‘ಲವ್ ಮಾಕ್ಟೇಲ್​’​ಗಾಗಿ ಮೈಕ್ ಹಿಡಿದ ನಿಧಿಮಾ.. ನಾಯಕಿ ಆಗಿ ಅಲ್ಲ.. ಮತ್ತೆ..?

‘ಲವ್ ಮಾಕ್ಟೇಲ್​’​ಗಾಗಿ ಮೈಕ್ ಹಿಡಿದ ನಿಧಿಮಾ.. ನಾಯಕಿ ಆಗಿ ಅಲ್ಲ.. ಮತ್ತೆ..?

‘‘ಲವ್ ಮಾಕ್ಟೇಲ್’’ ಸಿನಿಮಾದ ಮೂಲಕ ಕನ್ನಡಿಗರ ಫೇವರೆಟ್ ರಿಲ್ ಪ್ಲಸ್ ರಿಯಲ್ ಜೋಡಿಗಳಾದವರು ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್.. ಕಳೆದ ಫೆಬ್ರವರಿಯಲ್ಲಿ ಮದುವೆಯಾಗಿ ಸಂಸಾರ ನೌಕೆಯಲ್ಲಿ ಹ್ಯಾಪಿಯಾಗಿ ಪ್ರಯಾಣ ಬೆಳೆಸುತ್ತಿರೋ ‘ಲವ್ ಮಾಕ್ಟೇಲ್’’ ಜೋಡಿ ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದೆ. ಮಿರ ಮಿರ ಮಿಂಚೋ ಮಿಲನಾ ನಾಗರಾಜ್ ಫಸ್ಟ್ ಟೈಮ್ ಗಾಯಕಿ ಆಗೋದಕ್ಕೆ ಹೊರಟ್ಟಿದ್ದಾರೆ.

ಸಿನಿಮಾದಲ್ಲಿ ನಿರ್ಮಾಪಕರು ಮತ್ತು ನಿರ್ದೇಶಕರು ಒಂಥರಾ ಗಂಡ ಹೆಂಡತಿ ಇದಂಗೆ ಅಂತಾರೆ. ಆದ್ರೆ ತುಂಬಾನೇ ಅಪರೂಪ ಸಿನಿಮಾದಲ್ಲೂ ಮತ್ತು ಸಿನಿಮಾದ ಹೊರಗಡೆಯೂ ಗಂಡ ಹೆಂಡತಿಯರಿಬ್ಬರೂ ನಿರ್ಮಾಪಕ ನಿರ್ದೇಶಕನಾಗಿರೋದು. ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ ಇಬ್ಬರೂ ರೀಲ್ ಪ್ಲಸ್ ರಿಯಲ್ ಗಂಡ ಹೆಂಡತಿಯರು. ಪತಿ ದೇವರು ನಿರ್ದೇಶಕ ಕಮ್ ನಟ. ಶ್ರೀಮತಿ ನಿರ್ಮಾಪಕಿ ಕಮ್ ನಟಿ. ಈ ಪ್ರೇಮ ಜೋಡಿಗಳು ಸೇರಿ ಮಾಡಿದ್ದ ಸಿನಿಮಾ ಲವ್ ಮಾಕ್ಟೇಲ್.

blank

‘ಲವ್ ಮಾಕ್ಟೇಲ್’ ಪಾರ್ಟ್ ಒನ್ ಈಗಾಗಲೇ ಕನ್ನಡಿಗರ ಮನಸನ್ನ ಗೆದ್ದಾಗಿದೆ. ಈಗ ಪ್ರೇಕ್ಷಕ ವರ್ಗ ಎರಡನೇ ಲವ್ ಮಾಕ್ಟೇಲ್ ಚಿತ್ರವನ್ನ ನೋಡಲು ಎದುರು ನೊಡ್ತಿದೆ. ‘ಲವ್ ಮಾಕ್ಟೇಲ್’ ಪಾರ್ಟ್ 1ರಲ್ಲಿ ಮಿಲನಾ ನಾಗರಾಜ್ ನಾಯಕಿ.. ಆದ್ರೆ ಎರಡನೇ ‘ಲವ್ ಮಾಕ್ಟೇಲ್’​​ ಚಿತ್ರದಲ್ಲಿ ಮಿಲನಾ ನಾಗರಾಜ್ ಗಾಯಕಿ..!

ಗಾಯನಕ್ಕೆ ಸಜ್ಜಾದ್ರಾ ಲವ್​​ ಮಾಕ್ಟೇಲ್ ಮಿಲನಾ..?
ಆದಿಗಾಗಿ ಹಾಡೋದಕ್ಕೆ ಮುಂದಾದ ನಿಧಿಮಾ..!

ಲವ್ ಮಾಕ್ಟೇಲ್ ಭಾಗ ಒಂದರಲ್ಲೆ ಮಿಲನಾ ನಾಗರಾಜ್ ನಿರ್ವಹಿಸಿದ ನಿಧಿಮಾ ಪಾತ್ರ ಮುಕ್ತಾಯವಾಗಿದೆ. ಎರಡನೇ ಭಾಗದಲ್ಲಿ ಮಿಲನಾ ನಾಗರಾಜ್ ಕಾಣಿಸೋದಿಲ್ಲ ಎಂದು ಈಗಾಗಲೇ ನಿರ್ದೇಶಕ ಕಮ್ ನಟ ಡಾರ್ಲಿಂಗ್ ಕೃಷ್ಣ ಹೇಳಿದ್ದಾರೆ. ಆದರೆ ಲವ್​​ ಮಾಕ್ಟೇಲ್ 2 ಚಿತ್ರದಲ್ಲಿ ಮಿಲನಾ ಕಾಣದಿದ್ದರೂ ಅವರ ಧ್ವನಿ ಕೇಳುವ ಸಾಧ್ಯತೆ ಇದೆ. ಈಗಾಗಲೇ ಒಂದು ಹಾಡನ್ನ ಬಿಟ್ಟು ಇಂಪ್ರೇಸ್ ಮಾಡಿರೋ ಲವ್ ಮಾಕ್ಟೇಲ್ 2 ಸಿನಿಮಾ ತಂಡ ಮತ್ತೊಂದು ಹಾಡನ್ನ ಹೊರ ಬಿಡೋ ಸೂಚನೆ ಕೊಡ್ತಿದೆ.

blank

ನಕುಲ್ ಅಭಯಂಕರ್ ಸಂಗೀತ ಸಂಯೋಜನೆಯಲ್ಲಿ ಲವ್ ಮಾಕ್ಟೇಲ್ 2 ಸಿನಿಮಾದ ಹಾಡುಗಳು ಮೂಡಿ ಬರುತ್ತಿದೆ. ಲವ್ ಮಾಕ್ಟೇಲ್ ಟು ತಂಡ ಒಂದು ವಿಡಿಯೋ ಒಂದನ್ನ ಹೊರ ಬಿಟ್ಟಿದೆ. ಈ ವಿಡಿಯೋದಲ್ಲಿ ನಟಿ ಕಮ್ ನಿರ್ಮಾಪಕಿ ಮಿಲನಾ ನಾಗರಾಜ್ ಹಾಡಿದ್ದಾರೆ. ಸಂಗೀತ ನಿರ್ದೇಶಕ ಮಾರ್ಗ ದರ್ಶನದಲ್ಲಿ ಪ್ರಿಯತಮ ಕೃಷ್ಣ ಅವರ ಪ್ರೋತ್ಸಾಹದಲ್ಲಿ ಮಿಲನಾ ನಾಗರಾಜ್ ಹಾಡಿದ್ದಾರೆ.

blank

ಮಿಲನಾ ನಾಗರಾಜ್ ನಿಜಕ್ಕೂ ಸಿನಿಮಾದಲ್ಲಿ ಹಾಡಿದ್ದಾರಾ? ಈ ವಿಡಿಯೋ ನೋಡ್ತಿದ್ರೆ ಯಾವುದೋ ಬಿಜಿಎಮ್​​ ಕೋರಸ್​​ಗಾಗಿ ಹಾಡ್ತಿರೋಂಗೆ ಕಾಣುತ್ತಿದೆ.. ಈ ಬಗ್ಗೆ ಲವ್ ಮಾಕ್ಟೇಲ್ ಜೋಡಿಯೇ ಉತ್ತರ ಕೊಡುತ್ತಾ ಕಾದು ನೋಡಬೇಕು.. ಲವ್ ಮಾಕ್ಟೇಲ್ 2 ಸಿನಿಮಾ ರಿಲೀಸ್​​ಗೆ ಸಿದ್ಧವಾಗುತ್ತಿದ್ದು ಚಿತ್ರರಂಗಕ್ಕೆ ಒಳ್ಳೆದಿನ ಬಂದ ನಂತರದ ದಿನಗಳಲ್ಲಿ ಲವ್ ಮಾಕ್ಟೇಲ್ 2 ಸಿನಿಮಾ ತೆರೆಕಾಣಲಿದೆ.

Source: newsfirstlive.com Source link