ಆರ್​.ಅಶೋಕ್​ ಆಸೆಗೆ ‘ಆ’ ಮೂವರು ಸಚಿವರೇ ಅಡ್ಡಿ..!?

ಆರ್​.ಅಶೋಕ್​ ಆಸೆಗೆ ‘ಆ’ ಮೂವರು ಸಚಿವರೇ ಅಡ್ಡಿ..!?

ಬೆಂಗಳೂರು : ಡಿಸಿಎಂ ಆಗುವ ಬೃಹದಾಸೆಯನ್ನು ಹೊತ್ತಿದ್ದ ಕಂದಾಯ ಸಚಿವ ಆರ್​.ಅಶೋಕ್​ ಬೆಂಗಳೂರು ಉಸ್ತುವಾರಿ ಮೇಲೆ ಕಣ್ಣಿಟ್ಟಿದ್ದು, ಆ ಆಸೆಗೆ ಮೂವರು ಸಚಿವರು ಅಡ್ಡಿ ಪಡಿಸುತ್ತಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಗುಲ್ಲೆದ್ದಿದೆ.

ಸಚಿವ ಆರ್​.ಅಶೋಕ್​ಗೆ ಡಿಸಿಎಂ ಆಗುವ ಆಸೆ ಈ ಹಿಂದೆಯೇ ಇತ್ತು. ಆದರೆ ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಆಯ್ಕೆ ಮಾಡುವ ಸಂದರ್ಭದಲ್ಲಿ, ಡಿಸಿಎಂ ಹುದ್ದೆಗಳು ಬೇಡ ಎಂದು ನಿರ್ಣಯ ಕೈಗೊಂಡಿದ್ದರ ಪರಿಣಾಮ ಸಚಿವ ಅಶೋಕ್ ಕೇವಲ ಸಚಿವರಾಗಿಯೇ ಉಳಿದು ಬಿಟ್ಟರು.

ಸದ್ಯ ಕಂದಾಯ ಸಚಿವರಾಗಿರುವ ಆರ್​.ಅಶೊಕ್ ಬೆಂಗಳೂರು ಉಸ್ತುವಾರಿಗೆ ಪೈಪೋಟಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಬೆಂಗಳೂರು ಉಸ್ತುವಾರಿ ಪಟ್ಟ ಪಡೆದು ಪ್ರಬಲ ನಾಯಕನಾಗಿ ಹೊರಹೊಮ್ಮುವ ಲೆಕ್ಕಾಚಾರದಲ್ಲಿದ್ದಾರೆ. ಪ್ರತಿ ಕಾರ್ಯಕ್ರಮದಲ್ಲೂ ಸಿಎಂ ಬೊಮ್ಮಾಯಿ ಜೊತೆ ಕಾಣಿಸಿಕೊಳ್ಳುತ್ತಿರುವ ಅಶೋಕ್​ ಪರೋಕ್ಷವಾಗಿ ಬೊಮ್ಮಾಯಿ ನೇತೃತ್ವದಲ್ಲಿಯೇ ಮುಂದಿನ ಚುನಾವಣೆಗಳನ್ನು ಎದುರಿಸಬೇಕು ಎಂಬ ಸಂದೇಶವನ್ನ ರವಾನಿಸುತ್ತಿದ್ದಾರೆ. ಈ ಮೂಲಕ ಬೊಮ್ಮಾಯಿಗೆ ಹತ್ತಿರವಾಗಿ ಉಸ್ತುವಾರಿಯ ಸ್ಥಾನ ಪಡೆಯಲು ಯತ್ನಿಸುತ್ತಿದ್ದಾರೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ ಶುರುವಾಗಿದೆ.

ಇದನ್ನೂ ಓದಿ: ವಿಧಾನಸಭೆ ಚುನಾವಣೆ ತಯಾರಿ: ‘ಆಪರೇಷನ್​​ ಹಸ್ತ’ಕ್ಕೆ ಕಾಂಗ್ರೆಸ್​ ಮಾಸ್ಟರ್​ ಪ್ಲಾನ್..!

ಆದರೆ ಆರ್​.ಅಶೋಕ್​ ಅವರ ಈ ಆಸೆಗೆ ಮೂವರು ಪ್ರಬಲ ಸಚಿವರು ಅಡ್ಡ ಹಾಕ್ತಿದ್ದಾರೆ ಎನ್ನಲಾಗಿದೆ. ಮೊನ್ನೆ ನಡೆದ ಕಾರ್ಯಕ್ರಮವೊಂದರಲ್ಲಿ ಎಸ್​​.ಟಿ.ಸೋಮಶೇಖರ್​ ಬೆಂಗಳೂರು ಉಸ್ತುವಾರಿಯನ್ನು ಅಶೋಕ್​ ಬಿಟ್ಟು ಬೇರೆದವರಿಗೆ ಕೊಡಬೇಕು ಎಂಬ ದಾಟಿಯಲ್ಲೇ ಮಾತಾಡಿದ್ದು ಚರ್ಚೆಗೆ ಕಾರಣವಾಗಿದೆ.

ಜೊತೆಗೆ ಸಚಿವ ಭೈರತಿ ಬಸವರಾಜ್​, ಸಚಿವ ಮುನಿರತ್ನ ಕೂಡ ಆರ್.ಅಶೋಕ್​ ಹೊರತುಪಡಿಸಿ ಜಿಲ್ಲೆಯಲ್ಲಿ ಇನ್ನು ಹಲವಾರು ಸಚಿವರುಗಳಿದ್ದು, ಪ್ರಬಲ ಮತ್ತು ಹಿರಿಯರಿದ್ದಾರೆ. ಅವರಿಗೆ ಬೆಂಗಳೂರು ಉಸ್ತುವಾರಿಯನ್ನು ಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಅಶೋಕ್​ಗೆ ಸಚಿವ ಸ್ಥಾನ ಕೊಡುವುದಾದರೆ ಅದು ಪದ್ಮನಾಭನಗರಕ್ಕೆ ಮಾತ್ರ ಸೀಮಿತವಾಗುತ್ತದೆ ಎಂದು ಮಾತುಗಳು ಶುರುವಾಗಿವೆ.

Source: newsfirstlive.com Source link