ಅಕ್ರಮ ಗಣಿಗಾರಿಕೆ ವಿರುದ್ಧ ಸುಮಲತಾ ಹೋರಾಟ; ಗಣಿ ಸಚಿವರ ಭೇಟಿಯಾಗಿ ಕೊಟ್ಟ ದೂರು ಏನು..?

ಅಕ್ರಮ ಗಣಿಗಾರಿಕೆ ವಿರುದ್ಧ ಸುಮಲತಾ ಹೋರಾಟ; ಗಣಿ ಸಚಿವರ ಭೇಟಿಯಾಗಿ ಕೊಟ್ಟ ದೂರು ಏನು..?

ಬೆಂಗಳೂರು: ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಡುತ್ತಿರುವ ಸಂಸದೆ ಸುಮಲತಾ ಅಂಬರೀಶ್​ ಅವರು ಇಂದು ಗಣಿ, ಮಹಿಳಾ ಮತ್ತು ಮಕ್ಳಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಅವರನ್ನ ಭೇಟಿ ಮಾಡಿದರು.

ಇದನ್ನೂ ಓದಿ: ಭಾಷಣದ ವೇಳೆ ಊಟಕ್ಕೆ ಮುಗಿಬಿದ್ದ ಮಹಿಳಾ ಕಾರ್ಯಕರ್ತರು; ಇಂಥವ್ರನ್ನ ಕರೆ ತರಬಾರದು ಎಂದ ಮಾಜಿ ಪಿಎಂ

ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಹಾಲಪ್ಪ ಆಚಾರ್ ಕೊಠಡಿಯಲ್ಲಿ ಭೇಟಿಯಾಗಿ ಮಂಡ್ಯ ಜಿಲ್ಲೆಯ ಅಕ್ರಮ ಗಣಿಗಾರಿಕೆ ಸಂಬಂಧ ಚರ್ಚೆ ನಡೆಸಿದರು. ಜಿಲ್ಲೆಯಲ್ಲಿ ಈಗಲೂ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದೆ. ಹೀಗಾಗಿ ಜಿಲ್ಲೆಗೆ ಭೇಟಿ ನೀಡಿ ಪರಿಶೀಲಿಸುವಂತೆ ಸಚಿವರಿಗೆ ಮನವಿ ಮಾಡಿಕೊಂಡರು.

blank

ಇದನ್ನೂ ಓದಿ: ಸುಮಲತಾ ಸ್ವಂತ ಮನೆ ನಿರ್ಮಾಣ ಹಿಂದಿದೆಯಾ ಪುತ್ರನ ರಾಜಕೀಯ ಭವಿಷ್ಯ ಲೆಕ್ಕಾಚಾರ?

ಇದೇ ವೇಳೆ ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು. ಕಾರ್ಯಕರ್ತೆಯರ ಸಹಾಯಧನ ಹೆಚ್ಚಳ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಚಿವರ ಜೊತೆ ಚರ್ಚೆ ಮಾಡಿದರು. ಈ ಸಂದರ್ಭದಲ್ಲಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಉಪಸ್ಥಿತಿ ಇದ್ದರು.

ಪುತ್ರನ ರಾಜಕೀಯ ಎಂಟ್ರಿ ಬಗ್ಗೆ ಹೇಳಿದ್ದೇನು..?
ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದೆ ಸುಮಲತಾ.. ಮಂಡ್ಯ ಜಿಲ್ಲೆಯ ಅಕ್ರಮ ಕಲ್ಲು ಗಣಿಗಾರಿಕೆ ಬಗ್ಗೆ ಸಚಿವರ ಜೊತೆ ಚರ್ಚಿಸಿದೆ. ಸಚಿವರನ್ನೂ ಜಿಲ್ಲೆಗೆ ಭೇಟಿ ನೀಡುವಂತೆ ಮನವಿ ಮಾಡಿದ್ದೇನೆ. ಅವರೂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು, ಆಶಾಕಾರ್ಯಕರ್ತೆರ ಬಗ್ಗೆಯೂ ಸಚಿವರ ಜೊತೆ ಚರ್ಚಿಸಿದೆ.

ಇದನ್ನೂ ಓದಿ: ರೋಹಿಣಿ ಸಿಂಧೂರಿ ವಿರುದ್ಧ CMಗೆ ದೂರು ನೀಡಿದ ಸಾರಾ ಮಹೇಶ್

ಅಭಿಷೇಕ್ ಅಂಬರೀಶ್ ರಾಜಕೀಯ ಪ್ರವೇಶ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ.. ಅಭಿಷೇಕ್ ಈಗ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಕಡೆ ಹೆಚ್ಚು ಗಮನಕೊಟ್ಟಿದ್ದಾರೆ. ವಿಧಾನಸಭಾ ಚುನಾವಣೆಗೆ 20 ತಿಂಗಳು ಇದೆ. ಆಗ ನೋಡೋಣ ಏನಾಗಲಿದೆಯೋ ಅಂತಾ. ಅಭಿಮಾನಿಗಳಿಂದ ಒತ್ತಾಯ ಬಂದರೆ ನೋಡೋಣ. ಸದ್ಯಕ್ಕಂತೂ ಸಿನಿಮಾಗಳ ಕಡೆ ಗಮನಹರಿಸಿದ್ದಾರೆ ಅಂತಾ ತಿಳಿಸಿದರು.

ಇದನ್ನೂ ಓದಿ: ‘ನೀವೆಲ್ಲ ಹಿಂಗ್​ ಮಾಡೋದು ತಪ್ಪು ಅಲ್ವೇನಣ್ಣ?’ -ಅಭಿಷೇಕ್ ನಗೆ ಚಟಾಕಿ

Source: newsfirstlive.com Source link