾಜ ಮತ್ತೆ ಕೃಷಿ ಕಡೆ ಮುಖ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.

ಕೃಷಿ ಉತ್ಪನ್ನ ರಫ್ತು ಮಾಡುವಲ್ಲಿ ನಾವು 9 ನೇ ಸ್ಥಾನಕ್ಕೆ ಬಂದಿದ್ದೇವೆ..

2014 ರ ಚುನಾವಣೆಯಲ್ಲಿ ಯುಪಿಎ ಸರ್ಕಾರದ ಬಜೆಟ್ 23 ಸಾವಿರ ಕೋಟಿ ಮಾತ್ರ.. 2021 ರಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ಬಜೇಟ್ 1,23,000 ಕೋಟಿ. ನಮ್ಮ ದೇಶದ ಕೃಷಿಯನ್ನ ವೈಜ್ಞಾನಿಕಗೊಳಿಸೋದು. ಕೃಷಿ ಉತ್ಪನ್ನ ರಫ್ತು ಮಾಡುವಲ್ಲಿ ನಾವು 9 ನೇ ಸ್ಥಾನಕ್ಕೆ ಬಂದಿದ್ದೇವೆ.. 70% ನಷ್ಟು ಎಣ್ಣೆ ಕಾಳುಗಳನ್ನು ಬೇರೆ ದೇಶದಿಂದ ತರಿಸಿಕೊಳ್ಳುತ್ತಿದ್ದೇವೆ. ಎಣ್ಣೆ ಕಾಳಿನಲ್ಲಿ ನಾವು ಸ್ವಾವಲಂಬಿ ಆಗಬೇಕು.. ಅದಕ್ಕಾಗಿ ಎಣ್ಣೆ ಕಾಳು ಬಿತ್ತನೆ ಬೀಜಗಳನ್ನು ನಾವು ರೈತರಿಗೆ ಉಚಿತವಾಗಿ ಕೊಡುತ್ತಿದ್ದೇವೆ.. ದೇಶದ ಜಿಡಿಪಿಯಲ್ಲಿ ಕೃಷಿಯ ಪಾಲು 20.22 ಪರ್ಸೆಂಟ್.. ಸಣ್ಣ ರೈತರನ್ನು ಒಟ್ಟುಗೂಡಿಸಿ ಸಂಘಗಳನ್ನು ಮಾಡುವ ಕೆಲಸ ಮಾಡಬೇಕಾಗುತ್ತದೆ. ಸಣ್ಣ ರೈತರಿಗೆ ಕೃಷಿ ಸಾಧನಗಳನ್ನು ಬಾಡಿಗೆಗೆ ಕೊಡುವ ಕೆಲಸ ಮಾಡಬೇಕಿದೆ‌.

ರೈತರ ಆತ್ಮಹತ್ಯೆಗಳು ಕಡಿಮೆ ಆಗಬೇಕಾದ್ರೆ, ರೈತರು ಮಿಶ್ರ ಬೆಳೆಗಳನ್ನು ಬೆಳೆಯಬೇಕು

ಕೃಷಿ ಉತ್ಪನ್ನ ಉತ್ಪಾದನೆ, ಪ್ರೊಸೆಸ್, ಮಾರ್ಕೆಟಿಂಗ್​ಗೆ ಕೇಂದ್ರ ಸರ್ಕಾರ ಒತ್ತು ಕೊಡುತ್ತಿದೆ. ಇಥೆನಾಲ್ ಬೇಸ್ ಸಕ್ಕರೆ ಕಾರ್ಖಾನೆ ಆಗಬೇಕು. ಸಕ್ಕರೆ ಕಾರ್ಖಾನೆಗಳಿಗೆ ಈಗಾಗಲೇ ಕೇಂದ್ರ ಸರ್ಕಾರ ಸೂಚನೆ ಕೊಟ್ಟಿದೆ. ತೊಗರಿ ಕಾಳಿಗೆ 6,300, ಹೆಸರು ಕಾಳಿಗೆ 7,200 ರೂ. ಎಂಎಸ್ ಪಿ ನಿಗದಿ ಮಾಡಲಾಗಿದೆ. ಕೃಷಿ ಸಚಿವೆಯಾಗಿ ಕೆಲಸ ಮಾಡಲು ನಮ್ಮ ನಾಯಕರು ಅವಕಾಶ ಕೊಟ್ಟಿದ್ದಾರೆ, ಅತ್ಯಂತ ಪ್ರಮಾಣಿಕ, ಪಾರದರ್ಶಕವಾಗಿ ಕೆಲಸ ಮಾಡುತ್ತೇನೆ.. ರೈತರ ಆತ್ಮಹತ್ಯೆಗಳು ಕಡಿಮೆ ಆಗಬೇಕಾದ್ರೆ, ರೈತರು ಮಿಶ್ರ ಬೆಳೆಗಳನ್ನು ಬೆಳೆಯಬೇಕು. ರೈತರ ಆತ್ಮಹತ್ಯೆ ಕಡಿಮೆ ಆಗಬೇಕು ಅಂದ್ರೆ ರೈತನಿಗೆ ಆದಾಯ ಹೆಚ್ಚಾಗಬೇಕು. ಬೆಂಗಳೂರಿನಲ್ಲಿ ಸೆಪ್ಟೆಂಬರ್‌ 22 ರಂದು ಕೃಷಿ ತಜ್ಞರ ಸಭೆ ಇಟ್ಟುಕೊಂಡಿದ್ದೇವೆ ಎಂದು ಹೇಳಿದ್ದಾರೆ.

Source: newsfirstlive.com Source link