‘ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ’ವೆಂದು ಶೋಭಾ ಕರಂದ್ಲಾಜೆ ಮುಂದೆ ಗಳಗಳನೇ ಅತ್ತ  ಕಾರ್ಯಕರ್ತೆ

‘ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ’ವೆಂದು ಶೋಭಾ ಕರಂದ್ಲಾಜೆ ಮುಂದೆ ಗಳಗಳನೇ ಅತ್ತ  ಕಾರ್ಯಕರ್ತೆ

ಕಲಬುರಗಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಎದುರಿಗೆ ಬಿಜೆಪಿ ಮಹಿಳಾ ಕಾರ್ಯಕರ್ತೆಯೊಬ್ಬರು ಕಣ್ಣೀರು ಹಾಕಿದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪಕ್ಷದಲ್ಲಿ ಸೂಕ್ತ ಸ್ಥಾನ ಕೊಡದಿದ್ದಕ್ಕೆ ಸಾವಿತ್ರಿ ಕುಳಗೇರಿ ಶೋಭಾ ಕರಂದ್ಲಾಜೆ ಮುಂದೆ ಕಣ್ಣೀರು ಇಟ್ಟಿದ್ದಾರೆ. ಸಾವಿತ್ರಿ ಕುಳಗೇರಿ ಬಿಜೆಪಿ ರಾಜ್ಯ ಮಹಿಳಾ ಕಾರ್ಯಕಾರಣಿ ಸದಸ್ಯೆಯಾಗಿದ್ದಾರೆ. 25 ವರ್ಷಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತೆಯಾಗಿ ಪಕ್ಷಕ್ಕೆ ಕೆಲಸ ಮಾಡಿದ್ದೇನೆ. ಈ ಬಾರಿ ನಡೆದ ಪಾಲಿಕೆ ಚುನಾವಣೆಯಲ್ಲಿ ವಾರ್ಡ್ ಸಂಖ್ಯೆ 31ರಲ್ಲಿ ಬಿಜೆಪಿ ಟಿಕೆಟ್ ಕೇಳಿದ್ದೆ. ನಿಷ್ಠಾವಂತ ಕಾರ್ಯಕರ್ತರಿಗೆ ಗುರುತಿಸದೇ, ನಿನ್ನೆ-ಮೊನ್ನೆ ಬಂದವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ ಅಂತಾ ಅಸಮಾಧಾನ ಹೊರ ಹಾಕಿದರು.

ಪಕ್ಷದ ಪ್ರಮುಖರು ನನಗೆ ಮುಂಬರುವ ದಿನಗಳಲ್ಲಿ ಸೂಕ್ತ ಸ್ಥಾನ ಕೊಡುವುದಾಗಿ ಬರವಸೆ ನೀಡಿದ್ದಾರೆ. ಪಕ್ಷದಲ್ಲೆ ಇದ್ದು ಸಾಮಾನ್ಯ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತೇನೆ. ಇಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಜಿಲ್ಲೆಯ ಪಕ್ಷದ ಕಚೇರಿಗೆ ಭೇಟಿ ನೀಡಿದರು. ಈ ವೇಳೆ ಸಚಿವರು ಕಾರ್ಯಕರ್ತರ ಸಭೆ ಮುಗಿಸಿ ಹೋಗುವಾಗ ಶೋಭಾ ಮುಂದೆ ಕಣ್ಣೀರು ಇಟ್ಟಿದ್ದಾರೆ.

Source: newsfirstlive.com Source link