ಕರ್ನಾಟಕದಲ್ಲಿ ಫಸ್ಟ್​ ಟೈಂ ಡ್ರಗ್​ ಪೆಡ್ಲರ್​ನ ₹1.68 ಕೋಟಿ ಮೌಲ್ಯದ ಆಸ್ತಿ ಸೀಜ್ ಮಾಡಿದ ಪೊಲೀಸರು

ಕರ್ನಾಟಕದಲ್ಲಿ ಫಸ್ಟ್​ ಟೈಂ ಡ್ರಗ್​ ಪೆಡ್ಲರ್​ನ ₹1.68 ಕೋಟಿ ಮೌಲ್ಯದ ಆಸ್ತಿ ಸೀಜ್ ಮಾಡಿದ ಪೊಲೀಸರು

ಬೆಂಗಳೂರು: ಗಾಂಜಾ ಮಾರಾಟ ಮಾಡಿ ಕೋಟಿಗಟ್ಟಲೇ ಆಸ್ತಿ ಸಂಪಾದನೆ ಮಾಡಿದ್ದ ಎನ್ನಲಾಗಿರುವ ಆರೋಪಿಯ ಆಸ್ತಿಯನ್ನ ಇದೀಗ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಗಾಂಜಾ ಮಾರಾಟ ಕೇಸ್​​ನಲ್ಲಿ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಡ್ರಗ್​ ಪೆಡ್ಲರ್​ ಆಸ್ತಿಯನ್ನ ಜಪ್ತಿ ಮಾಡಲಾಗಿದೆ.

ಬಿಹಾರ ಮೂಲದ ಅಂಜಯ್ ಕುಮಾರ್ ಸಿಂಗ್ ಎಂಬಾತ ಆಸ್ತಿಯನ್ನ ಪೊಲೀಸರು ಸೀಜ್ ಮಾಡಿದ್ದಾರೆ. 2019 ರಲ್ಲಿ ಅಂಜಯ್ ಕುಮಾರ್ ಸಿಂಗ್​ನನ್ನ ಪೊಲೀಸರು ಬಂಧಿಸಿದ್ದರು. ಆರೋಪಿಯನ್ನ ಬಂಧಿಸಿ 822 ಕೇಜಿ ಗಾಂಜಾವನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಈಗಾಗಲೇ ಆರೋಪಿಯ ಕೃತ್ಯದ ಬಗ್ಗೆ ದೋಷಾರೋಪಣಾ ಪಟ್ಟಿಯನ್ನ ಕೋರ್ಟ್​ಗೆ ಸಲ್ಲಿಸಲಾಗಿದೆ.

blank

ಆತನ ಹೆಂಡತಿ ಶೀಲಾ ದೇವಿ ಹೆಸರಿನಲ್ಲಿದ್ದ 30*49 ಸೈಟ್ ಹಾಗೂ ಎರಡು 69*40 ಸೈಟ್, ಸತ್ಕೀರ್ಥಿ ಅಪಾರ್ಟ್​ಮೆಂಟ್​​ನಲ್ಲಿರುವ ಒಂದು ಫ್ಲಾಟ್, ಸ್ಕಾರ್ಪಿಯೋ ಕಾರನ್ನ ಪೊಲೀಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಮಾತ್ರವಲ್ಲ ಜಾಯಿಂಟ್ ಅಕೌಂಟಿನಲ್ಲಿದ್ದ 9 ಲಕ್ಷ ರೂಪಾಯಿ ಹಣವನ್ನೂ ಕೂಡ ಜಪ್ತಿ ಮಾಡಿದ್ದಾರೆ. ಇವೆಲ್ಲದರ ಒಟ್ಟು ಮೊತ್ತ 1 ಕೋಟಿ, 68 ಲಕ್ಷ ಮೌಲ್ಯ ಅಂತಾ ಹೇಳಲಾಗಿದೆ.

Source: newsfirstlive.com Source link