5 ಕೋಟಿ ಪೋಸ್ಟ್​ಕಾರ್ಡ್, ದೊಡ್ಡ ಕಟೌಟ್ಸ್​ ಮೂಲಕ ಪ್ರಧಾನಿಗೆ ಧನ್ಯವಾದ -20 ದಿನ ನಡೆಯಲಿದೆ ಮೆಗಾ ಈವೆಂಟ್

5 ಕೋಟಿ ಪೋಸ್ಟ್​ಕಾರ್ಡ್, ದೊಡ್ಡ ಕಟೌಟ್ಸ್​ ಮೂಲಕ ಪ್ರಧಾನಿಗೆ ಧನ್ಯವಾದ -20 ದಿನ ನಡೆಯಲಿದೆ ಮೆಗಾ ಈವೆಂಟ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಸೆಪ್ಟೆಂಬರ್ 17ಕ್ಕೆ 71ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಮೋದಿ ಅವರು ತಮ್ಮ ಸಾರ್ವಜನಿಕ ಸೇವೆಯಲ್ಲಿ ಪ್ರಮುಖ 20 ವರ್ಷಗಳಲ್ಲಿ ಅವರ ಸಾರ್ವಜನಿಕ ಸೇವೆಯನ್ನ ಗುರುತಿಸಿಲು 20 ದಿನ ಮೆಗಾ ಇವೆಂಟ್​ ಆಯೋಜನೆ ಮಾಡಲು ಬಿಜೆಪಿ ನಿರ್ಧರಿಸಿದೆ.

ಈ ಮೆಗಾ ಇವೆಂಟ್​ಗೆ ‘ಸೇವಾ ಅಂಡ್ ಸಮರ್ಪಣ್ ಅಭಿಯಾನ್’ ಅಂತಾ ಹೆಸರಿಡಲಾಗಿದೆ. ಈ ಕಾರ್ಯಕ್ರಮದಲ್ಲಿ ಬಿಜೆಪಿ ಸಾಮೂಹಿಕವಾಗಿ ಸ್ವಚ್ಛತಾ ಕಾರ್ಯಕ್ರಮ, ರಕ್ತದಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನ ಆಯೋಜನೆ ಮಾಡಲು ಪ್ಲಾನ್ ಮಾಡಿಕೊಂಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ಈ ಕಾರ್ಯಕ್ರಮ ಆಯೋಜನೆಗೊಳ್ಳಲಿದೆ.

ಈಗಾಲೇ ಬಿಜೆಪಿ ಮುಖ್ಯ ಕಚೇರಿಯು ರಾಜ್ಯಗಳ ಪ್ರಮುಖರಿಗೆ ಸುತ್ತೋಲೆ ಹೊರಡಿಸಿ ಕಾರ್ಯಕ್ರಮ ಆಯೋಜನೆ ಮಾಡುವಂತೆ ಸೂಚಿಸಿದೆ. ಜೊತೆಗೆ 5 ಕೋಟಿ ಪೋಸ್ಟ್​ ಕಾರ್ಡ್​ಗಳನ್ನ ಮುದ್ರಿಸಿ ದೇಶದಲ್ಲಿರುವ ಎಲ್ಲಾ ಬಿಜೆಪಿ ಕಚೇರಿಗೆ ಕಳುಹಿಸಿಲು ನಿರ್ಧರಿಸಲಾಗಿದೆ. ಹೋರ್ಡಿಂಗ್ಸ್​ ಹಾಗೂ ಪೋಸ್ಟ್​ ಕಾರ್ಡ್​​ ಮೂಲಕ ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಲು ಬಿಜಿಪಿ ನಿರ್ಧರಿಸಿದೆ.

ಮಾತ್ರವಲ್ಲ ಮೋದಿ ಜೀವನ ಕುರಿತ ವಿಶೇಷ ಪ್ರದರ್ಶನಗಳು ಕೂಡ ಆಯೋಜನೆಗಳಲ್ಲಿದೆ. ಜೊತೆಗೆ NaMo App ಮೂಲಕ ವರ್ಚುವಲ್ ಕಾರ್ಯಕ್ರಮ ನಡೆಯಲಿದೆ. ಇನ್ನು ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಹೀಗಾಗಿ ಅಲ್ಲಿನ ಬಿಜೆಪಿ ನಾಯಕರು ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ. ವಿಶೇಷ ಅಂದ್ರೆ ಗಂಗಾ ನದಿಯನ್ನ ಸ್ವಚ್ಛ ಮಾಡುವ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ಕೊಡಲಿದ್ದಾರೆ.

Source: newsfirstlive.com Source link