So Cute ತಾತನಿಗೆ ಹೈ ಫೈ ಕೊಟ್ಟ ಜ್ಯೂನಿಯರ್​ ಚಿರು

So Cute ತಾತನಿಗೆ ಹೈ ಫೈ ಕೊಟ್ಟ ಜ್ಯೂನಿಯರ್​ ಚಿರು

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಮೇಘನಾ ರಾಜ್ ಹಾಗೂ ಸರ್ಜಾ ಫ್ಯಾಮಿಲಿ ಜ್ಯೂನಿಯರ್ ಚಿರುಗೆ ನಿನ್ನೆ ಅದ್ಧೂರಿಯಾಗಿ ನಾಮಕರಣ ಮಾಡಿದ್ದಾರೆ. ಮೇಘನಾ ಪುತ್ರನಿಗೆ ಸೆಲೆಕ್ಟ್​ ಮಾಡಿರುವ ಹೆಸರು ತುಂಬ ವಿಭಿನ್ನವಾಗಿದೆ.

blank

ಜ್ಯೂನಿಯರ್​ ಚಿರು ಎಂದೇ ಕರೆಯಲ್ಪಡುತ್ತಿದ್ದ ದಿವಂಗತ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್‌ ಅವರ 10 ತಿಂಗಳ ಮಗನಿಗೆ ‘ರಾಯನ್‌ ರಾಜ್‌ ಸರ್ಜಾ’ ಎಂದು ನಾಮಕರಣ ಮಾಡಲಾಗಿದೆ. ನಗರದ ಚಾನ್ಸರಿ ಪೆವಿಲಿಯನ್‌ ಹೋಟೆಲ್‌ನಲ್ಲಿ ನಾಮಕರಣ ಕಾರ್ಯಕ್ರಮ ನಡೆದಿದ್ದು, ನಟ ಧ್ರುವ ಸರ್ಜಾ ದಂಪತಿ ಸೇರಿದಂತೆ ಕುಟುಂಬದ ಸದಸ್ಯರು ಭಾಗಿಯಾಗಿದ್ದರು.

ಈ ವೇಳೆ ಜ್ಯೂನಿಯರ್ ಚಿರು, ತಾತ (ಅಜ್ಜ) ನಟ ಸುಂದರ್​ ರಾಜ್​ ಅವರಿಗೆ ಹೈಫೈ ನೀಡಿ ಮುಗುಳ್ನಕ್ಕಿದ್ದಾನೆ. ಮೊಮ್ಮಗವಿನೊಂದಿಗೆ ಆಟಕ್ಕಿಳಿದ ಸುಂದರ್​ರಾಜ್​ ಜ್ಯೂನಿಯರ್​ ಚಿರುವಿನ ಕೈಗೆ ಚಪ್ಪಾಳೆ ತಟ್ಟುವ ಮೂಲಕ ಸಂಭ್ರಮಿಸಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

Source: newsfirstlive.com Source link