ಜಾಮದಾರನನ್ನು ಮೊದಲು ಹುಚ್ಚಾಸ್ಪತ್ರೆಗೆ ಕಳುಹಿಸಬೇಕು: ಶಾಮನೂರು

ದಾವಣಗೆರೆ: ಜಾಮದಾರನನ್ನು ಮೊದಲು ಹುಚ್ಚಾಸ್ಪತ್ರೆಗೆ ಸೇರಿಸಬೇಕೆಂದು ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೀರಶೈವ ಲಿಂಗಾಯತ ಎರಡು ಬೇರೆ, ಬೇರೆ ಎಂದು ಎರಡು ಮಾಡಲು ಹೊರಟಿದ್ದವರು, ಈಗ ಕಾಂಗ್ರೆಸ್ ಸೋತು ಸುಣ್ಣ ಆದ ಮೇಲೆ ಎಲ್ಲಾ ಒಂದೇ ಎಂದು ಬರುತ್ತಿದ್ದಾರೆ, ಬರಲಿ ಎಂದು ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಸ್ವಪಕ್ಷದವರ ವಿರುದ್ಧ ಗುಡುಗಿದ್ದಾರೆ. ಇದನ್ನೂ ಓದಿ: ಬ್ಯಾಡ್ಮಿಂಟನ್ ಅವಳಿ ಪದಕ- ಪ್ರಮೋದ್ ಭಗತ್‍ಗೆ ಚಿನ್ನ, ಮನೋಜ್ ಸರ್ಕಾರ್‌ಗೆ ಕಂಚು

ಬಂದರೆ ಜೊತೆಗೆ ಕರೆದುಕೊಂಡು ಹೋಗುತ್ತೇವೆ. ವೀರಶೈವ ಲಿಂಗಾಯಿತ ಎರಡು ಒಂದೇ, ಬೆಂಬಲ ಕೊಟ್ಟರೆ ಎಲ್ಲ ಬಡವರಿಗೆ ಸಹಾಯ ಆಗಲಿದೆ. ಮುಂದೆ ಎಲ್ಲಾ ಸರಿ ಹೋಗುತ್ತದೆ. ಹೀಗಾಗಿ ಎಂಬಿ ಪಾಟೀಲ್ ಈಗ ಎಲ್ಲರನ್ನು ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿದ್ದಾರೆ.

ಜನರು ಅಷ್ಟು ದಡ್ಡರಲ್ಲ, ಎಲ್ಲವನ್ನು ನೋಡುತ್ತಿದ್ದಾರೆ. ಶಿವಾನಂದ ಜಾಮದಾರನನ್ನು ಮೊದಲು ಹುಚ್ಚಾಸ್ಪತ್ರೆಗೆ ಕಳುಹಿಸಬೇಕು. 99 ಉಪ ಪಂಗಡಗಳಿವೆ. ಎಲ್ಲರು ಒಂದೇ, ಅದರಲ್ಲಿ ಜಾಮದಾರ್ ಯಾರು ಎನ್ನುವುದು ಮೊದಲು ನಿರ್ಣಯಿಸಲಿ, ಅಧಿಕಾರದಲ್ಲಿ ಇದ್ದಾಗ ಯಾರಿಗೂ ಸಹಾಯ ಮಾಡಲಿಲ್ಲ, ಈಗ ನೂರೆಂಟು ಮಾತನಾಡುತ್ತಾರೆ ಎಂದು ಶಾಮನೂರು ಕಿಡಿಕಾರಿದ್ದಾರೆ. ಇದನ್ನೂ ಓದಿ:ಕೊಚ್ಚೆ ನೀರೇ ಕುಡಿದಿದ್ದೇನೆ – ಹೆಚ್‍ಡಿಕೆಗೆ ಜೆಡಿಎಸ್ ಶಾಸಕ ಟಾಂಗ್

Source: publictv.in Source link