ವಿಧಾನಸಭೆ ಚುನಾವಣೆ ತಯಾರಿ: ‘ಆಪರೇಷನ್​​ ಹಸ್ತ’ಕ್ಕೆ ಕಾಂಗ್ರೆಸ್​ ಮಾಸ್ಟರ್​ ಪ್ಲಾನ್..!

ವಿಧಾನಸಭೆ ಚುನಾವಣೆ ತಯಾರಿ: ‘ಆಪರೇಷನ್​​ ಹಸ್ತ’ಕ್ಕೆ ಕಾಂಗ್ರೆಸ್​ ಮಾಸ್ಟರ್​ ಪ್ಲಾನ್..!

ಬೆಂಗಳೂರು: 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಶತಾಯಗತಾಯ ಗೆಲ್ಲಲು ಮುಂದಾಗಿದೆ. ಹೀಗಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ ಬಿಜೆಪಿ ಮತ್ತು ಜೆಡಿಎಸ್​​ ನಾಯಕರ ಪಟ್ಟಿ ಕೈಯಲ್ಲೇ ಹಿಡಿದುಕೊಂಡು ಆಪರೇಷನ್​​ ಹಸ್ತಕ್ಕೆ ತಯಾರಿ ನಡೆಸಿಕೊಂಡಿದ್ದಾರೆ. ಈ ಮಧ್ಯೆಯೇ ಚುನಾವಣಾ ಮೈತ್ರಿ ಮತ್ತು ಆಪರೇಷನ್​​ ಹಸ್ತಕ್ಕೆ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದ್ದಾರೆ ಡಿ.ಕೆ ಶಿವಕುಮಾರ್​​​.

ಚುನಾವಣಾ ಮೈತ್ರಿ, ಆಪರೇಷನ್ ಹಸ್ತಕ್ಕೆ ಮುಂದಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​​ ಮತ್ತು ಸಿದ್ದರಾಮಯ್ಯ ವಿಧಾನ ಪರಿಷತ್, ಜಿಲ್ಲಾ ಪಂಚಾಯತ್​​​ ಚುನಾವಣೆ ಕುರಿತು ಸ್ಥಳೀಯ ನಾಯಕರ ಸಭೆ ನಡೆಸಲಾಗುತ್ತಿದೆ. ಜಿಲ್ಲಾವಾರು ಕಾಂಗ್ರೆಸ್​ ನಾಯಕರ ಸಭೆಯಲ್ಲಿ ಎರಡು ವಿಷಯಗಳ ಭಾರೀ ಸದ್ದು ಮಾಡುತ್ತಿವೆ.

ನಿಮ್ಮ ಜಿಲ್ಲೆಯಲ್ಲಿ ಯಾರೊಂದಿಗೆ ಕಾಂಗ್ರೆಸ್​ ರಾಜಕೀಯವಾಗಿ ಹೊಂದಾಣಿಕೆ ಮಾಡಿಕೊಳ್ಳಬಹುದು? ಯಾರಿಗೆ ಕಾಂಗ್ರೆಸ್ ಸೇರುವ ಆಸೆ ಇದೆ ಎಂದು ಡಿ.ಕೆ ಶಿವಕುಮಾರ್​​​​ ಜಿಲ್ಲಾವಾರು ನಾಯಕರ ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದಾರೆ.

ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ವಿರುದ್ಧ ಸುಮಲತಾ ಹೋರಾಟ; ಗಣಿ ಸಚಿವರ ಭೇಟಿಯಾಗಿ ಕೊಟ್ಟ ದೂರು ಏನು..?

Source: newsfirstlive.com Source link