ಸರ್ಕಾರ ರಚನೆಗೆ ಮುಂದಾದ ತಾಲಿಬಾನ್​​​​​; ಕಾಬೂಲ್​​ಗೆ ISI ಮುಖ್ಯಸ್ಥ ಫೈಜ್​​ ಹಮೀದ್​​ ಭೇಟಿ

ಸರ್ಕಾರ ರಚನೆಗೆ ಮುಂದಾದ ತಾಲಿಬಾನ್​​​​​; ಕಾಬೂಲ್​​ಗೆ ISI ಮುಖ್ಯಸ್ಥ ಫೈಜ್​​ ಹಮೀದ್​​ ಭೇಟಿ

ಕಾಬೂಲ್​​​: ಅಮೆರಿಕಾ ತನ್ನ ಸೇನೆಯನ್ನು ಸಂಪೂರ್ಣವಾಗಿ ವಾಪಸ್ಸು ಕರೆಸಿಕೊಂಡ ಬಳಿಕ ಅಫ್ಘಾನಿಸ್ತಾನದಲ್ಲಿ ತಾಲಿಬಾನ್​​ ಸರ್ಕಾರ ರಚನೆಗೆ ಮುಂದಾಗಿದೆ. ಅಫ್ಘಾನ್‍ನಲ್ಲಿ ಇರಾನ್ ಮಾದರಿ ಅಧ್ಯಕ್ಷೀಯ ಆಡಳಿತ ಜಾರಿ ಮಾಡಲು ತಾಲಿಬಾನ್​​ ನಿರ್ಧರಿಸಿದೆ. ಹೀಗಿರುವಾಗಲೇ ಪಾಕಿಸ್ತಾನ ಗುಪ್ತಚರ ದಳ (ISI)ದ ಮುಖ್ಯಸ್ಥ ಲೆಫ್ಟೆನೆಂಟ್​ ಜನರಲ್​ ಫೈಜ್​ ಹಮೀದ್ ಕಾಬೂಲ್​ಗೆ ತೆರಳಿದ್ದಾರೆ. ಫೈಜ್​ ಹಮೀದ್​ ನೇತೃತ್ವದಲ್ಲಿ ಪಾಕ್ ಅಧಿಕಾರಿಗಳ ನಿಯೋಗ ಕಾಬೂಲ್​​ಗೆ ಭೇಟಿ ನೀಡಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಮೊದಲಿಗೆ ಅಫ್ಘಾನ್​​ನಲ್ಲಿರುವ ಪಾಕಿಸ್ತಾನದ ರಾಯಭಾರಿ ಕಚೇರಿಗೆ ಭೇಟಿ ನೀಡಿದ ಬಳಿಕ ಫೈಜ್​ ಹಮೀದ್​ ತಾಲಿಬಾನ್​ ಮುಖಂಡರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ. ತಾಲಿಬಾನ್​​ ಮುಖಂಡರ ಭೇಟಿ ಮಾಡಿ ಫೈಜ್​ ಹಮೀದ್, ಭವಿಷ್ಯದಲ್ಲಿ ಅಫ್ಘಾನ್​ ಮತ್ತು ಪಾಕ್​ ಸಂಬಂಧ ಹೇಗಿರಬೇಕು ಎಂಬುದರ ಕುರಿತು ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು, ಫೈಜ್​​ ಹಮೀದ್​ ತಾಲಿಬಾನ್​​ಗಳ ಜತೆ ಕಾಶ್ಮೀರದ ವಿಚಾರದ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ. ಅಲ್ಲದೇ ಸರ್ಕಾರ ರಚನೆ ಸಂಬಂಧ ತಾಲಿಬಾನ್​​ಗಳಲ್ಲೇ ಎರಡು ಬಣಗಳ ನಡುವೆ ಅಪಶ್ರುತಿ ಎದ್ದಿದೆ. ಹಾಗಾಗಿ ಹಕ್ಕಾನಿ ನೆಟ್​ವರ್ಕ್​ ಮತ್ತು ಮುಲ್ಲಾ ಬರದಾರ್​ ಬಣಗಳ ನಡುವೆ ಬಂಡಾಯ ಶಮನ ಮಾಡಿ ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆ ಮಾಡುವಲ್ಲಿ ಹಮೀದ್​​​​ ಪ್ರಮುಖ ಪಾತ್ರವಹಿಸಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: #BIGBREAKING ಮನಸೋ ಇಚ್ಛೆ ಗಾಳಿಯಲ್ಲಿ ಗುಂಡು ಹಾರಿಸಿದ ತಾಲಿಬಾನಿಗಳು.. 17 ಸಾವು 41 ಮಂದಿಗೆ ಗಾಯ

Source: newsfirstlive.com Source link