ಪುತ್ರನ ರಾಜಕೀಯ ಎಂಟ್ರಿ ಬಗ್ಗೆ ಸುಮಲತಾ ಕೊಟ್ಟ ಹಿಂಟ್ ಏನು ಗೊತ್ತಾ..?

ಪುತ್ರನ ರಾಜಕೀಯ ಎಂಟ್ರಿ ಬಗ್ಗೆ ಸುಮಲತಾ ಕೊಟ್ಟ ಹಿಂಟ್ ಏನು ಗೊತ್ತಾ..?

ಬೆಂಗಳೂರು: 2023ರ ವಿಧಾನಸಭೆ ಚುನಾವಣೆಯಲ್ಲಿ ಅಖಾಡಕ್ಕೆ ಇಳಿಯುವ ಮೂಲಕ ಅಭಿಷೇಕ್ ಅಂಬರೀಶ್​, ರಾಜಕೀಯದಲ್ಲಿ ನೆಲೆ ಕಂಡುಕೊಳ್ಳುತ್ತಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.

ಇದನ್ನೂ ಓದಿ: ಭಾಷಣದ ವೇಳೆ ಊಟಕ್ಕೆ ಮುಗಿಬಿದ್ದ ಮಹಿಳಾ ಕಾರ್ಯಕರ್ತರು; ಇಂಥವ್ರನ್ನ ಕರೆ ತರಬಾರದು ಎಂದ ಮಾಜಿ ಪಿಎಂ

ಇದೇ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿರುವ ಸುಮಲತಾ ಅಂಬರೀಶ್, ಈಗ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಕಡೆ ಹೆಚ್ಚು ಗಮನಕೊಟ್ಟಿದ್ದಾರೆ. ವಿಧಾನಸಭಾ ಚುನಾವಣೆಗೆ 20 ತಿಂಗಳು ಇದೆ. ಆಗ ನೋಡೋಣ ಏನಾಗಲಿದೆಯೋ ಅಂತಾ. ಅಭಿಮಾನಿಗಳಿಂದ ಒತ್ತಾಯ ಬಂದರೆ ನೋಡೋಣ. ಸದ್ಯಕ್ಕಂತೂ ಸಿನಿಮಾಗಳ ಕಡೆ ಗಮನಹರಿಸಿದ್ದಾರೆ ಅಂತಾ ತಿಳಿಸಿದರು.

blank

ಇದನ್ನೂ ಓದಿ: ಸುಮಲತಾ ಸ್ವಂತ ಮನೆ ನಿರ್ಮಾಣ ಹಿಂದಿದೆಯಾ ಪುತ್ರನ ರಾಜಕೀಯ ಭವಿಷ್ಯ ಲೆಕ್ಕಾಚಾರ?

2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಜನರಿಗೆ ಮಾತು ಕೊಟ್ಟಂತೆ ಸಂಸದೆ ಸುಮಲತಾ ಅಂಬರೀಶ್ ಅವರು ಜಿಲ್ಲೆಯಲ್ಲಿ ಸ್ವತಃ ಮನೆ ನಿರ್ಮಾಣ ಮಾಡಲು ಇಂದು ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಇದೇ ವೇಳೆ ಸುಮಲತಾ ಅವರು ಸ್ವತಃ ನಿವಾಸ ನಿರ್ಮಿಸುವುದರ ಹಿಂದೆ ಪುತ್ರ ಅಭಿಷೇಕ್​ ಅವರ ರಾಜಕೀಯ ಭವಿಷ್ಯದ ಚಿಂತನೆ ದೂರದೃಷ್ಟಿ ಇದೆ ಎಂಬ ಮಾತು ಮಂಡ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ರೋಹಿಣಿ ಸಿಂಧೂರಿ ವಿರುದ್ಧ CMಗೆ ದೂರು ನೀಡಿದ ಸಾರಾ ಮಹೇಶ್

ಇದನ್ನೂ ಓದಿ: ‘ನೀವೆಲ್ಲ ಹಿಂಗ್​ ಮಾಡೋದು ತಪ್ಪು ಅಲ್ವೇನಣ್ಣ?’ -ಅಭಿಷೇಕ್ ನಗೆ ಚಟಾಕಿ

Source: newsfirstlive.com Source link