ಭಾರತಕ್ಕೆ ಮತ್ತೆ ಡಬಲ್​ ಧಮಾಕಾ: ಚಿನ್ನಕ್ಕೆ ಮುತ್ತಿಕ್ಕಿದ ಪ್ರಮೋದ್​​, ಕಂಚು ಗೆದ್ದ ಮನೋಜ್​

ಭಾರತಕ್ಕೆ ಮತ್ತೆ ಡಬಲ್​ ಧಮಾಕಾ: ಚಿನ್ನಕ್ಕೆ ಮುತ್ತಿಕ್ಕಿದ ಪ್ರಮೋದ್​​, ಕಂಚು ಗೆದ್ದ ಮನೋಜ್​

ಟೋಕಿಯೋ ಪ್ಯಾರಾಲಿಂಪಿಕ್ಸ್​​​ನಲ್ಲಿ ಭಾರತ ಪದಕಗಳ ಸುರಿಮಳೆಗೈಯುತ್ತಿದೆ. ಪುರುಷರ ಸಿಂಗಲ್​​​ ಬ್ಯಾಡ್ಮಿಂಟನ್ ವಿಭಾಗದ​ ಫೈನಲ್​​​ ಪಂದ್ಯದಲ್ಲಿ ಪ್ರಮೋದ್​ ಭಗತ್​ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. ಹಾಗೆಯೇ ಕಂಚಿನ ಪದಕಕ್ಕಾಗಿ ನಡೆದ ಇದೇ ವಿಭಾಗದ ಪಂದ್ಯದಲ್ಲಿ ಮನೋಜ್​ ಸರ್ಕಾರ್​ ಗೆದ್ದು, ಕಂಚನ್ನ ತಮ್ಮದಾಗಿಸಿಕೊಂಡಿದ್ದಾರೆ.

ಗೋಲ್ಡ್​​ ಮೆಡಲ್​​​​​ ಪಂದ್ಯದಲ್ಲಿ ಗ್ರೇಟ್​​​ ಬ್ರಿಟನ್​​ನ ಡೇನಿಯಲ್​​ ಬೆಥೆಲ್​ ವಿರುದ್ಧ ಸೆಣಸಾಟ ನಡೆಸಿದ ಭಗತ್, ಅತ್ಯುತ್ತಮ ಹೋರಾಟ ನಡೆಸಿದ್ರು. 21-14, 21-17 ನೇರ ಗೇಮ್ಸ್​ಗಳಿಂದ ಡೇನಿಯಲ್​​ಗೆ ಮಣ್ಣುಮುಕ್ಕಿಸಿ ಸ್ವರ್ಣವನ್ನ ಮುಡಿಗೇರಿಸಿಕೊಂಡರು.

ಮೊದಲ ಗೇಮ್ಸ್​​​ನಲ್ಲಿ ಎದುರಾಳಿ ತಕ್ಕ ಮಟ್ಟಿಗೆ ಪೈಪೋಟಿ ನೀಡಿದ್ರು. ಆದರೆ ಎರಡನೇ ಗೇಮ್ಸ್​​​ನಲ್ಲಿ ಪ್ರಬಲ ಹೋರಾಟಕ್ಕೆ ಮುಂದಾದ್ರು. ಆದರೆ ಅಂತಿಮವಾಗಿ ಭಗತ್​, ಉತ್ತಮ ಟೆಕ್ನಿಕ್​​ಗಳ ಮೂಲಕ ಲೀಡ್​​​ ಪಡೆದು ಅಂತಿಮವಾಗಿ ಗೆಲುವು ಸಾಧಿಸಿದ್ರು. ಆ ಮೂಲಕ ಭಾರತಕ್ಕೆ 16ನೇ ಪದಕ ತಂದ ಸಾಧನೆ ಮಾಡಿದ್ರು.

ಕಂಚಿನ ಪದಕಕ್ಕೆ ಕೊರೊಳೊಡ್ಡಿದ ಮಜೋಜ್​

ಇನ್ನು ಪುರುಷರ ಸಿಂಗಲ್ಸ್​ ವಿಭಾಗದ ಕಂಚಿನ ಪದಕದ ಪಂದ್ಯದಲ್ಲಿ ಜಪಾನ್​​ನ ಡೈಸುಕೆ ಫುಜಿಹಾರ ವಿರುದ್ಧ ಮನೋಜ್​​ ಸರ್ಕಾರ್​ ಗೆದ್ದು ಬೀಗಿದ್ದಾರೆ. ಪುಜಿಹಾರ್​ ವಿರುದ್ಧ 22-20, 21-13 ನೇರ ಸೆಟ್​ಗಳಿಂದ ಮನೋಜ್​ ಗೆದ್ದಿದ್ದಾರೆ. ಸದ್ಯ ಭಾರತಕ್ಕೆ ನಾಲ್ಕು ಚಿನ್ನ, 7 ಬೆಳ್ಳಿ, 6 ಕಂಚು ಪದಕ ಬಂದಿವೆ.

Source: newsfirstlive.com Source link