‘ಚಿರು ನಮಗೆ ಯಾವತ್ತೂ ರಾಜಾನೇ, ‘ರಾಯನ್’​ ಯುವರಾಜ’- ಮೇಘನಾ ರಾಜ್

‘ಚಿರು ನಮಗೆ ಯಾವತ್ತೂ ರಾಜಾನೇ, ‘ರಾಯನ್’​ ಯುವರಾಜ’- ಮೇಘನಾ ರಾಜ್

ನಟಿ ಮೇಘನಾ ರಾಜ್​, ಜಿರಂಜೀವಿ ಸರ್ಜಾ ಪುತ್ರನಿಗೆ ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಿದ್ದಾರೆ. ಕಳೆದ 10 ತಿಂಗಳಿಂದ ಜ್ಯೂನಿಯರ್​ ಚಿರು ಎಂದೇ ಕರೆಯುತ್ತಿದ್ದ ಕುಟುಂಬಸ್ಥರು ನಿನ್ನೆ ಬೆಂಗಳೂರಿನ ಚಾನ್ಸರಿ ಪೆವಿಲಿಯನ್ ಹೋಟೆಲ್​​​ನಲ್ಲಿ ಅದ್ಧೂರಿಯಾಗಿ ನಾಮಕರಣ ಕಾರ್ಯಕ್ರಮ ನೆರವೇರಿಸಿದ್ದಾರೆ.

ನಾಮಕರಣ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮೇಘನಾ ರಾಜ್​, ಎಲ್ಲರು ಹಲವಾರು ದಿನಗಳಿಂದ ಕೇಳ್ತಿದ್ರು, ಮಗುವಿಗೆ ಹೆಸರು ಯಾವಾಗಾ ಇಡ್ತೀರಾ, ಏನಂತ ಇಡ್ತೀರಾ ಎಂದು. ಆದರೆ ಆ ಸಮಯದಲ್ಲಿ ನನಗೆ ಏನು ಹೆಸರು ಇಡ್ಬೇಕು ಅಂತ ಗೊತ್ತಿರಲಿಲ್ಲ. ಆದರೆ ನನ್ನ ಮನಸಲ್ಲಿ ಒಂದು ಹೆಸರಿತ್ತು ಅದುವೇ ‘ರಾಯನ್​’.

ರಾಯನ್​ ಅಂದ್ರೆ ಯುವರಾಜ ಎಂದರ್ಥ ಎಂದು ವಿವರಿಸಿದ ಅವರು ಚಿರು ನಮಗೆ ಯಾವತ್ತೂ ರಾಜಾನೇ, ಹೀಗಾಗಿ ಮಗನಿಗೆ ನಾವು ರಾಯನ್​ ಅಂತ ಹೆಸರಿಡುವುದಾಗಿ ಕಂಟುಂಬದವರು ನಿರ್ಧರಿಸಿದೆವು ಎಂದರು.

Source: newsfirstlive.com Source link