‘ಸಿಎಂ’ಗಿಂತ ನಾವೇ ದೊಡ್ಡವ್ರು, ನಮಗೆ ಮನೆ ಕೊಟ್ಟಿಲ್ಲ’- ಹೀಗೆ ಹೊರಟ್ಟಿ ಅಸಮಾಧಾನ ಹೊರಹಾಕಿದ್ಯಾಕೆ?

‘ಸಿಎಂ’ಗಿಂತ ನಾವೇ ದೊಡ್ಡವ್ರು, ನಮಗೆ ಮನೆ ಕೊಟ್ಟಿಲ್ಲ’- ಹೀಗೆ ಹೊರಟ್ಟಿ ಅಸಮಾಧಾನ ಹೊರಹಾಕಿದ್ಯಾಕೆ?

ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಎಂಟು ಪತ್ರಗಳು ಬರೆದರೂ ಇನ್ನೂ ಅಧಿಕೃತ ನಿವಾಸ ನೀಡದ ಕಾರಣ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಗರಂ ಆಗಿದ್ದಾರೆ. ಈ ಸಂಬಂಧ ಮಾತಾಡಿದ ಸಭಾಪತಿ ಬಸವರಾಜ್​​ ಹೊರಟ್ಟಿ, ಏಳು ಪತ್ರಗಳೊಂದಿಗೆ ಇಂದು ಎಂಟನೇ ಪತ್ರ ಬರೆದಿದ್ದೇನೆ. ಇನ್ನು ಮುಂದೆ ಮನೆ ಕೊಡಿ ಎಂದು ಭಿಕ್ಷೆ ಬೇಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.

ನಾನು ಮಾತ್ರವಲ್ಲ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಹಲವರು ನಿಗದಿತ ನಿವಾಸ ಹಂಚಿಕೆ ಮಾಡುವಂತೆ ಪತ್ರ ಬರೆದಿದ್ದೇವೆ. ಇಂದು ಕೂಡ ಮತ್ತೆ ಪತ್ರ ಬರೆದಿದ್ದೇನೆ, ನಾನು ಭಿಕ್ಷೆ ಬೇಡೋದಿಲ್ಲ ಅಂತಲೂ ಹೇಳಿದ್ದೇನೆ ಎಂದರು.

ಕಾವೇರಿ ನಿವಾಸ ನಿಗದಿತ ನಿವಾಸ ಅಲ್ಲ. ಆದರೂ ಅಲ್ಲಿ ಸಿಎಂ ಆದವರು ಇರ್ತಾರೆ. ಎಲ್ಲರಿಗೂ ನಿವಾಸ ಇದೆ. ನಮ್ಮ ಹಣೆಬರಹ ನೋಡಿ, ಪ್ರೊಟೋಕಾಲ್ ಪ್ರಕಾರ ಸಿಎಂಗಿಂತ ನಾವು ಮೇಲಿನವರು. ಆದರೆ ನಮಗೆ ಶಕ್ತಿ ಇಲ್ಲ ಅಂದುಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಭಾರತಕ್ಕೆ ಮತ್ತೆ ಡಬಲ್​ ಧಮಾಕಾ: ಚಿನ್ನಕ್ಕೆ ಮುತ್ತಿಕ್ಕಿದ ಪ್ರಮೋದ್​​, ಕಂಚು ಗೆದ್ದ ಮನೋಜ್​

ಏರ್​​ಪೋರ್ಟ್​ನಲ್ಲಿ ಸಿಎಂ, ಗೃಹ ಸಚಿವರು ಎಲ್ಲರೂ ನೇರವಾಗಿ ಹೋಗುತ್ತಾರೆ. ಸಂವಿಧಾನಿಕವಾಗಿ ನಾವು ಅವರಿಗಿಂತ ಮೇಲಿನವರು. ನಮಗೆ ಮಾತ್ರ ಎಲ್ಲ ಚೆಕ್ಕಿಂಗ್ ಮಾಡ್ತಾರೆ. ಹೀಗಾಗಿ ಗಾಂಧೀ ಭವನ ರಸ್ತೆಯ ಮನೆ ಕೊಟ್ಟರೆ ಕೊಡಿ, ಇಲ್ಲದಿದ್ದರೆ ಬೇಡ ಎಂದು ಖಡಕ್​ ಆಗಿ ಹೇಳಿದರು.

Source: newsfirstlive.com Source link