ಗೋವಿಂದಪುರ ಡ್ರಗ್ಸ್ ಕೇಸ್: ಪೊಲೀಸರಿಂದ ಸೋನಿಯಾ ತಂದೆ, ಸ್ನೇಹಿತರ ವಿಚಾರಣೆ

ಗೋವಿಂದಪುರ ಡ್ರಗ್ಸ್ ಕೇಸ್: ಪೊಲೀಸರಿಂದ ಸೋನಿಯಾ ತಂದೆ, ಸ್ನೇಹಿತರ ವಿಚಾರಣೆ

ಬೆಂಗಳೂರು: ಗೋವಿಂದಪುರ ಡ್ರಗ್ಸ್ ಕೇಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಸ್ಫೋಟಕ ಮಾಹಿತಿಗಳು ದಿನ ಕಳೆದಂತೆ ಹೋರ ಬೀಳುತ್ತಿವೆ. ಡ್ರಗ್ಸ್ ಕೇಸ್ ಸಂಬಂಧ ವಿಚಾರಣೆ ಚುರುಕುಗೊಳಿಸಿರೋ ಪೊಲೀಸ್ರು ತೀವ್ರ ತನಿಖೆ ನಡೆಸಿದ್ದು, ಮೊಬೈಲ್ ರಿಟ್ರೀವ್ ಮಾಹಿತಿಗಾಗಿ ಕಾಯುತ್ತಿದ್ದಾರೆ.

ಪ್ರಕರಣದ ಪ್ರಮುಖ ಸಾಕ್ಷ್ಯಾಧಾರಗಳೆನ್ನಲಾದ ಮೊಬೈಲ್​ನಲ್ಲಿನ ಮೇಸೆಜ್​ಗಳನ್ನು ಕಾಸ್ಪ್ಮೆಟಿಕ್ ರಾಣಿ ಸೋನಿಯಾ ಅಗರ್​ವಾಲ್ ಐಟಿಸಿ ಗಾರ್ಡೇನಿಯಾನಲ್ಲಿರುವಾಗ ಡಿಲೀಟ್ ಮಾಡಿರೋ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಗೋವಿಂದಪುರ ಡ್ರಗ್ಸ್​ ಕೇಸ್: ಪೊಲೀಸರಿಂದ ದಾಳಿಗೊಳಗಾದವರ ಹಿಸ್ಟರಿ ಹೇಗಿದೆ..?

ಸದ್ಯ ಆಕೆಯ ತಂದೆಯ ಬಳಿಯೂ ಮಾಹಿತಿ ಪಡೆದಿರೋ ಪೊಲೀಸ್ರು, ಆಕೆಯ ಸ್ನೇಹಿತರ ಬಳಿಯೂ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ. ಜೊತೆಗೆ ಆಕೆಗೆ ಆತ್ಮೀಯರಾಗಿರೋ ಮೂವರ ಬಳಿ ಈಗಾಗಲೇ ಮಾಹಿತಿ ಕಲೆ ಹಾಕಿರೋ ಡಿಜೆ ಹಳ್ಳಿ ಪೊಲೀಸರು ಆಕೆ ಎಲ್ಲೆಲ್ಲಿ ಪಾರ್ಟಿ ಮಾಡ್ತಿದ್ಳು ಅನ್ನೋದರ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ಯಾರ್ಯಾರಿಗೆ ಡ್ರಗ್ಸ್ ಸಫ್ಲೈ ಮಾಡಿದ್ದಾಳೆ ಎಂಬುದು ಕೂಡ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಡ್ರಗ್​ ಪಡೆದವರಿಗೂ ಈಗ ಖಾಕಿ ಬಲೆ ಬೀಸಿ ಹುಡುಕಾಟ ಆರಂಭಿಸಿದೆ.

ಇದನ್ನೂ ಓದಿ: ಗೋವಿಂದಪುರ ಡ್ರಗ್ಸ್​ ಕೇಸ್: ಬೆಳ್ಳಂಬೆಳಗ್ಗೆ ಸೆಲಿಬ್ರಿಟಿಗಳ ಮನೆ ಮೇಲೆ ಪೊಲೀಸ್ ದಾಳಿ

Source: newsfirstlive.com Source link