ಅತ್ಯಾಚಾರನೂ ಇಲ್ಲ, ಏನೂ ಇಲ್ಲ ಅವರಿಬ್ಬರು ನಾಟಕವಾಡುತ್ತಿದ್ರು: ಎಸ್‍ಟಿಎಸ್

ಯಾದಗಿರಿ: ಅತ್ಯಾಚಾರ ನಡೆದಿಲ್ಲ ಅವರಿಬ್ಬರು ಸ್ನೇಹಿತರೇ, ಅವರಿಬ್ಬರು ನಾಟಕವಾಡುತ್ತಿದ್ದರು. ಪೊಲೀಸರು ಆಕ್ಷನ್ ತೆಗೆದುಕೊಂಡರು. ಆಗ ಗೊತ್ತಾಗಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಅತ್ಯಾಚಾರನೂ ಇಲ್ಲ, ಏನೂ ಇಲ್ಲ ಎಂದು ಪ್ರಕರಣವನ್ನು ಅಲ್ಲಗೆಳೆದರು.

ಇದೇ ವೇಳೆ ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರಿಕೆ ವಿಚಾರವಾಗಿ ಮಾತನಾಡಿ, ಒಂದು ಸಲ ಜಾಸ್ತಿ ಒಂದು ಸಲ ಕಡಿಮೆ ಆಗುತ್ತೆ. ಕೇಂದ್ರ ಸರ್ಕಾರ ಸಮತೋಲನ ಮಾಡಿಕೊಳ್ಳುತ್ತಾ ಕೆಲಸ ಮಾಡುತ್ತೆ. ಇದರಲ್ಲಿ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಅಂತ ಅಲ್ಲ ಎಂದರು. ಇದನ್ನೂ ಓದಿ: ಕೊಲ್ಲೂರು ಸನ್ನಿಧಾನ ಪ್ರವೇಶಕ್ಕೆ ಆಧಾರ್ ಕಡ್ಡಾಯ – ಉಡುಪಿ ಜಿಲ್ಲಾಡಳಿತ ಆದೇಶ

ಗಣೇಶೋತ್ಸವಕ್ಕೆ ಅವಕಾಶ ನೀಡುವ ವಿಚಾರವಾಗಿ, ಗಣೇಶೋತ್ಸವ ಭಾವನಾತ್ಮಕ ಸಂಬಂಧ ಇರುವಂತದ್ದು. ಇದೆ 5 ರಂದು ಸಿಎಂ ಸಭೆ ಮಾಡ್ತಾರೆ ಕಳೆದ ವಾರ ಒಂದು ಸಭೆ ಆಗಿದೆ. ಎಲ್ಲಾ ಡಿಸಿ ಮತ್ತು ಎಸ್‍ಪಿ ಅವರು ಗಣೇಶೋತ್ಸವ ಎಲ್ಲೆಲ್ಲಿ ಎಷ್ಟು ದಿನ ಮಾಡ್ಬೇಕು ಅಂತ ಮಾಹಿತಿ ಕೊಟ್ಟಿದ್ದಾರೆ. ತಜ್ಞರ ಸಮಿತಿ ಜೊತೆ ಸಿಎಂ ಅವರು ಮತ್ತೊಮ್ಮೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ:ಬೊಮ್ಮಾಯಿಯವರು ಮಾಜಿ ಮುಖ್ಯಮಂತ್ರಿಗಳಂತೆ ನಮ್ಮ ಸಮಾಜಕ್ಕೆ ಮೋಸ ಮಾಡುವುದಿಲ್ಲ: ಯತ್ನಾಳ್

blank

ಗಣೇಶೋತ್ಸವಕ್ಕೆ ಅವಕಾಶ ಕೊಡ್ತಾರೆ. ಕಾರ್ಯಕ್ರಮ ಎಷ್ಟು ದಿನ ಮಾಡ್ಬೇಕು ಎಲ್ಲಲ್ಲಿ ಮಾಡಬೇಕು. ಯಾರು ಯಾರಿಗೆ ಅನುಮತಿ ಕೊಡಬೇಕು ಅನ್ನೋದನ್ನು ಸಿಎಂ ಇದೇ ತಿಂಗಳ 5 ರಂದು ತೀರ್ಮಾನ ಮಾಡ್ತಾರೆ ಎಂದು ಹೇಳಿದರು.

Source: publictv.in Source link