ನದಿಯಲ್ಲಿ ಈಜುವ ವೇಳೆ ಮೊಸಳೆ ಬಾಯಿಗೆ ಸಿಲುಕಿ ರೈತ ಸಾವು

ನದಿಯಲ್ಲಿ ಈಜುವ ವೇಳೆ ಮೊಸಳೆ ಬಾಯಿಗೆ ಸಿಲುಕಿ ರೈತ ಸಾವು

ಬಳ್ಳಾರಿ: ನದಿಯಲ್ಲಿ ಈಜಿಕೊಂಡು ಹೋಗ್ತಿದ್ದ ವ್ಯಕ್ತಿಯೋರ್ವ ಮೊಸಳೆ ಬಾಯಿಗೆ ಸಿಲುಕಿ ಮೃತಪಟ್ಟ ಘಟನೆ ಜಿಲ್ಲೆಯ ಸಿರಗುಪ್ಪ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ನಡೆದಿದೆ.

ರೈತ ವೀರೇಶ್ (38) ಮೃತ ದುರ್ದೈವಿ. ಮೃತ ರೈತ ನದಿಯಲ್ಲಿ ಈಜಿಕೊಂಡು ಕೃಷಿ ಚಟುವಟಿಕೆಗೆ ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಈಜುತ್ತಿದ್ದಾಗ ಏಕಾಏಕಿ ದಾಳಿ ಮಾಡಿದ ಮೊಸಳೆ ರೈತನ ತೊಡೆ ಭಾಗಕ್ಕೆ ಕಚ್ಚಿದ್ದು, ತೀವ್ರವಾಗಿ ಗಾಯಗೊಂಡಿದ್ದ ರೈತ ಅಸುನೀಗಿದ್ದಾನೆ ಎನ್ನಲಾಗಿದೆ. ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕೊರೊನಾ ಲಸಿಕೆಗೆ ಹೆದರಿ ಮರವೇರಿ ಕುಳಿತ ಭೂಪ!

Source: newsfirstlive.com Source link