ಉತ್ತರ ಪ್ರದೇಶದಲ್ಲಿ ಕೊರೊನಾ ಬೆನ್ನಲ್ಲೀಗ ಡೆಂಗ್ಯೂ ಹಾವಳಿ; 50 ಮಕ್ಕಳು ಸೇರಿ 60 ಮಂದಿ ಬಲಿ

ಉತ್ತರ ಪ್ರದೇಶದಲ್ಲಿ ಕೊರೊನಾ ಬೆನ್ನಲ್ಲೀಗ ಡೆಂಗ್ಯೂ ಹಾವಳಿ; 50 ಮಕ್ಕಳು ಸೇರಿ 60 ಮಂದಿ ಬಲಿ

ನವದೆಹಲಿ: ಮಾರಕ ಕೊರೊನಾ ವೈರಸ್​​ ಬೆನ್ನಲ್ಲೀಗ ಉತ್ತರ ಪ್ರದೇಶದಲ್ಲಿ ಡೆಂಗ್ಯೂ ಅಟ್ಟಹಾಸ ಮುಂದುವರಿದಿದೆ. ಈ ಡೆಂಗ್ಯೂ ಜ್ವರದ ಅಟ್ಟಹಾಸಕ್ಕೆ ಇದುವರೆಗೂ 50 ಮಕ್ಕಳು ಸೇರಿದಂತೆ 60 ಮಂದಿ ಅಸುನೀಗಿದ್ದಾರೆ ಎಂದು ಸಿಎಂ ಯೋಗಿ ಆದಿತ್ಯನಾಥ್​​ ನೇತೃತ್ವದ ಬಿಜೆಪಿ ಸರ್ಕಾರ ಮಾಹಿತಿ ನೀಡಿದೆ.

ಕಳೆದ ಹತ್ತು ದಿನಗಳಿಂದ ಪಶ್ಚಿಮ ಉತ್ತರ ಪ್ರದೇಶ ಭಾಗದಲ್ಲಿ ಡೆಂಗ್ಯೂ ತೀವ್ರವಾಗಿ ಬಾಧಿಸುತ್ತಿರುವ ಪರಿಣಾಮ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಶೇಕಡ 50ರಷ್ಟು ಡೆಂಗ್ಯೂ ಕೇಸುಗಳು ಇಲ್ಲಿನ ಫರಿದಾಬಾದ್​​​ ಭಾಗದಲ್ಲಿ ವರದಿಯಾಗಿವೆ.

ಇಲ್ಲಿಯವರೆಗೂ ಸುಮಾರು 200 ಸ್ಯಾಂಪಲ್ಸ್ ಪರೀಕ್ಷೆಗೆ ಒಳಪಡಿಸಲಾಗಿದೆ. ಫರಿದಾಬಾದ್‌, ಮಥುರಾ, ಪ್ರಯಾಗ್​​ರಾಜ್​​ ಭಾಗದಲ್ಲಿ ಡೆಂಗ್ಯೂ ಉಲ್ಬಣಗೊಂಡಿದೆ. ಹೀಗಾಗಿ ಪ್ರಯಾಗ್ ರಾಜ್ ಸುತ್ತಮುತ್ತ ಒಟ್ಟು 34 ಪ್ರಕರಣಗಳು ಪತ್ತೆಯಾಗಿವೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಡೆಂಘೀ ಢವ ಢವ..

ಇನ್ನು, ಆರು ಮಂದಿಯನ್ನು ಒಳಗೊಂಡ ಕೇಂದ್ರದ ತಜ್ಞರ ತಂಡ ಡೆಂಗ್ಯೂ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತಾದ ವರದಿಯನ್ನು ತಜ್ಞರ ತಂಡ ಸೋಮವಾರ ಕೇಂದ್ರಕ್ಕೆ ನೀಡುವ ಸಾಧ್ಯತೆ ಇದೆ.

Source: newsfirstlive.com Source link