#BIGBREAKING ಮನಸೋ ಇಚ್ಛೆ ಗಾಳಿಯಲ್ಲಿ ಗುಂಡು ಹಾರಿಸಿದ ತಾಲಿಬಾನಿಗಳು.. 17 ಸಾವು 41 ಮಂದಿಗೆ ಗಾಯ

#BIGBREAKING ಮನಸೋ ಇಚ್ಛೆ ಗಾಳಿಯಲ್ಲಿ ಗುಂಡು ಹಾರಿಸಿದ ತಾಲಿಬಾನಿಗಳು.. 17 ಸಾವು 41 ಮಂದಿಗೆ ಗಾಯ

ಕಾಬೂಲ್​ನಲ್ಲಿ ತಾಲಿಬಾನಿಗಳು ಮನಸೋ ಇಚ್ಛೆ ಗಾಳಿಯಲ್ಲಿ ಗುಂಡು ಹಾರಿಸಿದ ಪರಿಣಾಮ 17 ಮಂದಿ ಸಾವನ್ನಪ್ಪಿದ್ದು 41 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಬಂದೂಕುಗಳನ್ನು ಹಿಡಿದ ತಾಲಿಬಾನಿ ಫೈಟರ್​ಗಳು ಇದ್ದಕ್ಕಿದ್ದಂತೆ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಇದರ ಪರಿಣಾಮ 17 ಮಂದಿ ದುರ್ಮರಣವನ್ನಪ್ಪಿದ್ದಾರೆ.

ಇನ್ನು ತಾಲಿಬಾನಿಗಳ ವಕ್ತಾರ ಜಬೀಹುಲ್ಲಾ ಮುಜಾಹಿದ್ ಟ್ವಿಟರ್​ನಲ್ಲಿ ತಮ್ಮ ಫೈಟರ್​ಗಳ ಈ ನಡೆಯನ್ನು ಖಂಡಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ತಕ್ಷಣವೇ ಹೀಗೆ ಮನಸೋ ಇಚ್ಛೆ ಗುಂಡುಹಾರಿಸುವುದನ್ನು ನಿಲ್ಲಿಸುವಂತೆ ಹೇಳಿದ್ದಾರೆ ಎನ್ನಲಾಗಿದೆ.

ಕಾಬೂಲ್ ಏರ್​ಪೋರ್ಟ್​ ಬಳಿ ನಡೆದ ಆತ್ಮಾಹುತಿ ದಾಳಿಯಲ್ಲಿ ಗಾಯಗೊಂಡವರನ್ನು ಚಿಕಿತ್ಸೆಗೆ ಸೇರಿಸಲಾಗಿದ್ದ ಆಸ್ಪತ್ರೆ ಬಳಿಯೇ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

Source: newsfirstlive.com Source link