ಗಂಡ ಹಾಡು ಹೇಳೋವಾಗ ತೆರೆಮರೆಯಲ್ಲಿ ನಿಂತು ಏನ್ಮಾಡಿದ್ರು ಪಿಗ್ಗಿ?

ಗಂಡ ಹಾಡು ಹೇಳೋವಾಗ ತೆರೆಮರೆಯಲ್ಲಿ ನಿಂತು ಏನ್ಮಾಡಿದ್ರು ಪಿಗ್ಗಿ?

ಬಾಲಿವುಡ್​ ನಟಿ ಪ್ರಿಯಾಂಕ ಚೋಪ್ರಾ ಇತ್ತೀಚೆಗಷ್ಟೇ ತಮ್ಮ ಪತಿ ನಿಕ್​ ಜೋನಾಸ್​ ಜೊತೆಗಿರುವ ಹಾಟ್​ ಫೋಟೋವೊಂದನ್ನು ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ಸುದ್ದಿಯಾಗಿದ್ರು. ಇದೀಗ ತಮ್ಮ ಪತಿ ನಿಕ್​ ಜೊನಾಸ್​ ಸ್ಟೇಜ್​ ಮೇಲೆ ಲೈವ್​ ಮ್ಯೂಸಿಕ್​ ಕಾನ್​ಸೆಟ್​ನಲ್ಲಿ ಹಾಡುವಾಗ, ಪ್ರಿಯಾಂಕ ಸ್ಟೇಜ್​ ಹಿಂದೆ ನಿಂತು ಪತಿ ಹಾಡಿಗೆ ಬಾರಿ ಜೋಶ್​ನಿಂದ ಕುಣಿಯುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗ್ತಿದೆ.

ಹೌದು, ನಟಿ ಪ್ರಿಯಾಂಕ ಚೋಪ್ರಾ ಸಿಟಾಡೆಲ್​ ಎಂಬ ಸೀರಿಸ್​ನ ಚಿತ್ರಿಕರಣದಲ್ಲಿ ಬ್ಯುಸಿಯಾಗಿದ್ರು. ಇದೀಗ ಪ್ರಿಯಾಂಕ ತಮ್ಮ ಕೆಲಸಗಳನ್ನು ಮುಗಿಸಿ ಪತಿ ನಿಕ್​ ಜೋನಾಸ್​ ಜೊತೆ ಯುಎಸ್​ನಲ್ಲಿ ಹ್ಯಾಪಿ ಟೈಂ ಸ್ಪೆಂಡ್​ ಮಾಡುತ್ತಿದ್ದಾರೆ. ಇನ್ನು ಪಿಗ್ಗಿ ಪತಿ ನಿಕ್​ ಜೋನಾಸ್​ ಬಹಳ ಫೇಮಸ್​ ಅಮೆರಿಕನ್​ ಸಿಂಗರ್​ ಹೀಗಾಗಿ ಸ್ಟೇಜ್​ ಮೇಲೆ ಪತಿಯ ಲೈವ್​ ಮ್ಯೂಸಿಕ್​ ಕಾನ್​ಸೆಟ್​ ನಡೆಯುತ್ತಿದ ವೇಳೆ ಸ್ಟೇಜ್​ನ ತೆರೆಮರೆಯಲ್ಲಿ ನಿಂತು ಪತಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸದ್ಯ ಈ ವಿಡಿಯೋ ಬಾರಿ ವೈರಲ್​ ಆಗಿದೆ.

ಇದನ್ನೂ ಓದಿ: 74 ನೇ ವಸಂತಕ್ಕೆ ಕಾಲಿಟ್ಟ ಅನಂತ್​ ನಾಗ್.. ಅವ್ರನ್ನ ಆ್ಯಕ್ಸಿಡೆಂಟಲ್ ನಟ ಅನ್ನೋದೇಕೆ ಗೊತ್ತಾ..?

 

Source: newsfirstlive.com Source link