ಲೀವ್ ಸ್ಯಾಂಕ್ಷನ್​ ಮಾಡಲು ₹2 ಸಾವಿರ ಲಂಚಕ್ಕೆ ಬೇಡಿಕೆ; ಎಸಿಬಿ ಬಲೆಗೆ ಬಿದ್ದ ಡಿಪೋ ಮ್ಯಾನೇಜರ್

ಲೀವ್ ಸ್ಯಾಂಕ್ಷನ್​ ಮಾಡಲು ₹2 ಸಾವಿರ ಲಂಚಕ್ಕೆ ಬೇಡಿಕೆ; ಎಸಿಬಿ ಬಲೆಗೆ ಬಿದ್ದ ಡಿಪೋ ಮ್ಯಾನೇಜರ್

ಗದಗ​: ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ KSRTC ಡಿಪೋ ಮ್ಯಾನೇಜರ್ ಓರ್ವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೊಲೀಸರ ಬಲೆಗೆ ಸಿಕ್ಕಿಬಿದ್ದ ಘಟನೆ ಗದಗ್​​ನಲ್ಲಿ ನಡೆದಿದೆ. KSRTC ಚಾಲಕರಿಂದ 2 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ರೋಣ ಪಟ್ಟಣದ ಡಿಪೋ ಮ್ಯಾನೇಜರ್ ಭೀಮಪ್ಪ ಗೆನ್ನೂರ ಎಂಬುವರು ಸಿಕ್ಕಿಬಿದ್ದಿದ್ದಾರೆ.

blank

ಪ್ರತಿ ಬಾರಿಯೂ ಭೀಮಪ್ಪ ಗೆನ್ನೂರ ಚಾಲಕರಿಗೆ ರಜೆ ನೀಡಲು 2 ಸಾವಿರ ರೂಪಾಯಿ ಬೇಡಿಕೆ ಇಡುತ್ತಿದ್ದ ಎನ್ನಲಾಗಿದೆ. ಇಂದು ಕೂಡ KSRTC ಡ್ರೈವರ್​​ನಿಂದ ಲೀವ್​​ ಸ್ಯಾಂಕ್ಷನ್ ಮಾಡಲು 2 ಸಾವಿರ ಪಡೆಯುತ್ತಿದ್ದ. ಈ ವೇಳೆ ಖಚಿತ ಮಾಹಿತಿ ಮೇರೆಗೆ ರೋಣ ಪಟ್ಟಣದ KSRTC ಡಿಪೋ ಮೇಲೆ ದಾಳಿ ಮಾಡಿದ ಎಸಿಬಿ ಡಿವೈಎಸ್ಪಿ M V ಮಲ್ಲೂರ ನೇತೃತ್ವದ ತಂಡ ಭೀಮಪ್ಪ ಗೆನ್ನೂರನ್ನು ವಶಕ್ಕೆ ಪಡೆದಿದೆ.

ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ವಿರುದ್ಧ ಸುಮಲತಾ ಹೋರಾಟ; ಗಣಿ ಸಚಿವರ ಭೇಟಿಯಾಗಿ ಕೊಟ್ಟ ದೂರು ಏನು..?

Source: newsfirstlive.com Source link